Bengaluru City

ಮತ್ತೆ ಒಂದಾದ ‘ಮುಂಗಾರು ಮಳೆ’ ಚಿತ್ರತಂಡ

Published

on

Share this

ಬೆಂಗಳೂರು: ‘ಮುಂಗಾರು ಮಳೆ’ ಚಂದನವನದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ಸಿನಿಮಾ. ಈಗ ಈ ಚಿತ್ರತಂಡ ಮತ್ತೆ ಒಂದಾಗಿದೆ.

ಏನಿದು ಇವರು ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ ಅಂದುಕೊಂಡ್ರಾ! ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಈ ಮುಂಗಾರು ಮಳೆಯಲ್ಲಿ ಇಷ್ಟೊಂದು ಬೆಂಕಿ ಇದೆ ಎಂದು ಗೊತ್ತಿರಲಿಲ್ಲ ಕಣೋ ದೇವದಾಸ. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ!! ಎಂದು ಬರೆದು ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಮುಂಗಾರು ಮಳೆ ಚಿತ್ರತಂಡ ಭೇಟಿಯಾಗಿದ್ದು, ಆ ವೇಳೆ ತೆಗೆದ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದ್ದಾರೆ. ಈ ಫೋಟೋವನ್ನು ಗಣೇಶ್ ಅವರು ಮಾತ್ರವಲ್ಲ ಛಾಯಾಗ್ರಾಹಕ ಮತ್ತು ನಿರ್ದೇಶಕ ಎಸ್.ಕೃಷ್ಣ ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್

ಈ ಫೋಟೋದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಸಾಹಿತಿ ಜಯಂತ್ ಕಾಯ್ಕಿಣಿ, ನಿರ್ದೇಶಕ ಪ್ರೀತಮ್ ಗುಬ್ಬಿ, ಎಸ್.ಕೃಷ್ಣ ಹಾಗೂ ರಾಘವೇಂದ್ರ ಹುಣಸೂರ್ ಇದ್ದಾರೆ. ಈ ತಂಡ ಶನಿವಾರ ಭೇಟಿಯಾಗಿದ್ದು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಈ ತಂಡದಿಂದ ಹೊಸ ಸುದ್ದಿ ಏನಾದರು ಬರುತ್ತೆ ಅಂದುಕೊಂಡಿದ್ದರು. ಮತ್ತೆ ಇವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರಾ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ :ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

‘ಮುಂಗಾರು ಮಳೆ’ ಸಿನಿಮಾ 2006ರಲ್ಲಿ ತೆರೆಕಂಡಿದ್ದು, ಈ ಚಿತ್ರ ಗಣೇಶ್ ಮತ್ತು ಪೂಜಾ ಗಾಂಧಿಗೆ ಮಾತ್ರವಲ್ಲ ಇಡೀ ಚಿತ್ರತಂಡಕ್ಕೆ ಹೆಸರು ತಂದುಕೊಟ್ಟಿತ್ತು. ಕನ್ನಡ ಚಿತ್ರರಂಗದಲ್ಲೇ ಹೊಸದೊಂದು ಅಲೆ ಎಬ್ಬಿಸಿತ್ತು. ನಂತರ ಈ ಸಿನಿಮಾ ಹಲವು ಭಾಷೆಗಳಿಗೂ ರಿಮೇಕ್ ಆಗಿತ್ತು. 2016ರಲ್ಲಿ ‘ಮುಂಗಾರು ಮಳೆ-2’ ಸಿನಿಮಾ ರಿಲೀಸ್ ಆಗಿದ್ದು, ಆದರೆ ಹಳೆಯ ಸಿನಿಮಾದಂತೆ ಇದು ಹೆಸರು ಮಾಡಲಿಲ್ಲ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications