ಟಾಲಿವುಡ್‌ನ(Tollywood) ಬೆಸ್ಟ್ ಜೋಡಿಯಾಗಿರುವ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ವಿಜಯ್ ಒಂದಾಗ್ತಿದ್ದಾರೆ. `ಗೀತಾ ಗೋವಿಂದಂ’ ಸಿನಿಮಾದ ಹಿಟ್ ಜೋಡಿ ಮತ್ತೆ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಈ ಜೋಡಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
`ಗೀತಾ ಗೋವಿಂದಂ’ ಸಿನಿಮಾ ಮೂಲಕ ಟಿಟೌನ್‌ನಲ್ಲಿ ಮೋಡಿ ಮಾಡಿದ್ದ ವಿಜಯ್, ರಶ್ಮಿಕಾ ಜೋಡಿ ಮತ್ತೆ ತೆರೆಯ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. `ಲೈಗರ್’ (Liger) ಸೋಲಿನಿಂದ ತತ್ತರಿಸಿರುವ ವಿಜಯ್‌ಗೆ ಮತ್ತೆ ರಶ್ಮಿಕಾ ಮತ್ತೆ ಸಾಥ್ ನೀಡಿದ್ದಾರೆ.

`ಲೈಗರ್’ ಸೋಲಿನ ಬೇಜಾರಿನಲ್ಲಿದ್ದ ವಿಜಯ್‌ಗೆ ರಶ್ಮಿಕಾ ಜೊತೆಯಾಗಿ ಇತ್ತೀಚೆಗಷ್ಟೇ ಮಾಲ್ಡೀವ್ಸ್‌ಗೆ ಕೂಡ ತೆರಳಿದ್ದರು. ಇಬ್ಬರ ಡೇಟಿಂಗ್ ವಿಚಾರ ಒಂದ್ ಕಡೆ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಹೊಸ ಪ್ರಾಜೆಕ್ಟ್ ವಿಷ್ಯ ಕೂಡ ಅಷ್ಟೇ ಚರ್ಚೆ ನಡೆಯುತ್ತಿದೆ. ಒಟ್ನಲ್ಲಿ ನೆಚ್ಚಿನ ಜೋಡಿಯನ್ನ ಫ್ಯಾನ್ಸ್ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ.



