ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅಭಿಮಾನಿಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಕ್ಕಿದೆ.
2016ರಲ್ಲಿ ತೆರೆಕಂಡ ಶಾರುಖ್ ಖಾನ್ ‘ಫ್ಯಾನ್’ ಸಿನಿಮಾದ ಟ್ರೈಲರ್ ನೋಡಿಕೊಂಡು ಮಹಾರಾಷ್ಟ್ರ ಮೂಲದ ಶಾರುಖ್ ಅಭಿಮಾನಿ ಶಿಕ್ಷಕಿ ಅಫ್ರಿನ್ ಫಾತಿಮಾ ಜೈದಿ ಮತ್ತು ಅವರ ಮಕ್ಕಳು ಸಿನಿಮಾಗೆ ಹೋಗಿದ್ದರು. ಆದರೆ ಟ್ರೈಲರ್ ನಲ್ಲಿ ನೋಡಿದ ಗೀತೆಯನ್ನು ಸಿನಿಮಾದಲ್ಲಿ ತೆಗೆದುಹಾಕಲಾಗಿತ್ತು. ಈ ಹಿನ್ನೆಲೆ ಫಾತಿಮಾಗೆ ನಿರಾಸೆಯಾಗಿದ್ದು, ಕೋಪಗೊಂಡಿದ್ದರು. ಇದನ್ನೂ ಓದಿ: ಪ್ರಥಮ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ನಟ ಅಜಯ್ ರಾವ್
Advertisement
ಹಾಡನ್ನು ತೆಗೆದ ವಿಚಾರವನ್ನು ಪ್ರಶ್ನಿಸಿ ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ‘ಫ್ಯಾನ್’ ಸಿನಿಮಾ ನಿರ್ಮಾಣ ಮಾಡಿದ್ದ ಯಶ್ ರಾಜ್ ಫಿಲಂಸ್ ಮೇಲೆ 10 ಸಾವಿರ ರೂ. ಹಾಗೂ ಸಿನಿಮಾ ನೋಡಲು ಖರ್ಚು ಮಾಡಿದ್ದ 5 ಸಾವಿರ ರೂ. ಸೇರಿ ಒಟ್ಟು 15 ಸಾವಿರ ರೂ. ನೀಡಬೇಕು ಎಂದು ಗ್ರಾಹಕರ ವೇದಿಕೆ ಸೂಚಿಸಿತ್ತು. ಈ ಆದೇಶವನ್ನು ನಿರ್ಮಾಣ ಸಂಸ್ಥೆ ಪ್ರಶ್ನಿಸಿ 2017ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ
Advertisement
ಟ್ರೈಲರ್ ನಲ್ಲಿ ಒಂದು ತೋರಿಸಿ ಸಿನಿಮಾದಲ್ಲಿ ಬೇರೆ ತೋರಿಸಿದ್ದಾರೆ. ಇದರಿಂದ ನಮಗೆ ಹಣ ಮತ್ತು ಸಮಯ ಎರಡು ವ್ಯರ್ಥವಾಗಿದೆ ಎಂಬ ಶಾರುಖ್ ಅಭಿಮಾನಿ ಫಾತಿಮಾ ಅವರ ವಾದವನ್ನು ಕೋರ್ಟ್ ಪುರಸ್ಕರಿಸಿದೆ. ನಿರ್ಮಾಣ ಸಂಸ್ಥೆ ಫಾತಿಮಾ ಅವರಿಗೆ ಹಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
Advertisement