ಚೆನ್ನೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ಕನಸನ್ನು ನನಸು ಮಾಡಿಕೊಂಡಿರುವ ವಿಷಯವನ್ನು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.
Advertisement
ಏನಿದು ಕನಸು?
ವಿಜಯ್ ಟ್ವಿಟ್ಟರ್‍ನಲ್ಲಿ, ನಟನಾಗುವ ಕನಸು ಕಂಡು ಬಂದಿದ್ದ ನಾನು ಈಗ ‘ಮಲ್ಟಿಪ್ಲೆಕ್ಸ್’ಗೆ ಬಡೆಯನಾಗಿದ್ದೇನೆ. ‘ಏಷ್ಯನ್ ವಿಜಯ್ ದೇವರಕೊಂಡ ಚಿತ್ರಮಂದಿರವನ್ನು(ಎವಿಡಿ) ಇಂದು ನಾನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ಮಹಬೂಬ್ ನಗರದಲ್ಲಿ ಇದು ಮೊದಲ ಎವಿಡಿ ಯಾಗಿದ್ದು, ಸೆ.24ರಿಂದ ಪ್ರಾರಂಭವಾಗುತ್ತೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ನಾಗವಲ್ಲಿಯಾಗ್ತಾಳಾ ಸ್ವೀಟಿ?
Advertisement
From dreaming of becoming an Actor to now owning my own Multiplex Cinema ????
I share with you all,
Asian Vijay Deverakonda cinemas ????
The 1st AVD will officially open in Mahbubnagar, from September 24th 2021. https://t.co/rv5l22B16U
— Vijay Deverakonda (@TheDeverakonda) September 19, 2021
Advertisement
ಸೆಪ್ಟೆಂಬರ್ 24 ರಂದು ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾವನ್ನು ಎವಿಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಆ ಸಿನಿಮಾಗೆ ವಿಜಯ್ ಶುಭಕೋರಿದ್ದಾರೆ. ಇದನ್ನೂ ಓದಿ: ಪೂಜಾ ಮೇಲೆ ಮುನಿಸಿಕೊಂಡ್ರಾ ಬಾಹುಬಲಿ?