Bellary

ಪ್ರಥಮ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ನಟ ಅಜಯ್ ರಾವ್

Published

on

Share this

ವಿಜಯನಗರ: ಅಪಘಾತವಾದ ಗಾಯಾಳುಗಳಿಗೆ ಸ್ಯಾಂಡಲ್‍ವುಡ್ ನಟ ಅಜಯ್ ರಾವ್ ಪ್ರಥಮ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹೊಸಪೇಟೆಯಿಂದ ಬೆಂಗಳೂರಿಗೆ ಅಜಯ್ ರಾವ್ ಹೊರಟಿದ್ದರು. ಈ ವೇಳೆ ಮೈಸೂರಿನಿಂದ ಹೊಸಪೇಟೆಗೆ ಬರುರ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ50ರಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ:  ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ

ಅಪಘಾತವಾದ ಕಾರ್‍ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು, ಇದನ್ನು ಗಮನಿಸಿದ ಅಜಯ್ ರಾವ್ ತಮ್ಮ ಕಾರ್‌ನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ತಂದು ಮೆಡಿಕಲ್ ವಸ್ತುಗಳನ್ನು ಬಳಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕಾನಾಹೊಸಳ್ಳಿಯ ರಾ.ಹೆ.50 ರ ಸಾರ್ವಜನಿಕರು, ಪಿಎಸ್‍ಐ ಸಹಾಯಕ್ಕೆ ಧಾವಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement