DharwadDistrictsKarnatakaLatestMain Post

ಪತ್ನಿ ಜೊತೆ ಲಕ್ಕಿ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಹೊರಟ್ಟಿ

Advertisements

ಧಾರವಾಡ: ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಪತ್ನಿ ಹೇಮಲತಾ ಜೊತೆ ತಮ್ಮ ಲಕ್ಕಿ ಕಾರ್ ಅಂಬಾಸಿಡರ್‌ ಅಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಒಂದು ಸೆಟ್ ನಾಮಪತ್ರ ಪತ್ನಿ ಜೊತೆ ಹಾಗೂ ಮತ್ತೊಂದು ಸೆಟ್ ನಾಮಪತ್ರ ತಮ್ಮ ಆಪ್ತರ ಜೊತೆಯಲ್ಲಿ ಸಲ್ಲಿಸಿದರು. ಈ ವೇಳೆ ಪತ್ನಿ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ ಬಗ್ಗೆ ಕೇಳಿದ್ದಕ್ಕೆ ಭಾವುಕರಾದ ಅವರ ಕಣ್ಣಿನಲ್ಲಿ ನೀರು ತುಂಬಿ ಬಂತು.

ಈ ವೇಳೆ ಮಾತನಾಡಿದ ಅವರು, ಎರಡು ಸೆಟ್‍ನಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಎರಡೂ ಸೆಟ್ ನಾಮಪತ್ರ ಸ್ವೀಕಾರ ಆಗಿವೆ. ಇನ್ನು ಮೇ 26ಕ್ಕೆ ಸಿಎಂ, ಪ್ರಹ್ಲಾದ ಜೋಶಿ ಸೇರಿ ಅನೇಕ ನಾಯಕರು ಬರುತ್ತಾರೆ. ಆಗ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ

ದೇಶದಲ್ಲಿ ಯಾರೂ ಏಳು ಬಾರಿ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಆದರೆ ನಾನು 8ನೇ ಗೆಲುವು ಸಾಧಿಸಿದರೆ ದಾಖಲೆ ಆಗುತ್ತದೆ. ಆ ದಾಖಲೆ ಆಗಬೇಕು ಎಂದೇ ಎಲ್ಲರೂ ನಮ್ಮ ಕಡೆ ಒಲವು ತೋರಿಸಿದ್ದಾರೆ ಎಂದರು.

ಅಂಬಾಸಿಡರ್‌ ಅಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ ಬಗ್ಗೆ ಮಾತನಾಡಿದ ಅವರು, ಅದೆನೋ ಒಂದು ಭಾವನಾತ್ಮಕ ಸಂಬಂಧ, ನನಗೆ ಈ ಕಾರ್ ಮೇಲೆ ಬಹಳ ಪ್ರೀತಿ, ಆ ಪ್ರೀತಿಗಾಗಿ ತೆಗೆದುಕೊಂಡು ಬಂದಿದ್ದೇನೆ. ಈಗಾಗಲೇ ಅದು 8 ಲಕ್ಷ ಕಿ.ಮೀ ಓಡಿದೆ, ಎಲ್ಲರಿಗೂ CNB 5757 ಅಂದರೆ ಪರಿಚಯ ಎಂದ ಅವರು, ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಿದ್ದರು. ಕುಟುಂಬಕ್ಕೆ ಅದನ್ನ ಉಪಯೋಗ ಮಾಡುತ್ತೇವೆ. ಶುಭ ಕಾರ್ಯಕ್ಕೆ ಈ ಕಾರ್ ಒಳ್ಳೆಯದು ಎಂದು ತಲೆಯಲ್ಲಿದ್ದು, ಹೀಗಾಗಿ ಆ ಕಾರು ಬಳಸುತ್ತೇವೆ ಎಂದರು. ಇದನ್ನೂ ಓದಿ: ಆದಷ್ಟು ಬೇಗ ಮಂಗಳಮುಖಿ ಸರ್ಕಾರ ತೆಗೆಯಬೇಕು: ಸಿಎಂ ಇಬ್ರಾಹಿಂ

Leave a Reply

Your email address will not be published.

Back to top button