Bengaluru CityDistrictsKarnatakaLatestMain Post

ಆದಷ್ಟು ಬೇಗ ಮಂಗಳಮುಖಿ ಸರ್ಕಾರ ತೆಗೆಯಬೇಕು: ಸಿಎಂ ಇಬ್ರಾಹಿಂ

ಬೆಂಗಳೂರು: 2023ಕ್ಕೆ ಈ ಮಂಗಳಮುಖಿ ಸರ್ಕಾರ ತೆಗೆಯಬೇಕಿದೆ. ಏಕೆಂದರೆ ಗಂಡಸೂ ಅಲ್ಲ, ಹೆಂಗಸೂ ಅಲ್ಲದ ಸರ್ಕಾರ ಇದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಸರ್ಕಾರವನ್ನು ತರುವುದು ನಮ್ಮ ಗುರಿಯಾಗಿದೆ. ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರ ತೆಗೆಯಬೇಕು. ಈ ಸರ್ಕಾರದ ಜೊತೆಗೆ ಹೋರಾಡಲು ಆಗಲ್ಲ, ಸುಮ್ಮನಿರಲು ಆಗಲ್ಲ ಎಂದು ವ್ಯಂಗ್ಯವಾಡಿದರು.

ಈ ಸರ್ಕಾರವು ಹೆಂಗಸರಾದರೆ ಹೆಂಗಸರನ್ನು ಕಳಿಸಬಹುದು. ಗಂಡಸರಾದರೆ ಗಂಡಸರನ್ನು ಕಳಿಸಬಹುದು. ಆದರೆ ಇವರು ಎರಡೂ ಅಲ್ಲ, ಭಾಷಾ ಅಂತ ಚಪ್ಪಾಳೆ ತಟ್ಟಿಬಿಡ್ತಾರೆ. ಏನಾದರೂ ಆರೋಪ ಮಾಡಿದರೆ ಕಿಸಿಕ್ ಅಂತ ನಗುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ

ಇದೇ ವೇಳೆ ವಿಧಾನ ಪರಿಷ್ ಸ್ಥಾನಕ್ಕೆ ಟಿಕೆಟ್ ಸಿಗದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ತೋರಿಸಬೇಕು. ಬಡಿಸೋ ಜಾಗದಲ್ಲಿ ಇದ್ದು ನಾವೇ ಊಟ ಮಾಡೋಕೆ ಕೂತರೆ ಹೆಂಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಬಿಎಂಪಿ ಎಡವಟ್ಟು- ಕಾಮಗಾರಿ ವೇಳೆ ಕಾಂಕ್ರೀಟ್ ಕುಸಿದು 8 ಮಂದಿಗೆ ಗಾಯ

Leave a Reply

Your email address will not be published.

Back to top button