ಬೆಂಗಳೂರು: ನಾನು ಪಿಎಸ್‍ಐಗೆ ಆಯ್ಕೆಯಾಗಲು 75 ಲಕ್ಷ ಕೊಟ್ಟಿದ್ದೀನಿ ಅಂತ ಅಭ್ಯರ್ಥಿಯೊಬ್ಬ ಡಿಜಿ ಕಚೇರಿಗೆ ಪತ್ರ ಬರೆದಿದ್ದಾನೆ. ಅಲ್ಲದೆ ಲಂಚ ನೀಡಿದ ಅಭ್ಯರ್ಥಿಯೇ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾನೆ.
Advertisement
ಹೌದು. ದಿನಾ ಬೆಳಗಾದ್ರೆ ಪಿಎಸ್‍ಐ ಅಕ್ರಮ ಕೇಸ್‍ನಲ್ಲಿ ಒಂದಿಲ್ಲೊಂದು ಬೆಳವಣಿಗೆ ನಡೀತಾನೇ ಇದೆ. ದಿನಕ್ಕೊಬ್ಬ ಅಧಿಕಾರಿ ಅರೆಸ್ಟ್ ಆಗ್ತಾನೇ ಇದ್ದಾರೆ. ಆದರೆ ಇಲ್ಲೊಂದು ಅಚ್ಚರಿ ಬೆಳವಣಿಗೆ ನಡೆದಿದೆ. ಪಿಎಸ್‍ಐ ಆಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬ ಡಿಜಿ & ಐಜಿಪಿ ಪ್ರವೀಣ್ ಸೂಧ್‍ಗೆ ಒಂದು ಪತ್ರ ಬರೆದಿದ್ದಾರೆ. ನಾನೂ ಅಕ್ರಮದಲ್ಲಿ ಭಾಗಿಯಾಗಿದ್ದೀನಿ. ತನಿಖೆಗೆ ಸಿದ್ಧ ಅಂತ ತಿಳಿಸಿದ್ದಾರೆ.
Advertisement
Advertisement
ಪತ್ರದಲ್ಲಿ ಅಕ್ರಮದ ಬಗ್ಗೆ ಸಾಕ್ಷಿ ಸಮೇತ ಕಂಪ್ಲೀಟ್ ಮಾಹಿತಿ ನೀಡಿದ್ದಾರೆ. ನಾನು ವಿಜಯನಗರದ ಪ್ರಿನ್ಸಿಪಾಲ್ ಒಬ್ಬರಿಗೆ 75 ಲಕ್ಷ ಹಣ ನೀಡಿದ್ದೀನಿ. ಬ್ಲೂಟೂತ್ ಬಳಸಿ ಎಕ್ಸಾಂನಲ್ಲಿ ಪಾಸ್ ಆಗಿದ್ದೇನೆ. ಈಗ ನನಗೆ ಮಾಡಿದ್ದು ತಪ್ಪು ಅನಿಸಿದೆ. ಹಾಗಾಗಿ ನಾನು ತನಿಖೆಗೆ ಒಳಗಾಗುತ್ತೇನೆ. ಅಲ್ಲದೇ ಪ್ರಿನ್ಸಿಪಾಲ್ ಒಬ್ಬರ ಜೊತೆ ವಾಟ್ಸಾಪ್ ಚಾಟ್ ಮಾಡಿದ್ದು ಕೂಡ ನಿಮಗೆ ಕಳುಹಿಸಿ ಕೊಟ್ಟಿದ್ದೀನಿ. ಅಕ್ರಮ ಮಾಡಿದ ಆರೋಪಿ ಬಂಧಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.
Advertisement
ವಾಟ್ಸಾಪ್ ಚಾಟ್‍ನಲ್ಲಿ ಪಿಎಸ್‍ಐ ಡೀಲ್ ಖುಲ್ಲಂ ಖುಲ್ಲಾ: ಡಿಜಿಪಿಗೆ ಪತ್ರ ಬರೆದಿರುವ ಅನಾಮಧೇಯ ತನ್ನ ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್‍ಗಳನ್ನು ಟ್ಯಾಗ್ ಮಾಡಿದ್ದಾರೆ. ಯಾವಾಗ ಯಾರನ್ನ ಭೇಟಿ ಮಾಡಿದ್ದೆ..? ಎಲ್ಲಿ ಹಣ ನೀಡಬೇಕು..? ಯಾರು ಹಣ ತೆಗೆದುಕೊಂಡು ಹೋಗ್ತಾರೆ…? ಬ್ಲೂಟೂತ್ ಹೇಗೆ ಬಳಸಬೇಕು…? ಎಂಬುದನ್ನೆಲ್ಲಾ ಚಾಟ್ ಮಾಡಿದ್ದಾನೆ. ಚಾಟಿಂಗ್‍ನಲ್ಲಿ ಒಂದಿಷ್ಟು ಸತ್ಯಾಂಶಗಳು ಕೂಡ ಇದ್ದು ಪತ್ರದ ಬಗ್ಗೆ ಕುತೂಹಲ ಮೂಡಿದೆ.
ಪತ್ರ ಬರೆದವರ ಬೆನ್ನು ಬಿದ್ದ ಸಿಐಡಿ: ಈಗಾಗಲೇ ಸಿಐಡಿ ಅಧಿಕಾರಿಗಳು ಪತ್ರದ ತನಿಖೆ ಆರಂಭಿಸಿದ್ದಾರೆ. ಆದರೆ ಯುವಕ ತನ್ನ ಫೋನ್ ನಂಬರ್, ವಿಳಾಸ ಸುಳ್ಳು ಹೇಳಿರೋದು ತನಿಖೆಯಲ್ಲಿ ಗೊತ್ತಾಗಿದೆ. ಆದರೂ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಒಂದು ದಿಕ್ಕಿನಲ್ಲಿ ಸಾಗುತ್ತಾ ಇದ್ದ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದ್ದು ಅಭ್ಯರ್ಥಿ ಒಬ್ಬ ಬರೆದ ಪತ್ರಕ್ಕೆ ಸಿಐಡಿ ಬಳಿ ಸಾಕ್ಷ್ಯ ಸಿಗುತ್ತಾ..? ಹಾಗೆಯೇ ಪ್ರಿನ್ಸಿಪಾಲ್ ವಿಚಾರಣೆ ನಡೆಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.