ದಿಸ್ಪುರ್: ಮಕ್ಕಳಿಗೆ ತಿದ್ದಿ, ಬುದ್ದಿ ಹೇಳಬೇಕಾದ ಶಿಕ್ಷಕನೇ ಮಚ್ಚನ್ನು ಹಿಡಿದುಕೊಂಡು ಶಾಲೆ ಆವರಣದಲ್ಲಿ ಓಡಾಡಿರುವ ಘಟನೆ ಅಸ್ಸಾಂನ (Assam) ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ.
ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ 38 ವರ್ಷದ ಧೃತಿಮೇಧ ದಾಸ್ ಶಾಲೆಗೆ ಮಚ್ಚನ್ನು ಹಿಡಿದುಕೊಂಡು ಬಂದಿದ್ದನು. ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮತ್ತು ಶಿಕ್ಷಣ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧಿಸದಿದ್ರೆ ಹೆಣ್ಮಕ್ಕಳು ಧರಣಿಗೆ ಕೂರ್ತಿವಿ ಅಂದಿದ್ದಾರೆ: ಸಿದ್ದರಾಮಯ್ಯ
Advertisement
Video Of Assam Teacher With Machete In School Goes Viral. He Is Suspended pic.twitter.com/kgu1vYWNJ1
— NDTV Videos (@ndtvvideos) November 7, 2022
Advertisement
ಧೃತಿಮೇಧ ದಾಸ್ ಅವರು ಸಿಲ್ಚಾರ್‌ನ ತಾರಾಪುರ ಪ್ರದೇಶದ ನಿವಾಸಿಯಾಗಿದ್ದು, ರಾಧಾಮಧಾಬ್ ಬುನಿಯಾಡಿ ಶಾಲೆಯಲ್ಲಿ 11 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಶನಿವಾರ ಶಾಲೆಗೆ ಶಿಕ್ಷಕ ಮಚ್ಚನ್ನು ಹಿಡಿದುಕೊಂಡು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿತ್ತು. ಇದನ್ನೂ ಓದಿ: ದೆಹಲಿ ರೇಪ್ ಕೇಸ್ – ಮರಣದಂಡನೆಗೆ ಗುರಿಯಾಗಿದ್ದ ಮೂವರನ್ನು ಖುಲಾಸೆಗೊಳಿಸಿದ ಸುಪ್ರೀಂ
Advertisement
Advertisement
ಇತರ ಶಿಕ್ಷಕರು ಮಾಡುತ್ತಿದ್ದ ಕಿರಿಕಿರಿಯಿಂದ ಕೋಪಗೊಂಡು, ಹತಾಶೆಗೊಂಡಿದ್ದ ಧೃತಿಮೇಧ ದಾಸ್ ಎಲ್ಲರಿಗೂ ಲಾಂಗ್ ತೋರಿಸಿ ಎಚ್ಚರಿಕೆ ನೀಡಲೆಂದು ಮಚ್ಚು ಹಿಡಿದುಕೊಂಡು ಶಾಲೆಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಧೃತಿಮೇಧ ದಾಸ್ ಅನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಆದರೆ ಇನ್ನೂ ಅಧಿಕೃತವಾಗಿ ಯಾವುದೇ ದೂರು ದಾಖಲಾಗದೇ ಇರುವುದರಿಂದ ಆತನನ್ನು ಬಂಧಿಸಲಾಗಿಲ್ಲ.