CrimeLatestLeading NewsMain PostNational

ದೆಹಲಿ ರೇಪ್ ಕೇಸ್ – ಮರಣದಂಡನೆಗೆ ಗುರಿಯಾಗಿದ್ದ ಮೂವರನ್ನು ಖುಲಾಸೆಗೊಳಿಸಿದ ಸುಪ್ರೀಂ

ನವದೆಹಲಿ: 2012ರಲ್ಲಿ ದೆಹಲಿಯ (NewDelhi) ಛಾವಾಲಾ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಮರಣದಂಡನೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ (Supreme Court)  ಖುಲಾಸೆಗೊಳಿಸಿದೆ.

court order law

2012ರಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಮೂವರು ಅಪರಾಧಿಗಳಿಗೆ (Victim) ಮರಣದಂಡನೆ ವಿಧಿಸಲಾಗಿತ್ತು. ಸಂತ್ರಸ್ತೆಯ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಗದ್ದೆಯೊಂದರಲ್ಲಿ ಪತ್ತೆಯಾಗಿತ್ತು. ಈ ವೇಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿ, ಕಾರಿನ ಉಪಕರಣಗಳು ಹಾಗೂ ಇತರ ವಸ್ತುಗಳಿಂದ ಹಲ್ಲೆ ನಡೆಸಿರುವುದು ಸಾಬೀತಾಗಿತ್ತು. ಕೇಸ್ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ (Delhi HighCourt) 2014 ಫ್ರೆಬ್ರವರಿ ನಲ್ಲಿ ಮೂವರನ್ನು ದೋಷಿ ಎಂದು ಘೋಷಿಸಿ, ವಿವಿಧ ಆರೋಪಗಳ ಅಡಿಯಲ್ಲಿ ಶಿಕ್ಷೆ ವಿಧಿಸಲು ಮುಂದಾಗಿತ್ತು. ಇದನ್ನೂ ಓದಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ – ತಿದ್ದುಪಡಿಯು ಸಂವಿಧಾನ ಬದ್ಧವಾಗಿದೆ: ಸುಪ್ರೀಂಕೋರ್ಟ್

2014ರ ಆಗಸ್ಟ್ 26ರಂದು ರಾಹುಲ್, ರವಿಕುಮಾರ್ ಹಾಗೂ ವಿನೋದ್ ಎಂಬ ಮೂವರು ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ಮರಣ ದಂಡನೆ ವಿಧಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಪ್ರಕರಣದಿಂದ (Supreme Court Case) ಅಪರಾಧಿಗಳನ್ನು ಖುಲಾಸೆಗೊಳಿಸಿದೆ. ಇದನ್ನೂ ಓದಿ: ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅಳಿವು-ಉಳಿವು- ಇಂದು ಸುಪ್ರೀಂನಲ್ಲಿ ನಿರ್ಧಾರ

ಏನಿದು ಪ್ರಕರಣ?
2012ರ ಫೆಬ್ರವರಿ ತಿಂಗಳಲ್ಲಿ ಹರ್ಯಾಣದಲ್ಲಿ ದೆಹಲಿ ಮೂಲದ 19 ವರ್ಷದ ಯುವತಿಯ ಶವ ಪತ್ತೆಯಾಗಿತ್ತು. ನಂತರ ಅದು ಅತ್ಯಾಚಾರ ಎಂಬುದು ಗೊತ್ತಾಯಿತು. ಅತ್ಯಾಚಾರಕ್ಕೆ ಒಳಗಾದ ನಂತರ ಆಕೆಯನ್ನು ಬರ್ಬರವಾಗಿ ಕೊಲ್ಲಲಾಗಿತ್ತು. ಈ ಸಂಬಂಧ ದೆಹಲಿಯ ಛಾವಾಲಾ (ನಜಾಫ್‌ಗಢ) ಪೊಲೀಸ್ ಠಾಣೆಯಲ್ಲಿ (Delhi Police Station) ಪ್ರಕರಣ ದಾಖಲಾಗಿತ್ತು. ಅಪರಾಧಿಗಳು ಮೊದಲು ಯುವತಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ್ದಾರೆ. ನಂತರ ಕೊಂದು ಶವವನ್ನು ಹರಿಯಾಣದ ರೇವಾರಿ ಜಿಲ್ಲೆಯ ರೋಧೈ ಗ್ರಾಮದ ಹೊಲದಲ್ಲಿ ಎಸೆದು ವಿಕೃತಿ ಮೆರೆದಿದ್ದರು.

Live Tv

Leave a Reply

Your email address will not be published. Required fields are marked *

Back to top button