ಮುಂಬೈ: ಸತತ 3 ದಿನಗಳಿಂದ ರೋಚಕತೆಯಿಂದ ಕೂಡಿದ್ದ 2023-27ರ ಅವಧಿಯ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.
Advertisement
ವಾಲ್ಟ್ ಡಿಸ್ನಿ (ಡಿಸ್ನಿಸ್ಟಾರ್) ಸಂಸ್ಥೆಯ ಐಪಿಎಲ್ ಟಿವಿ ಪ್ರಸಾರದ ಹಕ್ಕನ್ನು ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವದ ವಯಾಕಾಮ್18 ಸಂಸ್ಥೆಯು ಡಿಜಿಟಲ್ ಪ್ರಸಾರ ಹಕ್ಕನ್ನು ಪಡೆದುಕೊಂಡಿದೆ. ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯ 107.5 ಕೋಟಿ ಮೊತ್ತಕ್ಕೆ ಮಾರಾಟವಾಗಿದೆ. ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ
Advertisement
Advertisement
‘ಟಿವಿ ಪ್ರಸಾರ ಹಕ್ಕು (ಪ್ಯಾಕೇಜ್ ಎ) 23,575 ಕೋಟಿ ರೂ.ಗೆ ಮತ್ತು ಡಿಜಿಟಲ್ ಹಕ್ಕು (ಪ್ಯಾಕೇಜ್-ಬಿ) 20,500 ಕೋಟಿ ರೂ.ಗೆ ಹರಾಜಾಗಿದೆ. ಅಂದರೆ ಪ್ರತಿ ಪಂದ್ಯ ಕ್ರಮವಾಗಿ 57.5 ಹಾಗೂ 50 ಕೋಟಿಗೆ ಬಿಕರಿಯಾಗಿದೆ. ಟಿವಿ ಹಾಗೂ ಡಿಜಿಟಲ್ ಹಕ್ಕುಗಳ ಒಟ್ಟು ಮೌಲ್ಯ 48,390 ಕೋಟಿ ಆಗಿದೆ ಬಿಸಿಸಿಐ ತಿಳಿಸಿದೆ.