ಕನ್ನಡಕ್ಕೆ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದ ತಮಿಳು ಮೂಲದ ಖ್ಯಾತ ಸಂಗೀತ ನಿರ್ದೇಶಕ ದೇವ (ದೇವನೇಶನ್ ಚೊಕ್ಕಲಿಂಗಂ) ಅವರು ಇಂದು ನಿಧನರಾಗಿದ್ದಾರೆ.
75 ವರ್ಷದ ದೇವ (Devanesan Chokkalingam) ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡ ಹಾಗೂ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ ಮರೆಯಲಾಗದ ನೂರಾರು ಎವರ್ಗ್ರೀನ್ ಹಾಡುಗಳನ್ನು ಕೊಟ್ಟ ಖ್ಯಾತ ಸಂಗೀತ ನಿರ್ದೇಶಕ ದೇವ ಇಂದು ತಮ್ಮ ಸಂಗೀತ ಪಯಣವನ್ನು ನಿಲ್ಲಿಸಿದ್ದಾರೆ.
1950 ನವೆಂಬರ್ 20 ರಂದು ಜನಿಸಿದ ಇವರು, ಕಳೆದ ಮೂರೂವರೆ ದಶಕಗಳಿಂದ ತಮ್ಮ ಅದ್ಭುತ ಮ್ಯೂಸಿಕ್ ಮೂಲಕ ಕೋಟ್ಯಂತರ ಸಿನಿಮಾ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.
ಮೂಲತಃ ತಮಿಳಿನವರಾದರೂ ಕನ್ನಡ ಸಿನಿಮಾಗಳ ಜೊತೆ ದೇವ ಅವರದ್ದು ಹಾರ್ಟ್-ಟು-ಹಾರ್ಟ್ ಕನೆಕ್ಷನ್ ಇತ್ತು. ಸಾಹಸಸಿಂಹ ವಿಷ್ಣುವರ್ಧನ್, ಅಂಬರೀಶ್, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಹಾಗೂ ಉಪೇಂದ್ರ ಅವರಂತಹ ಕನ್ನಡದ ಟಾಪ್ ಸ್ಟಾರ್ ನಟರ ಚಿತ್ರಗಳಿಗೆ ಇವರು ಸೂಪರ್ ಹಿಟ್ ಮ್ಯೂಸಿಕ್ ಕೊಟ್ಟಿದ್ದಾರೆ.
ಕನ್ನಡದ ಎವರ್ಗ್ರೀನ್ ಸಿನಿಮಾಗಳಾದ ಅಮೃತವರ್ಷಿಣಿ, ಕೋಟಿಗೊಬ್ಬ, ಸೈನಿಕ, ಸಿಂಹಾದ್ರಿ ಸಿಂಹ, ರಾಜಾ ನರಸಿಂಹ, ಕದಂಬ, ವಿಷ್ಣು ಸೇನಾ ಹಾಗೂ ಒಲವೇ ಮಂದಾರ ಸಿನಿಮಾಗಳ ಸೂಪರ್ ಹಿಟ್ ಸಾಂಗ್ಸ್ ಹಿಂದಿದ್ದ ಶಕ್ತಿ ಇವರೇ ಎಂಬುದು ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಇದನ್ನೂ ಓದಿ: ಕುತೂಹಲ ಮೂಡಿಸುವ ಮಲ್ಟಿಸ್ಟಾರ್ ನಟನೆಯ ರಾಮರಸ ಟೀಸರ್
ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ 400ಕ್ಕೂ ಹೆಚ್ಚು ಸಿನಿಮಾಗಳಿಗೆ ಇವರು ಸಂಗೀತ ನೀಡಿದ್ದಾರೆ. ಇವರ ಮ್ಯೂಸಿಕ್ ಜರ್ನಿಯಲ್ಲಿ ಮತ್ತೊಂದು ಹೆಮ್ಮೆಯ ವಿಷಯ ಅಂದರೆ, ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಆರಂಭದ ದಿನಗಳಲ್ಲಿ ದೇವ ಅವರ ಗರಡಿಯಲ್ಲೇ ಬೆಳೆದವರು.
ಅಮೃತವರ್ಷಿಣಿ ಚಿತ್ರದ ʻಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನುʼ, ಕದಂಬ ಸಿನಿಮಾದ ʻಯಾಮಿನಿ ಯಾರಮ್ಮ ನೀನು ಯಾಮಿನಿʼ, ʻತಿಲ್ಲಾನ ತಿಲ್ಲನʼ, ʻಸಾಗರಿಯೇ ಸಾಗರಿಯೇʼ, ʻಕಲ್ಲಾದರೆ ನಾನುʼ, ‘ಮಲ್ನಾಡ್ ಅಡಿಕೆ’ ಇನ್ನೂ ಅನೇಕ ಹಾಡುಗಳ ಸೃಷ್ಟಿಕರ್ತರಿವರು.
ತಮ್ಮ ಸುಮಧುರ ಹಾಡುಗಳ ಮೂಲಕ ಸಿನಿರಂಗವನ್ನು ಆಳಿದ ಹಿರಿಯ ಸಂಗೀತ ನಿರ್ದೇಶಕ ದೇವ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗ ಕಂಬನಿ ಮಿಡಿದಿದೆ.ಇದನ್ನೂ ಓದಿ: ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾದ `ರಾಮಾಯಣ’: ಯಶ್- ರಣಬೀರ್ ಅಬ್ಬರದ ಎರಡನೇ ಟ್ರೇಲರ್ ಔಟ್
