ದಕ್ಷಿಣ ಭಾರತದ ಹೆಚ್ಚಿನ ಎಲ್ಲಾ ಅಡುಗೆಗಳಲ್ಲೂ ಕರಿಬೇವಿನ ಸೊಪ್ಪು ಬಳಸಿ ಒಗ್ಗರಣೆ ಹಾಕಲಾಗುತ್ತದೆ. ಅದಕ್ಕೆ ಯಾವುದೇ ಖಾದ್ಯದ ರುಚಿ ಹಾಗೂ ಸುವಾಸನೆಯನ್ನು ದುಪ್ಪಟ್ಟು ಮಾಡುವ ಶಕ್ತಿ ಇದೆ. ಇಂದು ನಾವು ಇದೇ ಕರಿಬೇವಿನ ಸೊಪ್ಪು ಬಳಸಿ ತುಂಬಾ ರುಚಿಕರವಾದ ಚಟ್ನಿ (Curry Leaves Chutney) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಕೂಡಾ ಇದನ್ನು ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಕರಿಬೇವಿನ ಸೊಪ್ಪು – 2 ಕಪ್
ತುರಿದ ತೆಂಗಿನಕಾಯಿ – 1 ಕಪ್
ಕೊತ್ತಂಬರಿ ಬೀಜ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಕೆಂಪು ಮೆಣಸಿನಕಾಯಿ – 4
ಕರಿ ಮೆಣಸು – 1 ಟೀಸ್ಪೂನ್
ಅರಿಶಿನ – ಚಿಟಿಕೆ
ಹುಣಸೆಹಣ್ಣು – ನಿಂಬೆ ಗಾತ್ರದಷ್ಟು
ಬೆಲ್ಲ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಬೆಳ್ಳುಳ್ಳಿ – 5
ಕರಿಬೇವಿನ ಸೊಪ್ಪು – ಕೆಲವು ಇದನ್ನೂ ಓದಿ: ಮೊಳಕೆಯೊಡೆದ ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕರಿಬೇವಿನ ಎಲೆಗಳನ್ನು ನೀರಿನಲ್ಲಿ ತೊಳೆದಿಟ್ಟುಕೊಳ್ಳಿ.
* ಬಾಣಲೆಗೆ ಕರಿಬೇವಿನ ಸೊಪ್ಪು, ಕೊತ್ತಂಬರಿ, ಜೀರಿಗೆ, ಕಾಳು ಮೆಣಸು, ಕೆಂಪು ಮೆಣಸಿನಕಾಯಿ, ಉಪ್ಪು, ಹುಣಸೆಹಣ್ಣು ಹಾಗೂ ಅರಿಶಿನ ಹಾಕಿ, ಸ್ವಲ್ಪ ನೀರು ಸೇರಿಸಿ, ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
* ಮಿಶ್ರಣ ಬೆಂದ ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.
* ಬಳಿಕ ಅದನ್ನು ಮಿಕ್ಸರ್ ಜಾರ್ಗೆ ಹಾಕಿ, ತೆಂಗಿನ ತುರಿ ಹಾಗೂ ಬೆಲ್ಲ ಸೇರಿಸಿ ರುಬ್ಬಿಕೊಳ್ಳಿ.
* ಈಗ ಕಡಾಯಿ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿಸಿ.
* ಬಳಿಕ ಬೆಳ್ಳುಳ್ಳಿ ಹಾಕಿ, ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸ್ವಲ್ಪ ಕರಿಬೇವಿನ ಸೊಪ್ಪು ಸೇರಿಸಿ.
* ಈಗ ರುಬ್ಬಿದ ಚಟ್ನಿಯನ್ನು ಒಗ್ಗರಣೆಗೆ ಹಾಕಿ ಮಿಶ್ರಣ ಮಾಡಿ.
* ಚಟ್ನಿಯ ಸ್ಥಿರತೆ ನೋಡಿಕೊಂಡು 4-5 ನಿಮಿಷಗಳ ವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
* ಇದೀಗ ಕರಿಬೇವು ಸೊಪ್ಪಿನ ಚಟ್ನಿ ತಯಾರಾಗಿದ್ದು, ದೋಸೆ, ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ವಾವ್, ಸಖತ್ ಟೇಸ್ಟಿ – ಬೇಬಿ ಕಾರ್ನ್ ರೋಸ್ಟ್
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k