ಬೆಳಗ್ಗಿನ ತಿಂಡಿ, ಲಂಚ್ ಬಾಕ್ಸ್, ಸಂಜೆಯ ಸ್ನ್ಯಾಕ್ಸ್ ಯಾವುದಕ್ಕೂ ಸರಿ ಹೊಂದುವ ಒಂದು ಪರ್ಫೆಕ್ಟ್ ಹಾಗೂ ಸಿಂಪಲ್ ರೆಸಿಪಿಯನ್ನು ನೀವು ಹುಡುಕುತ್ತಿದ್ದರೆ, ಇದು ಹೇಳಿ ಮಾಡಿಸಿದ ತಿಂಡಿಯಾಗುತ್ತದೆ. ಮಕ್ಕಳು ಕೂಡಾ ಇಷ್ಟ ಪಟ್ಟು ತಿನ್ನುವ ಈ ಡಿಫರೆಂಟ್ ರೆಸಿಪಿ ರವಾ ಟೋಸ್ಟ್ (Rava Toast) ನೀವೊಮ್ಮ ಟ್ರೈ ಯಾಕೆ ಮಾಡ್ಬಾರ್ದು? ರವಾ ಟೋಸ್ಟ್ ಮಾಡೋ ಸುಲಭದ ವಿಧಾನ ನಾವಿಂದು ಹೇಳಿಕೊಡುತ್ತೇವೆ.
Advertisement
ಬೇಕಾಗುವ ಪದಾರ್ಥಗಳು:
ಬ್ರೆಡ್ ಸ್ಲೈಸ್ – 10
ರವೆ – 1 ಕಪ್
ಮೊಸರು – ಮುಕ್ಕಾಲು ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 2
ತುರಿದ ಕ್ಯಾರೆಟ್ – 1
ಹೆಚ್ಚಿದ ಕ್ಯಾಪ್ಸಿಕಂ – 1
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 3
ತುರಿದ ಶುಂಠಿ – 1 ಇಂಚು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ಎಣ್ಣೆ/ಬೆಣ್ಣೆ – ಕಾಯಿಸಲು ಬೇಕಾಗುವಷ್ಟು
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಸಿಹಿ, ಖಾರ ಮಿಶ್ರಿತ ಹನಿ ಚಿಲ್ಲಿ ಎಗ್ ಮಾಡಿ ಬಾಯಿ ಚಪ್ಪರಿಸಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಹಾಕಿ.
* ಅದಕ್ಕೆ ರವೆ, ಉಪ್ಪು ಹಾಗೂ ಮೊಸರು ಸೇರಿಸಿ, ಮಿಶ್ರಣ ಮಾಡಿ.
* ದಪ್ಪ ಸ್ಥಿರತೆಯ ಬ್ಯಾಟರ್ ಮಾಡಿ, ಅದಕ್ಕೆ 10 ನಿಮಿಷ ವಿಶ್ರಾಂತಿ ನೀಡಿ.
* ಈಗ ಪ್ಯಾನ್ಗೆ ಬೆಣ್ಣೆ ಅಥವಾ ಎಣ್ಣೆ ಹಚ್ಚಿ, ಬಿಸಿ ಮಾಡಿ.
* ಬ್ರೆಡ್ ಸ್ಲೈಸ್ಗಳನ್ನು ಒಂದೊಂದೇ ತೆಗೆದುಕೊಂಡು, ಅದರಲ್ಲಿ 1 ಸ್ಪೂನ್ನಷ್ಟು ಬ್ಯಾಟರ್ ಹಾಕಿ, ನಿಧಾನಕ್ಕೆ ಹರಡಿ.
* ಈಗ ಬ್ರೆಡ್ ಅನ್ನು ತವಾ ಮೇಲಿಟ್ಟು ರೋಸ್ಟ್ ಮಾಡಿ.
* ಎಲ್ಲಾ ಬ್ರೆಡ್ ಸ್ಲೈಸ್ಗಳನ್ನೂ ಇದೇ ರೀತಿ ಪುನರಾವರ್ತಿಸಿ.
* ಬ್ರೆಡ್ನ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಟೋಸ್ಟ್ ಮಾಡಿ. ಬೇಕೆಂದರೆ ಇನ್ನಷ್ಟು ಬೆಣ್ಣೆ ಸೇರಿಸಿ.
* ಇದೀಗ ಸಿಂಪಲ್ ಹಾಗೂ ರುಚಿಯಾದ ರವಾ ಟೋಸ್ಟ್ ತಯಾರಾಗಿದ್ದು, ಕೆಚಪ್ನೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಚಿಕನ್ನಂತೆಯೇ ರುಚಿ – ಸೋಯಾಬೀನ್ ನಗ್ಗೆಟ್ಸ್ ಮಾಡಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k