ಚಿಕ್ಕೋಡಿ: ಮಹಾರಾಷ್ಟ್ರದ (Maharashtra) ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ವೇದಗಂಗಾ ನದಿ (Vedaganga River) ಉಕ್ಕಿ ಹರಿಯುತ್ತಿದೆ. ಪರಿಣಾಮ ನದಿ ಪಾತ್ರ ಬಿಟ್ಟು ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮಕ್ಕೆ ನೀರು ನುಗ್ಗಿದೆ.
ಗ್ರಾಮದ 20ಕ್ಕೂ ಹೆಚ್ಚು ಮನೆಗಳನ್ನು ಅಧಿಕಾರಿಗಳು ಖಾಲಿ ಮಾಡಿಸಿ, ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸವಿದ್ದ ಕುಟುಂಬಗಳನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಕಾಳಜಿ ಕೇಂದ್ರಕ್ಕೆ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻಮಹಾʼ ಮಳೆಗೆ ಮೈದುಂಬಿದ ಕೃಷ್ಣೆ, ಭೀಮಾ, ಘಟಪ್ರಭಾ ನದಿಗಳು – ಮುಳುಗಿದ ಸೇತುವೆ
ನದಿ ಪಾತ್ರ ಬಿಟ್ಟು 2 ಕಿಮೀ ನುಗ್ಗಿದ ಘಟಪ್ರಭಾ ನದಿ
ಘಟಪ್ರಭಾ ನದಿ ತೀರದಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿದ್ದು, ಮಳೆಯ ಅಬ್ಬರಕ್ಕೆ ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದ ಅನ್ನದಾತರು ಬೆಳೆದ ಬೆಳೆಗಳು ಕೊಚ್ಚಿ ಹೋಗಿವೆ. ಘಟಪ್ರಭಾ ನದಿ ತನ್ನ ಪಾತ್ರ ಬಿಟ್ಟು 2 ಕಿ.ಮೀ ದೂರಕ್ಕೆ ಹರಿಯುತ್ತಿದ್ದು, ಜಮೀನಿಗಳು ಜಲಾವೃತವಾಗಿವೆ. ಕಬ್ಬು, ಜೋಳ, ಟೊಮ್ಯಾಟೊ, ಸೊಯಾಬೀನ್, ಉದ್ದು ಸೇರಿದಂತೆ ಬಹುತೇಕ ಬೆಳೆಗಳು ನಾಶವಾಗಿವೆ. ಇದನ್ನೂ ಓದಿ: ಹಾಸನ | ನಾಯಿ ಬೊಗಳಿದ್ದಕ್ಕೆ ಕಾರನ್ನೇ ಎತ್ತಿ ಎಸೆದ ಒಂಟಿ ಸಲಗ!