ಓವೆಲ್: ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಅಭಿಮಾನಿಗಳ ಸಂಖ್ಯೆಯ ಕುರಿತು ಟ್ವೀಟ್ ಮಾಡುವ ಮೂಲಕ ಇಂಗ್ಲೆಂಡ್‍ನ ಮಾಜಿ ಕ್ರಿಕೆಟರ್ ಮೈಕಲ್ ವಾನ್ ಟ್ರೋಲ್ ಆಗಿದ್ದಾರೆ.
ಓವಲ್‍ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಲ್ಲಿಯವರೆಗೂ ನಾನು ಆಸ್ಟ್ರೇಲಿಯಾ ತಂಡದ ಆಟಗಾರರು, ಸಿಬ್ಬಂದಿ ಸೇರಿದಂತೆ ಕೇವಲ 33 ಅಭಿಮಾನಿಗಳನ್ನು ನೋಡಿದ್ದೇನೆ ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಧವನ್ ಶತಕ, ರೋಹಿತ್ – ಕೊಹ್ಲಿ ಫಿಫ್ಟಿ – ಆಸೀಸ್‍ಗೆ ಗೆಲ್ಲಲು 353 ರನ್ ಟಾರ್ಗೆಟ್
Advertisement
So far I have seen 33 Aussie supporters in the Ground at the Oval and that includes the Team and support staff … !!!! #CWC19
— Michael Vaughan (@MichaelVaughan) June 9, 2019
Advertisement
ಲಂಡನ್‍ನ ಕೆನ್ನಿಂಗ್ಟನ್ ಓವಲ್‍ನಲ್ಲಿ ಇಂದು ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯ ನಡೆಯುತ್ತಿದೆ. ಕ್ರೀಡಾಂಗಣದ ಎಲ್ಲ ಕಡೆಯೂ ಭಾರತ ತಂಡದ ಅಭಿಮಾನಿಗಳೆ ಇದ್ದಾರೆ. ಹೀಗಾಗಿ ಸ್ಟೇಡಿಯಂನಲ್ಲಿ ನೀಲಿ ಟೀ ಶರ್ಟ್ ಗಳೇ ಕಾಣುತ್ತಿವೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಮೈಕಲ್ ವಾನ್ ಟ್ರೋಲ್ ಆಗಿದ್ದಾರೆ.
Advertisement
ಇದು ನಮ್ಮ ತಂಡದ ಮೇಲಿನ ಪ್ರೀತಿ ಎಂದು ನೆಟ್ಟಿಗರು ರೀ ಟ್ವೀಟ್ ಮಾಡಿದ್ದಾರೆ. ನಿಮ್ಮನ್ನು ಸೇರಿಸಿ ಏಣಿಕೆ ಮಾಡಿದರೆ 34 ಆಗಬಹುದು ಎಂದು ಅಂಕಿತ್ ಧಾಮಾ ಎಂಬವರು ವ್ಯಂಗ್ಯವಾಡಿದ್ದಾರೆ.
Advertisement
https://twitter.com/DeveshUTD/status/1137657698428678146
ಇಂಗ್ಲೆಂಡ್ ಹಾಗೂ ಭಾರತ ಕ್ರಿಕೆಟ್ ಟೀಂ ಪಂದ್ಯದಲ್ಲಿ ನೀವು ಕೇವಲ 17 ಜನರು ಮಾತ್ರ ಇರುತ್ತೀರಿ ಎಂದು ಡೆವೆಸ್ ಲೇವಡಿ ಮಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆಗೆ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿ ಬೃಹತ್ ರನ್ ಗುರಿಯನ್ನೇ ಆಸೀಸ್ ಪಡೆಗೆ ನೀಡಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್ ರನ್ ಗಳಿಸಿದೆ.
Count yourself also….make that 34
— Ankit (@ankitdhama7596) June 9, 2019