ಸ್ಯಾಂಡಲ್‌ವುಡ್ (Sandalwood) ನಟ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ (Haripriya) ನಿನ್ನೆಯಷ್ಟೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಕ್ರಿಯೇಟಿವ್ ಆಗಿ ವಸಿಷ್ಠ ಜೊತೆಗಿನ ಮದುವೆ ಬಗ್ಗೆ ನಟಿ ಖಚಿತಪಡಿಸಿದ್ದರು. ಈಗ, “ಎಂದೂ ನಿನ್ನ ನೆರಳಾಗಿ ಕಾಯುವೆ” ಎಂದು ವಸಿಷ್ಠ ಕೂಡ ಪೋಸ್ಟ್ ಶೇರ್ ಮಾಡಿದ್ದಾರೆ.
View this post on Instagram
ಹರಿಪ್ರಿಯಾ ಮತ್ತು ವಸಿಷ್ಠ ಲವ್ ಸ್ಟೋರಿ ವಿಚಾರ ಇದೀಗ ಗುಟ್ಟಾಗಿ ಉಳಿದಿಲ್ಲ. ಸೈಲೆಂಟ್ ನಿಶ್ಚಿತಾರ್ಥ(Engagement) ಮಾಡಿಕೊಂಡಿದ್ದರು ಕೂಡ ತಮ್ಮ ಸಂಬಂಧದ ಬಗ್ಗೆ ಈ ಜೋಡಿ ಅಧಿಕೃತವಾಗಿ ತಿಳಿಸುತ್ತಿಲ್ಲ. ಸದ್ಯ ಪರೋಕ್ಷವಾಗಿ ತಾವು ಎಂಗೇಜ್ ಆಗಿರುವ ಬಗ್ಗೆ ಈ ಜೋಡಿ ಪೋಸ್ಟ್ ಮಾಡಿದ್ದಾರೆ. “ಎಂದೂ ನಿನ್ನ ನೆರಳಾಗಿ ಕಾಯುವೆ” ಅಂತಾ ಹರಿಪ್ರಿಯಾ ಬಗೆಗಿನ ಭಾವನೆಯನ್ನ ತಮ್ಮ ಸೋಷಿಯಲ್ ಮೀಡಿಯಾದ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯ ರಾಯರ ದರ್ಶನ ಪಡೆದ ಶಿವಣ್ಣ ದಂಪತಿ
ಸಿಂಹದ ಮಡಿಲಲ್ಲಿ ಮಲಗಿರುವ ಮಗುವಿನ ಫೋಟೋ ಜೊತೆ `ಚಿನ್ನ ತೋಳಿನಲ್ಲಿ ಕಂದ ನಾನು’ ಎಂದು ಕ್ರಿಯೇಟಿವ್ ಆಗಿ ಮದುವೆ ಬಗೆಗಿನ ಸುದ್ದಿ ಬಗ್ಗೆ ಹರಿಪ್ರಿಯಾ, ಪೋಸ್ಟ್ ಮೂಲಕ ಖಚಿತಪಡಿಸಿದ್ದರು. ಅದೇ ರೀತಿಯ ಪೋಸ್ಟ್ ವಸಿಷ್ಠ ಕೂಡ ಶೇರ್ ಮಾಡಿ, ಎಂದೂ ನಿನ್ನ ನೆರಳಾಗಿ ಕಾಯುವೆ ಅಂತಾ ನಟ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಎಂಗೇಜ್‌ಮೆಂಟ್ ವಿಷ್ಯಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
View this post on Instagram
ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಈ ಜೋಡಿ, ಮುಂದಿನ ಫೆಬ್ರವರಿಯಲ್ಲಿ ಹಸೆಮಣೆ(Wedding) ಏರಲಿದ್ದಾರೆ.