Bengaluru CityCinemaDistrictsKarnatakaLatestMain PostSandalwood

ಮಂತ್ರಾಲಯ ರಾಯರ ದರ್ಶನ ಪಡೆದ ಶಿವಣ್ಣ ದಂಪತಿ

ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್(Shivarajkumar) ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ರಾಯನ ದರ್ಶನ ಪಡೆದಿದ್ದಾರೆ. ಈ ವೇಳೆ ಅಪ್ಪು ಅವರನ್ನ ನೆನೆದು ಶಿವಣ್ಣ ಭಾವುಕರಾಗಿದ್ದಾರೆ.

ಶಿವಣ್ಣ ಮತ್ತು ಕುಟುಂಬ (ಡಿ.3)ರಂದು ಮಂಚಾಲಮ್ಮ ದೇವಿ ದರ್ಶನದ ಬಳಿಕ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ರಾಯರ ದರ್ಶನದ ನಂತರ ಶಿವಣ್ಣ ದಂಪತಿ, ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದಿದ್ದಾರೆ. ಪುನೀತ್ (Puneeth Rajkumar) ರಾಯರ ಕುರಿತು ಹಾಡು ಹಾಡ್ತೀನಿ ಅಂದಿದ್ರು ಅನ್ನೋ ವಿಚಾರ ನೆನೆದು ಅಪ್ಪು ಬಗ್ಗೆ ಭಾವುಕರಾದರು. ಆ ವಿಧಿ ನೆನೆಸಿಕೊಂಡರೆ ನೋವಾಗುತ್ತೆ ಎಂದು ಶಿವಣ್ಣ ಮಾತನಾಡಿದ್ದಾರೆ.

ಈ ವೇಳೆ ಅಣ್ಣಾವ್ರ ಥರ ರಾಯರ ಕುರಿತ ಸಿನಿಮಾ ಮಾಡೋ ವಿಚಾರದ ಬಗ್ಗೆ ಮಾತನಾಡಿದ ನಟ ಶಿವರಾಜ್‌ಕುಮಾರ್, ಅಂತಹ ಕಥೆ ಬಂದರೆ ನಾನು ಖಂಡಿತ ರಾಯರ ಕುರಿತ ಸಿನಿಮಾ ಮಾಡುತ್ತೇನೆ. ಆಗ ದೊರೆ ಭಗವಾನ್ (Dore Bhaghawan) ಅವರು ಮಾಡಿದ್ದರು. ಆ ರೀತಿ ಒಳ್ಳೆಯ ಡೈರೆಕ್ಟರ್ ಬಂದರೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಮಂತ್ರಾಲಯದಲ್ಲಿ ರಾಯರ ವಿಶೇಷ ಕಾರ್ಯಕ್ರಮ ಹಿನ್ನೆಲೆ ಶ್ರೀಗಳು ಗುರುವೈಭವೋತ್ಸವಕ್ಕೆ ಆಹ್ವಾನ ನೀಡಿದ್ದಾರೆ. ಫೆಬ್ರವರಿ 26ಕ್ಕೆ ಮಂತ್ರಾಲಯಕ್ಕೆ ಬರುವುದಾಗಿ ಶಿವರಾಜಕುಮಾರ್ ತಿಳಿಸಿದರು. ಇದನ್ನೂ ಓದಿ: ವಸಿಷ್ಠ ಜೊತೆಗಿನ ನಿಶ್ಚಿತಾರ್ಥದ ಬೆನ್ನಲ್ಲೇ ವಿಶೇಷ ಪೋಸ್ಟ್ ಹಂಚಿಕೊಂಡ ಹರಿಪ್ರಿಯಾ

ಇನ್ನೂ ರಾಯರ ದರ್ಶನಕ್ಕೆ ಬಂದ ವೇಳೆ ಮಹಿಳಾ ಅಭಿಮಾನಿಯೊಬ್ಬರು ಮುತ್ತು ಕೊಟ್ಟು ನಟ ಶಿವರಾಜಕುಮಾರ್‌ರನ್ನ ಗಲಿಬಿಲಿಗೊಳಿಸಿದ ಪ್ರಸಂಗ ಮಂತ್ರಾಲಯದಲ್ಲಿ ನಡೆಯಿತು. ರಾಯರ ದರ್ಶನ ಪಡೆದು ಹೊರ ಬಂದ ಶಿವಣ್ಣನಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ಶಿವರಾಜಕುಮಾರ್ ಕೆನ್ನೆಗೆ ಮುತ್ತು ಕೊಟ್ಟು ಅಭಿಮಾನ ಮೆರೆದರು.

Live Tv

Leave a Reply

Your email address will not be published. Required fields are marked *

Back to top button