ಬೆಂಗಳೂರು: ಸಿದ್ದರಾಮೋತ್ಸವ ಸಮಾವೇಶಕ್ಕಾಗಿ ವಿವಿಧ ಸಮಿತಿಗಳ ರಚನೆಯಾಗಿದ್ದು, ಯಾವ ಸಮಿತಿಯಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಸ್ಥಾನವಿಲ್ಲ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ ಹೊರತುಪಡಿಸಿ ಬಹುತೇಕ ಕಾಂಗ್ರೆಸ್‍ನ ಎಲ್ಲಾ ಪ್ರಮುಖ ನಾಯಕರಿಗೆ ವಿವಿಧ ಸಮಿತಿಗಳಲ್ಲಿ ಅವಕಾಶ ನೀಡಲಾಗಿದೆ.
ಮಾಜಿ ಸಚಿವರು, ಹಾಲಿ ಮಾಜಿ ಶಾಸಕರಿಗೆ ವಿವಿಧ ಸಮಿತಿಗಳಲ್ಲಿ ಸ್ಥಾನ ನೀಡಲಾಗಿದ್ದು, ಪಕ್ಷದಿಂದ ಹೊರ ಹೋಗಲು ಮುಂದಾಗಿರುವ ಎಂ.ಆರ್.ಸೀತಾರಾಂಗೂ ಅವಕಾಶ ದೊರೆತಿದೆ. ಅಷ್ಟೇ ಅಲ್ಲದೇ ನಿರೀಕ್ಷೆಯಂತೆ ಸಿದ್ದರಾಮಯ್ಯ ವಿರೋಧಿ ಪಾಳಯದಲ್ಲಿರುವ ಕೆ.ಹೆಚ್.ಮುನಿಯಪ್ಪ, ಎಸ್.ಆರ್.ಪಾಟೀಲ್ ಹಾಗೂ ಬಿ.ಕೆ.ಹರಿಪ್ರಸಾದ್‍ಗೂ ಸ್ಥಾನವಿಲ್ಲ. ಆದರೆ ಅಚ್ಚರಿ ಮೂಡಿಸುಂತೆ ಸ್ವಾಗತ ಸಮಿತಿಯಲ್ಲಿ ಸಂಸದ ಡಿ.ಕೆ.ಸುರೇಶ್‍ಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ಈ ಪಟ್ಟಿಯ ಅನುಸಾರ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು ಸಿದ್ದರಾಮೋತ್ಸವದ ಗೌರವಧ್ಯಕ್ಷರಾಗಿದ್ದು, ಕೆ. ಎನ್. ರಾಜಣ್ಣ, ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಹಾಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ರಾಯರಡ್ಡಿ, ಖಜಾಂಚಿಯಾಗಿ ಭೈರತಿ ಸುರೇಶ್, ಸುದ್ದಿ ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ಪಿ.ಜಿ. ಆರ್. ಸಿಂಧ್ಯಾ, ಪ್ರಚಾರ ಸಮಿತಿ ಸದಸ್ಯರಾಗಿ ವಿ. ಆರ್. ಸುದರ್ಶನ್, ಕಾರ್ಯಕ್ರಮ ಮತ್ತು ವೇದಿಕೆ ಸಮಿತಿ ಅಧ್ಯಕ್ಷರಾಗಿ ಬಿ. ಎಲ್. ಶಂಕರ್ ಹಾಗೂ ಸಾಹಿತ್ಯ ಸಮಿತಿ ಪದನಿಮಿತ್ತ ಅಧ್ಯಕ್ಷರಾಗಿ ಡಾ. ಎಲ್. ಹನುಮಂತಯ್ಯ ಅವರನ್ನು ನೇಮಕ ಮಾಡಲಾಗಿದೆ. ಇದನ್ನೂ ಓದಿ: ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಆದೇಶ
ಉಳಿದಂತೆ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ, ಅಧ್ಯಕ್ಷರಾಗಿ ಹೆಚ್.ಸಿ. ಮಹದೇವಪ್ಪ, ಸಂಚಾಲಕರಾಗಿ ಮಲ್ಲಿಕಾರ್ಜುನ ಶಾಮನೂರು ಅವರು ಆಯ್ಕೆ ಆಗಿದ್ದಾರೆ. ಉಳಿದಂತೆ ಕಾಗೋಡು ತಿಮ್ಮಪ್ಪ, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಕೆ. ಜೆ. ಜಾರ್ಜ್, ಎಂ. ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಕೆ. ಆರ್. ರಮೇಶ್ ಕುಮಾರ್, ಎಂ. ಸಿ. ನಾಣಯ್ಯ, ಅಲ್ಲಮ್ ವೀರಭದ್ರಪ್ಪ, ಕೆ. ಬಿ. ಕೋಳಿವಾಡ್, ಟಿ. ಬಿ. ಜಯಚಂದ್ರ, ಬಿ. ಆರ್. ಯಾವಗಲ್, ಜಮೀರ್ ಅಹ್ಮದ್, ಮೋಟಮ್ಮ, ರಾಣಿ ಸತೀಶ್, ಪ್ರಕಾಶ್ ಹುಕ್ಕೇರಿ, ಚಲುವರಾಯ ಸ್ವಾಮಿ, ವಿ. ಮುನಿಯಪ್ಪ, ಹೆಚ್. ಆಂಜನೇಯ, ಹೆಚ್.ವೈ. ಮೇಟಿ, ಗೊವಿಂದರಾಜ್ ಎಮ್.ಎಲ್.ಸಿ ಸಾಗತ ಸಮಿತಿಯಲ್ಲಿ ಸದಸ್ಯರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ನೌಕಾಪಡೆ ಆಫೀಸರ್ ಎಂದು ಕಾರವಾರ ನೆಲೆಗೆ ನುಗ್ಗಲು ಯತ್ನಿಸಿದವ ಅರೆಸ್ಟ್