ಕನ್ನಡದ `ಕಾಂತಾರ’ (Kantara) ಚಿತ್ರದ ‘ವರಾಹರೂಪಂ’ (Varaha Roopam) ಹಾಡಿನ ವಿವಾದಕ್ಕೆ ಜಯ ಸಿಕ್ಕಿದೆ. ವರಾಹರೂಪಂ ಹಾಡಿನ ಬಳಕೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್ ತೆರವುಗೊಳಿಸಿದೆ.
ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದರಿಂದ ಇನ್ನು ಮುಂದೆ ಒಟಿಟಿಯಲ್ಲೂ ಹಳೆಯ ವರಾಹರೂಪಂ ಹಾಡನ್ನು ನೋಡಬಹುದು.
Advertisement
Advertisement
ಕೇರಳದ ಪಾಲಕ್ಕಾಡ್ ಕೋರ್ಟ್ ಕೂಡ ಹಾಡು ಬಳಸದಂತೆ ತಡೆ ನೀಡಿತ್ತು. ಈ ಕೋರ್ಟ್ ತಡೆಯನ್ನು ತೆರವುಗೊಳಿಸಿದೆ. ಈ ಮೂಲಕ `ಕಾಂತಾರ’ ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದರೊಂದಿಗೆ ‘ಕಾಂತಾರ ‘ಚಿತ್ರದ ‘ವರಾಹರೂಪಂ’ ಹಾಡಿಗೆ ಇದ್ದ ಎಲ್ಲಾ ಅಡೆತಡೆ ನಿವಾರಣೆ ಆಗಿದೆ. ಇದನ್ನೂ ಓದಿ: ಶಿವನ ಮುಡಿಗೆ ಸಿದ್ಧಶ್ರೀ ಪ್ರಶಸ್ತಿಯ ಗರಿ – ಪಂರ್ಜುಲಿ ದೈವಕ್ಕೆ ಅರ್ಪಿಸಿದ ರಿಷಬ್
Advertisement
Advertisement
ನಿನ್ನೆಯಷ್ಟೇ ಹೊಂಬಾಳೆ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . @VKiragandur@ChaluveG @AJANEESHB @Karthik1423 @hombalefilms @KantaraFilmhttps://t.co/STsNEyKmuT
— Rishab Shetty (@shetty_rishab) December 3, 2022
ಇದೀಗ ನಟ ರಿಷಬ್ ಶೆಟ್ಟಿ (Rishab Shetty) ಸಂತಸ ವ್ಯಕ್ತಪಡಿಸಿದ್ದಾರೆ. “ದೇವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿನಲ್ಲಿ ಹಾಡು ಬದಲಾಯಿಸಲಿದ್ದೇವೆ” ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.