ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ನಲ್ಲಿ (Valmiki Corporation Scam Case) ಕೊನೆಗೂ ಕಾಂಗ್ರೆಸ್ ಮಾಜಿ ಸಚಿವ ಬಿ.ಎನ್ ನಾಗೇಂದ್ರ (BN Nagendra) ಅರೆಸ್ಟ್ ಆಗಿದ್ದಾರೆ. ತನಿಖೆ ಬೆಳಕಿಗೆ ಬಂದ ಆರಂಭದಲ್ಲಿ ಲೋಕಸಭೆ ಚುನಾವಣೆ ಖರ್ಚಿಗೆ ಹಣವನ್ನು ಬಳಸಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಿಪಕ್ಷಗಳು ಗಂಭೀರ ಆರೋಪ ಮಾಡಿದ್ದವು. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ, ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ರಿಮ್ಯಾಂಡ್ ಕಾಪಿಯಲ್ಲಿ (Remand Copy) ಸ್ಫೋಟಕ ರಹಸ್ಯಗಳು ಬಯಲಾಗಿವೆ.
ಇಡೀ ಪ್ರಕರಣದ ಸೂತ್ರಧಾರಿ ನಾಗೇಂದ್ರ ಅವರೇ ಎಂಬುದನ್ನು ರಿಮ್ಯಾಂಡ್ ಕಾಪಿಯಲ್ಲಿ ಇಡಿ ಉಲ್ಲೇಖಿಸಿದೆ. ವ್ಯವಸ್ಥಿತವಾಗಿ ನಿಗಮದ ಹಣವನ್ನು ಅಕ್ರಮ ಮಾರ್ಗದಲ್ಲಿ ವರ್ಗಾವಣೆ ಮಾಡಿಸಿದ್ದರು. ನಿಗಮದ 20.19 ಕೋಟಿ ರೂ.ಗಳನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ (Bellary LokSabha Elections) ಖರ್ಚು ಮಾಡಿದ್ದರು. ಪ್ರಕರಣ ಬೆಳಕಿಗೆ ಬಂದ್ರೆ ಯರ‍್ಯಾರು ಏನ್ ಹೇಳ್ಬೇಕು? ತನ್ನ ಹೆಸರು ಹೊರಗೆ ಬರದಂತೆ ಹೇಗೆ ನೋಡಿಕೊಳ್ಳಬೇಕು? ಎಂಬ ಬಗ್ಗೆ ನಾಗೇಂದ್ರ ಪ್ರೀ ಪ್ಲ್ಯಾನ್ ಮಾಡಿದ್ದರು. ಅಂತ ರಿಮ್ಯಾಂಡ್ ಕಾಪಿಯಲ್ಲಿ ಇಡಿ ಕೋರ್ಟ್‌ಗೆ ತಿಳಿಸಿದೆ. ಸದ್ಯ 5 ದಿನ ನಾಗೇಂದ್ರರನ್ನ ಇಡಿ ಕಸ್ಟಡಿಗೆ ಪಡೆದಿದ್ದು, ಮತ್ತಷ್ಟು ಸ್ಫೋಟಕ ವಿಚಾರ ಹೊರಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Assembly Bypolls: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು – ಇಂಡಿಯಾ ಒಕ್ಕೂಟಕ್ಕೆ ಭರ್ಜರಿ ಮುನ್ನಡೆ!
ಮೊದಲಿಗೆ ವಾಲ್ಮೀಕಿ ನಿಗಮದ ಉಳಿತಾಯ ಖಾತೆಯಿಂದ 9 ನಕಲಿ ಖಾತೆಗಳಿಗೆ 45.02 ಕೋಟಿ ರೂ. ವರ್ಗಾವಣೆಯಾಗಿದೆ. ನಂತರ ನಿಗಮದ ಸೆಕ್ಯೂರ್ಡ್ ಓವರ್‌ಡ್ರಾಫ್ಟ್ ಖಾತೆಯಿಂದ ಇನ್ನೂ 9 ನಕಲಿ ಖಾತೆಗಳಿಗೆ 50 ಕೋಟಿ ರೂ. ಹಣ ವರ್ಗಾವಣೆಯಾಗಿದೆ. ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 95.02 ಕೋಟಿ ರೂ. ವರ್ಗಾವಣೆಯಾಗಿದೆ. ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ ಹೈದ್ರಾಬಾದ್‌ನ ಬಂಜಾರ ಹಿಲ್ಸ್‌ನ ಆರ್‌ಬಿಎಲ್ ಬ್ಯಾಂಕ್‌ನ 18 ನಕಲಿ ಖಾತೆಗಳಿಗೆ (Fake Accounts) ವರ್ಗಾವಣೆ ಆಗಿದ್ದು ಹೇಗೆ? ಎಂಬ ವಿಚಾರವನ್ನು ಇಡಿ ರಿಮ್ಯಾಂಡ್ ಕಾಪಿಯಲ್ಲಿ ಇಂಚಿಂಚಾಗಿ ಬಯಲು ಮಾಡಿದೆ. ಯಾವ ಖಾತೆಗೆ ಎಷ್ಟು ಹಣ ವರ್ಗಾವಣೆಯಾಗಿದೆ? ಎಂಬುದನ್ನು ತಿಳಿಯಲು ಮುಂದೆ ಓದಿ… ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪ್ರವಾಹ – ಅಯೋಧ್ಯೆಯ ಪ್ರಮುಖ ಪ್ರದೇಶಗಳಿಗೆ ನುಗ್ಗಿದ ನೀರು
ಹಣ ವರ್ಗಾವಣೆಯಾಗಿದ್ದ ಹೇಗೆ?
ಹಂತ – 1
* ನಿಗಮದ ಉಳಿತಾಯ ಖಾತೆಯಿಂದ 9 ನಕಲಿ ಖಾತೆಗಳಿಗೆ 45.02 ಕೋಟಿ ರೂ. ವರ್ಗ
* ನಿಗಮದ ಸೆಕ್ಯೂರ್ಡ್ ಓವರ್‌ಡ್ರಾಫ್ಟ್ ಖಾತೆಯಿಂದ 9 ನಕಲಿ ಖಾತೆಗಳಿಗೆ 50 ಕೋಟಿ ರೂ. ವರ್ಗ
* ವಾಲ್ಮೀಕಿ ನಿಗಮದ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 95.02 ಕೋಟಿ ರೂ. ವರ್ಗಾವಣೆ
ಹಂತ – 2
* ಹೈದರಾಬಾದ್‌ನ ಆರ್‌ಬಿಎಲ್ ಬ್ಯಾಂಕ್ 18 ನಕಲಿ ಖಾತೆಗಳಿಂದ ಮತ್ತೆ ಹಣ ವರ್ಗಾವಣೆ
* ಅಕ್ರಮ ವರ್ಗಕ್ಕಾಗಿ ಹೈದ್ರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಬ್ಯಾಂಕ್‌ನಲ್ಲಿ 20 ನಕಲಿ ಖಾತೆ ಸೃಷ್ಟಿ
* 13 ನಕಲಿ ಖಾತೆಗಳಿಗೆ 55.76 ಕೋಟಿ ರೂ., 7 ಆಂತರಿಕ ಖಾತೆಗಳಿಗೆ 41.63 ಕೋಟಿ ರೂ. ವರ್ಗಾವಣೆ
ಹಂತ – 3
* ಫಸ್ಟ್ ಫೈನಾನ್ಸ್ ಕ್ರೆಡಿಟ್ ಬ್ಯಾಂಕ್‌ನ 20 ನಕಲಿ ಖಾತೆಗಳಿಂದ ಮತ್ತೆ ಹಣ ವರ್ಗಾವಣೆ
* ಹೈದ್ರಾಬಾದ್ ಮೂಲದ 2 ಜುವೆಲ್ಲರಿಗಳು, 11 ಕಂಪನಿಗಳಿಗೆ 95 ಕೋಟಿ ರೂ.ಗಿಂತಲೂ ಹೆಚ್ಚು ಹಣ ವರ್ಗಾವಣೆ
* ಜ್ಯುವೆಲ್ಲರಿ ಮಾಲೀಕರಿಂದ ಈಗಾಗಲೇ 20 ಕೋಟಿ ರೂ.ಗೂ ಹೆಚ್ಚು ಹಣ ವಶಕ್ಕೆ ಪಡೆಯಲಾಗಿದೆ.
* ಕಂಪನಿಗಳ ಹೆಸರು ದುರ್ಬಳಕೆ ಮಾಡಿಕೊಂಡು ಅಕ್ರಮ ವರ್ಗಾವಣೆ ಹಿನ್ನೆಲೆ ವಂಚಕರ ವಿರುದ್ಧ ರಾಮ್ ಎಂಟರ್‌ಪ್ರೈಸಸ್ ಸೇರಿ 4 ಕಂಪನಿಗಳಿಂದ ದೂರು. ಇದನ್ನೂ ಓದಿ: ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – ತೆರಿಗೆ ಪಾವತಿಸೋ ಮಂದಿಗೆ ಉಚಿತ ವಿದ್ಯುತ್ ಕಟ್
45.02 ಕೋಟಿ ರೂ. ವರ್ಗಾವಣೆಯಾದ ನಕಲಿ ಖಾತೆಗಳು?
(ವಾಲ್ಮೀಕಿ ನಿಗಮ ಖಾತೆ ಸಂಖ್ಯೆ 034124010000007 ಯಿಂದ)
1. ಅಕರ್ಡ್ ಬ್ಯುಸಿನೆಸ್ ಸರ್ವಿಸಸ್ – 5,46,85,000 ರೂ.
2. ನಿತ್ಯಾ ಸೆಕ್ಯೂರಿಟಿ ಸರ್ವಿಸಸ್ ಫೀಪ್ಯುಮ್ಸ್ ಮ್ಯಾನೇಜ್‌ಮೆಂಟ್ – 4,47,50,000 ರೂ.
3. ಝೆಲಿಯಂಟ್ ಸರ್ವಿಸ್ ಟ್ರೈನಿಂಗ್ ಕನ್ಸಟಿಂಗ್ – 4,97,83,000 ರೂ.
4. ವೈ.ಎಂ. ಎಂಟರ್ ಪ್ರೈಸಸ್ – 4,98,50,000 ರೂ.
5. ವೋಲ್ಟಾ ಟೆಕ್ನಾಲಜಿ ಸರ್ವಿಸಸ್ – 5,12,50,000 ರೂ.
6. ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿ. – 4,53,15,000 ರೂ.
7. ಟಾಲೆಂಜ್ ಸಾಫ್ಟ್‌ವೇರ್ ಇಂಡಿಯಾ ಪ್ರೈ.ಲಿ – 5,10,00,000 ರೂ.
8. ಮನ್ಹು ಎಂಟರ್‌ಪ್ರೈಸಸ್ – 5,01,50,000 ರೂ.
9. ಫೀಪ್ಯುಮ್ಸ್ ಮ್ಯಾನೇಜ್‌ಮೆಂಟ್ – 5,35,15,000 ರೂ.
50 ಕೋಟಿ ರೂ. ಹಣ ವರ್ಗಾವಣೆಯಾದ ನಕಲಿ ಖಾತೆಗಳು?
(ವಾಲ್ಮೀಕಿ ನಿಗಮ ಓವರ್‌ಡ್ರಾಫ್ಟ್ ಲಿ. ಖಾತೆ ಸಂಖ್ಯೆ 034124010000007 ಯಿಂದ )
1. ವಿ6 ಬ್ಯುಸಿನೆಸ್ ಸಲ್ಯೂಷನ್ಸ್ – 4,50,01,500 ರೂ.
2. ಸುಜಲ್ ಎಂಟರ್‌ಪ್ರೈಸಸ್ – 5,63,00,000 ರೂ.
3. ನಾವೆಲ್ ಸೆಕ್ಯೂರಿಟಿಸಿ ಸರ್ವಿಸಸ್ – 4,56,00,000 ರೂ.
4. ಜಿ.ಎನ್.ಇಂಡಸ್ಟ್ರೀಸ್ – 4,42,00,000 ರೂ.
5 ಸ್ವಾಪ್ ಡಿಸೈನ್ ಪ್ರೈವೆಡ್ ಲಿಮಿಟೆಡ್ – 5,15,00,000 ರೂ.
6. ಸ್ಕಿಲ್‌ಮ್ಯಾಪ್ ಟ್ರೈನಿಂಗ್ ಅಂಡ್ ಸರ್ವಿಸ್ – 4,84,00,000 ರೂ.
7. ರಾಮ್ ಎಂಟರ್‌ಪ್ರೈಸಸ್ – 5,07,00,000 ರೂ.
8. ಸಿಸ್ಟಂ ಅಂಡ್ ಸರ್ವಿಸ್ ಕಂಪನಿ – 4,55,00,000 ರೂ.
9. ಗ್ರಾಬ್ ಎ ಗ್ರಬ್ ಸರ್ವಿಸಸ್ ಪ್ರೈ.ಲಿ. – . 5,88,00,000 ರೂ.