-ಕ್ಷೇತ್ರದ ಜನತೆಗೆ ಸಲಹೆ ನೀಡೋದು ತಪ್ಪಾ?
ಲಕ್ನೋ: ಉತ್ತರ ಪ್ರದೇಶ ಬಿಜೆಪಿ ಶಾಸಕ ಮುಸ್ಲಿಮರಿಂದ ತರಕಾರಿ ಖರೀದಿಸಬೇಡಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ದೇವರಿಯಾ ಜಿಲ್ಲೆಯ ಬರಹಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ತಿವಾರಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ಕ್ಷೇತ್ರದ ನಗರ ಪಾಲಿಕೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿಯ ಸದಸ್ಯರಿಗೆ ಕೊರೊನಾಗೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಿದ್ದರು. ನೀವೆಲ್ಲರೂ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾರು ಮುಸ್ಲಿಮರ ಬಳಿ ತರಕಾರಿ ಖರೀದಿಸಬೇಡಿ ಎಂದು ಹೇಳಿದ್ದಾರೆ.
Advertisement
Advertisement
ವಿಡಿಯೋ ವೈರಲ್ ಆಗ್ತಿದ್ದಂತೆ ಈ ಪ್ರತಿಕ್ರಿಯಿಸಿರುವ ಶಾಸಕರು, ಏಪ್ರಿಲ್ 17ರಂದು ಘಟನೆ ನಡೆದಿದ್ದು, ಸಭೆಯಲ್ಲಿ ನೆರದಿದ್ದವರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆ. ಕೆಲ ಮುಸ್ಲಿಮರು ತರಕಾರಿ ಮೇಲೆ ಉಗುಳಿ ಮಾರುತ್ತಿದ್ದಾರೆ ಏನ್ ಮಾಡೋದು ಎಂದು ಪ್ರಶ್ನಿಸಿದರು. ಆಗ ನಿಮಗೆ ಅವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಲ್ಲದಿದ್ರೆ ಅಂತಹವರ ಬಳಿ ತರಕಾರಿ ಖರೀದಿಸೋದು ಬೇಡ ಎಂದು ಹೇಳಿದ್ದೆ ಎಂದಿದ್ದಾರೆ.
Advertisement
Advertisement
ಎಐಎಂಐ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಹಿರಂಗವಾಗಿಯೇ ಹಿಂದೂಗಳನ್ನು ಟೀಕಿಸುತ್ತಾರೆ. ಆದ್ರೆ ಯಾರು ಈ ಬಗ್ಗೆ ಮಾತನಾಡಲ್ಲ. ಕ್ಷೇತ್ರದ ಜನತೆಗೆ ಸಲಹೆ ನೀಡೋದು ತಪ್ಪಾ ಎಂದು ಸುರೇಶ್ ತಿವಾರಿ ಪ್ರಶ್ನಿಸಿದ್ದಾರೆ.