ವಾಷಿಂಗ್ಟನ್: ಅಮೆರಿಕ (America) ಮಿಲಿಟರಿಯು ಶುಕ್ರವಾರ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ 30 ಉಗ್ರರನ್ನು ಹತ್ಯೆಗೈದ ಘಟನೆ ಸೆಂಟ್ರಲ್ ಸೊಮಾಲಿಯಾದ (Somalia) ಗಾಲ್ಕಾಡ್ ಪಟ್ಟಣದ ಬಳಿ ನಡೆದಿದೆ.
ಈ ಘಟನೆಯು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಿಂದ 260 ಕಿ.ಮೀ ದೂರದಲ್ಲಿರುವ ಗಾಲ್ಕಾಡ್ ಬಳಿ ಸಂಭವಿಸಿದೆ. ಹತ್ಯೆಯಾದವರೆಲ್ಲರೂ ಇಸ್ಲಾಮಿಸ್ಟ್ ಅಲ್ ಶಬಾಬ್ (Al Shabaab) ಗುಂಪಿಗೆ ಸೇರಿದವರೆಂದು ಗುರುತಿಸಲಾಗಿದೆ.
Advertisement
Advertisement
ಅಲ್- ಶಬಾಬ್ ಗುಂಪು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದೆ. ಈ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಅಲ್- ಶಬಾಬ್ ಹೋರಾಟಗಾರರು ಇದ್ದ ಗುಂಪಿನ ಮೇಲೆ ಅಮೆರಿಕ ಮಿಲಿಟರಿ ಪಡೆಗಳು ದಾಳಿಯನ್ನು ನಡೆಸಿದೆ.
Advertisement
2022ರ ಮೇನಲ್ಲಿ ಉಗ್ರರ ಗುಂಪನ್ನು ಎದುರಿಸುವ ಪ್ರಯತ್ನದಲ್ಲಿ ಈ ಪ್ರದೇಶಕ್ಕೆ ಅಮೆರಿಕ ಪಡೆಗಳನ್ನು ಮರು ನಿಯೋಜಿಸಲು ಪೆಂಟಗನ್ ವಿನಂತಿಗೆ ಅಧ್ಯಕ್ಷ ಜೋ ಬೈಡನ್ ಅನುಮೋದನೆ ನೀಡಿದ್ದರು. ಅಂದಿನಿಂದಲೂ ಸೋಮಾಲಿಯಾ ಸರ್ಕಾರಕ್ಕೆ ಅಮೆರಿಕ ನಿರಂತರ ಬೆಂಬಲವನ್ನು ಒದಗಿಸುತ್ತಿದೆ. ಇದನ್ನೂ ಓದಿ: ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರು – ಮಂಗಳವಾರ ಬಸ್ ಸಂಚಾರದಲ್ಲಿ ವ್ಯತ್ಯಯ
Advertisement
ಸೋಮಾಲಿಯಾವು ಎಲ್ಲಾ ಪೂರ್ವ ಆಫ್ರಿಕಾದಲ್ಲಿ ಸ್ಥಿರತೆ ಮತ್ತು ಭದ್ರತೆಗೆ ಕೇಂದ್ರವಾಗಿದೆ. ಅಮೆರಿಕ ಆಫ್ರಿಕಾ ಕಮಾಂಡ್‍ನ ಪಡೆಗಳು ಅಲ್-ಶಬಾಬ್ ಅನ್ನು ಸೋಲಿಸಲು ಅಗತ್ಯವಾದ ಯುದ್ಧ ಸಾಮಾಗ್ರಿಗಳನ್ನು ನೀಡಿ ಆ ಪಡೆಗಳಿಗೆ ತರಬೇತಿ, ಸಲಹೆ ನೀಡುತ್ತಿದೆ. ಇತ್ತೀಚಿನ ತಿಂಗಳಲ್ಲಿ ಅಮೆರಿಕ ಉಗ್ರರ ತಾಣದ ಹಲವು ಕಡೆ ದಾಳಿಯನ್ನು ನಡೆಸಿದೆ. ಈ ವೇಳೆ ಅನೇಕ ಉಗ್ರರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್ ಬಲಿಪಶು – ಏರ್ ಇಂಡಿಯಾ ಪೈಲಟ್ ಒಕ್ಕೂಟ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k