ನವದೆಹಲಿ: ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಪೈಲಟ್ (Pilot) ಅವರನ್ನು ಬಲಿಪಶು ಮಾಡಲಾಗಿದೆ ಎಂದು ಏರ್ ಇಂಡಿಯಾ (Air India) ಪೈಲಟ್ ಒಕ್ಕೂಟ ಹೇಳಿದೆ.
ಕುಡಿದ ಅಮಲಿನಲ್ಲಿ ವೃದ್ಧ ಪ್ರಯಾಣಿಕರೊಬ್ಬರ ಮೇಲೆ ಶಂಕರ್ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ (Shankar Mishra case) ಸಂಬಂಧಿಸಿದಂತೆ ನ್ಯೂಯಾರ್ಕ್-ನವದೆಹಲಿ ವಿಮಾನದ ಪೈಲಟ್ ಅವರ ಪರವಾನಗಿಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) 3 ತಿಂಗಳ ಕಾಲ ಅಮಾನತುಗೊಳಿಸಿದೆ. ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಪೈಲಟ್ ಒಕ್ಕೂಟ ಕಾನೂನು ಸಮರ ಆರಂಭಿಸಲು ಮುಂದಾಗಿದೆ.
Advertisement
Advertisement
ಈ ಬಗ್ಗೆ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, ಪೈಲಟ್ ತ್ವರಿತವಾಗಿ ಮತ್ತು ಪ್ರಬುದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಘಟನೆಯ ಬಗ್ಗೆ ಅಂದೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದೇ ಇದ್ದರೂ ಪೈಲಟ್ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಕ್ಷ್ಯಚಿತ್ರ ಭಾರತದಲ್ಲಿ ಬ್ಯಾನ್ – ಬಿಬಿಸಿ ವಿರುದ್ಧ 302 ಅಧಿಕಾರಿಗಳು ಆಕ್ರೋಶ
Advertisement
ಈ ಘಟನೆ 2022ರ ನವೆಂಬರ್ 26ರಂದು ನಡೆದಿತ್ತು. ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ಏರ್ ಇಂಡಿಯಾ ಕಂಪನಿಗೆ 30 ಲಕ್ಷ ರೂ. ದಂಡ ವಿಧಿಸಿದೆ. ಅಂದು ವಿಮಾನದ ವಾಚ್‌ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್ ಸೇವೆಗಳ ನಿರ್ದೇಶಕರ ಮೇಲೆ 3 ಲಕ್ಷ ರೂ. ದಂಡವನ್ನೂ ವಿಧಿಸಿದೆ.
Advertisement
ಘಟನೆ ನಡೆದ ತಿಂಗಳ ಬಳಿಕ ಸಂತ್ರಸ್ತ ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಘಟನೆ ಬಗ್ಗೆ ಪತ್ರ ಬರೆದಿದ್ದರು. ಬಳಿಕ ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿತ್ತು. ಆರೋಪಿ ಶಂಕರ್ ಮಿಶ್ರಾನನ್ನು 2 ದಿನಗಳ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದರು. ಆರೋಪಿಗೆ 4 ತಿಂಗಳ ಕಾಲ ವಿಮಾನ ಪ್ರಯಾಣವನ್ನು ನಿಷೇಧಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k