ನವದೆಹಲಿ: 2002ರ ಗುಜರಾತ್ ಗಲಭೆ (2002 Gujarat Riots) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು (BBC Documentary) ಭಾರತ ಸರ್ಕಾರ ಬ್ಯಾನ್ ಮಾಡಿದ್ದು ಅದರ ಲಿಂಕ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್ ಮತ್ತು ಯೂಟ್ಯೂಬ್‌ಗೆ ಆದೇಶಿಸಿದೆ.
CENSORSHIP@Twitter @TwitterIndia HAS TAKEN DOWN MY TWEET of the #BBCDocumentary, it received lakhs of views
The 1 hr @BBC docu exposes how PM @narendramodi HATES MINORITIES
Here’s????the mail I recieved. Also see flimsy reason given. Oppn will continue to fight the good fight pic.twitter.com/8lfR0XPViJ
— Derek O'Brien | ডেরেক ও'ব্রায়েন (@derekobrienmp) January 21, 2023
Advertisement
ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಲಿಂಕ್‌ಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ನೀಡಿದ್ದು ಟ್ವಿಟ್ಟರ್ ಮತ್ತು ಯೂಟ್ಯೂಬ್ ಈ ಆದೇಶ ಪಾಲನೆ ಮಾಡಲು ಒಪ್ಪಿಕೊಂಡಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: EXPLAINED: 60 ವರ್ಷಗಳಲ್ಲೇ ಮೊದಲ ಬಾರಿಗೆ ಕುಸಿದ ಚೀನಾ ಜನಸಂಖ್ಯೆ – ಇದು ಹೇಗಾಯ್ತು ಗೊತ್ತಾ?
Advertisement
Advertisement
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಅವರು ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಮಾಡಿದ ಟ್ವೀಟ್ ಅನ್ನು ಟ್ವಿಟ್ಟರ್ ತೆಗೆದು ಹಾಕಿದೆ. ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಾನು ಮಾಡಿದ ಟ್ವೀಟ್ ಅನ್ನು ಟ್ವಿಟ್ಟರ್ ತೆಗೆದಿದೆ. ಒಂದು ಗಂಟೆಯ ಬಿಬಿಸಿ ಡಾಕ್ಯುಮೆಂಟರಿ ಪ್ರಧಾನಿ ನರೇಂದ್ರ ಮೋದಿ ಹೇಗೆ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ನಾನು ಸ್ವೀಕರಿಸಿದ ಮೇಲ್ ಇಲ್ಲಿದೆ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
Advertisement
ನಿವೃತ್ತ ಅಧಿಕಾರಿಗಳು ಗರಂ:
ಬಿಬಿಸಿ ವಿರುದ್ದ ನಿವೃತ್ತ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಸೇರಿ 302 ನಿವೃತ್ತ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರವನ್ನು ಬಿಂಬಿಸಿದ್ದು ಪೂರ್ವಾಗ್ರಹಪೀಡಿತ ಎಂದು ಬಹಿರಂಗ ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ 13 ನಿವೃತ್ತ ನ್ಯಾಯಾಧೀಶರು, 13 ಮಂದಿ ನಿವೃತ್ತ ಅಧಿಕಾರಿಗಳು, ರಾಯಭಾರಿಗಳು ಮತ್ತು 156 ನಿವೃತ್ತ ಸೇನಾಧಿಕಾರಿಗಳು ಸಹಿ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಬಳಿಕವೂ ಬಿಬಿಸಿ ಈ ರೀತಿ ನಮ್ಮ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುತ್ತಿದೆ. ದೇಶದ ಸುಪ್ರೀಂ ಕೋರ್ಟ್ ತೀರ್ಪನ್ನು ತಳ್ಳಿಹಾಕಿ ತನಗೆ ಬೇಕಾದಂತೆ ಮಾಡಿ ಪ್ರಚಾರ ಮಾಡುತ್ತದೆ. ಈ ಸಾಕ್ಷ್ಯಚಿತ್ರ ಬ್ರಿಟಿಷ್ ವಸಾಹತುಶಾಹಿಯ ಭ್ರಮೆ. ಆಧಾರಗಳು ಇದೆ ಎಂದ ಮಾತ್ರಕ್ಕೆ ನಂಬಲು ಸಾಧ್ಯವಿಲ್ಲ. ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ಚಾರ್ಜ್‌ಶೀಟ್ ಎಂದು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k