ವಾಷಿಂಗ್ಟನ್: ಕೆಲವೇ ದಿನಗಳಲ್ಲಿ ತ್ರೈಮಾಸಿಕ ವರದಿ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಆರ್ಥಿಕ ಕುಸಿತವಾಗಲಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ. ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ ಕಾಣಲಿರುವುದರಿಂದ ಅಮೆರಿಕದಲ್ಲಿ ಆರ್ಥಿಕ ಕುಸಿತವಾಗುತ್ತಾ ಎಂಬ ಪ್ರಶ್ನೆಗೆ ಅಧ್ಯಕ್ಷ ಜೋ ಬೈಡನ್ ಉತ್ತರ ನೀಡಿದ್ದಾರೆ.
ನನ್ನ ದೃಷ್ಟಿಯಲ್ಲಿ ಅಮೆರಿಕವು ಎಂದಿಗೂ ಆರ್ಥಿಕ ಕುಸಿತವನ್ನು ಕಾಣುವುದಿಲ್ಲ. ನಾವು ಈ ಕ್ಷಿಪ್ರ ಬೆಳವಣಿಗೆಯಿಂದ ಸ್ಥಿರವಾದ ಬೆಳವಣಿಗೆಗೆ ಹೋಗುತ್ತೇವೆ ಎಂದು ತಿಳಿಸಿದರು.
Advertisement
Advertisement
ಈಗಾಗಲೇ ಅನೇಕ ಅಮೆರಿಕದ ಅಧಿಕಾರಿಗಳು ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಭಯವನ್ನು ಕಡಿಮೆ ಮಾಡಿದ್ದಾರೆ. ಅತ್ಯಂತ ಬಲಿಷ್ಠವಾದ ಕಾರ್ಮಿಕ ಮಾರುಕಟ್ಟೆಗಳನ್ನು ನೀಡಿದರೆ ವಿಶ್ವದ ಅತಿದೊಡ್ಡ ಆರ್ಥಿಕತೆ ಕುಸಿತವಾಗುವುದು ಅಸಂಭವ ಎಂದರು.
Advertisement
2020ರಿಂದ ಸಾಂಕ್ರಾಮಿಕ ರೋಗ ಕೊರೊನಾದಿಂದಾಗಿ ಆರ್ಥಿಕತೆ ಕುಸಿದಿತ್ತು. ಇದಾದ ಬಳಿಕ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿ ಶೇ.1.6ರಷ್ಟು ಕುಸಿತ ಕಂಡಿತ್ತು. ಇದನ್ನೂ ಓದಿ: ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ
Advertisement
ಈಗಾಗಲೇ ಹಣದುಬ್ಬರದ ವಿರುದ್ಧ ಹೋರಾಡಲು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಏರಿಸಿದೆ. ಇದರಿಂದಾಗಿ ವಿಶ್ವಾದ್ಯಂತ ವಿವಿಧ ದೇಶಗಳ ಮುಂದೆ ಡಾಲರ್ ಮೌಲ್ಯ ಏರಿಕೆಯಾಗುತ್ತಿದೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ರೂ ಮೌನ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿ
ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ದರ ಕುಸಿತ ಕಂಡರೆ ಇದು ಆರ್ಥಿಕ ಹಿಂಜರಿತದ ಲಕ್ಷಣ ಎಂದು ಅರ್ಥಶಾಸ್ತ್ರಜ್ಞರು ವ್ಯಾಖ್ಯಾನಿಸುತ್ತಾರೆ. ಈ ಹಿಂದೆ ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಮಯದಲ್ಲಿ ವಿಶ್ವಾದ್ಯಂತ ಜಿಡಿಪಿ ಕುಸಿತ ಕಂಡಿತ್ತು. ಋಣಾತ್ಮಕ ಕುಸಿತ ಕಂಡಿದ್ದರೂ ಕೋವಿಡ್ ಕಾರಣದಿಂದ ಕುಸಿತ ಕಂಡಿದ್ದರೂ ನಂತರ ಲಾಕ್‍ಡೌನ್ ತೆರವಾದ ಬಳಿಕ ಆರ್ಥಿಕತೆ ಚೇತರಿಕೆಯತ್ತ ಮರಳಿತ್ತು. ಆದರೆ ರಷ್ಯಾ ಉಕ್ರೇನ್ ಯುದ್ಧ, ಕೋವಿಡ್ ಇತ್ಯಾದಿ ಕಾರಣದಿಂದ ಮತ್ತೆ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿದೆ.