– ಸ್ವಲ್ಪ ಏರಿಕೆ ಕಂಡ ಚಿನ್ನದ ದರ; ಬೆಂಗಳೂರಲ್ಲಿ ಬೆಲೆ ಎಷ್ಟು?
ಬೆಂಗಳೂರು: ಈ ಬಾರಿ ಯುದ್ಧದ ಭೀತಿ ಮಧ್ಯೆ ಅಕ್ಷಯ ತೃತೀಯ (Akshaya Tritiya) ಬಂದಿದೆ. ಚಿನ್ನದ (Gold) ದರ ಏರಿಕೆಯ ಹಾವು-ಏಣಿಯಾಟ ಗ್ರಾಹಕರನ್ನು ಗೊಂದಲಕ್ಕೆ ದೂಡಿದೆ.
ಬಂಗಾರ ಖರೀದಿಯ ಮುಹೂರ್ತ ಅಕ್ಷಯ ತೃತೀಯ. ಈ ದಿನ ಚಿನ್ನ ಖರೀದಿಗೆ ಶುಭ ಮುಹೂರ್ತ ಅಂತಾ ಜನ ಮುಗಿಬೀಳ್ತಾರೆ. ಆದರೆ, ಬಂಗಾರದ ದರ ಏರಿಕೆಯ ಹಾವು-ಏಣಿಯಾಟ ನಿರಂತರವಾಗಿದೆ. ಒಂದ್ಕಡೆ ಯುದ್ಧದ ಭೀತಿ. ಮಗದೊಂದು ಕಡೆ ಅಕ್ಷಯ ತೃತೀಯ ಸಂಭ್ರಮ. ಚಿನ್ನದ ದರ ಏರಿಳಿತವಾಗುತ್ತಿರುವ ಈ ಸಮಯದಲ್ಲಿ ಅಕ್ಷಯ ತೃತೀಯದ ದಿನ ಖರೀದಿಗೆ ಸಕಾಲನಾ ಅನ್ನೋ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.
ಯುದ್ಧದ ಮಧ್ಯೆ ಚಿನ್ನದ ದರ ವಿಪರೀತ ಏರಿಕೆ ಆಗಲ್ಲ, ಇಳಿಕೆಯೂ ಆಗಲ್ಲ. ಈಗ ಇರುವಷ್ಟೇ ಬಹುತೇಕ ಸ್ಥಿರವಾಗಿರುತ್ತೆ ಅನ್ನೋದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಯುದ್ಧದ ಸಂದರ್ಭದಲ್ಲಿ ಆರ್ಥಿಕ ಹೊಡೆತ ಹೆಚ್ಚಾಗಿರುವುದರಿಂದ ಚಿನ್ನ ಖರೀದಿ ಗಣನೀಯವಾಗಿ ಏರಿಕೆ ಕಾಣುವುದು ಅನುಮಾನ ಅಂತಾ ಹೇಳಿದ್ರೂ ಸುರಕ್ಷಿತ ಹೂಡಿಕೆ ಅನ್ನುವ ಕಾರಣಕ್ಕೆ ಚಿನ್ನದತ್ತ ವಾಲುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಅಂತಾರೆ ಆರ್ಥಿಕ ತಜ್ಞರು.
ಭಾರತದಲ್ಲಿ ಗುರುವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,55,360 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 1,42,410 ರೂಪಾಯಿ. ಬೆಂಗಳೂರಿನಲ್ಲೂ ಇದೇ ದರ ಇದೆ.
