ವಾಷಿಂಗ್ಟನ್: 10 ದಿನಗಳಲ್ಲಿ 13 ಹಾರರ್ ಮೂವಿಗಳನ್ನು ನೋಡುವ ವ್ಯಕ್ತಿಗಳಿಗೆ ಕಂಪನಿಯೊಂದು ಭಾರೀ ಮೊತ್ತವನ್ನು ನೀಡುವ ಆಫರ್ ಪ್ರಕಟಿಸಿದೆ.
ಅಮೆರಿಕದ ಫೈನಾನ್ಸ್ ಬುಝ್ ಕಂಪನಿ ಈ ಆಫರ್ ಪ್ರಕಟಿಸಿದ್ದು ಪಟ್ಟಿ ಮಾಡಲಾದ 13 ಭಯಾನಕ ಸಿನಿಮಾಗಳನ್ನು ವೀಕ್ಷಿಸಿದವರಿಗೆ ಅಕ್ಟೋಬರ್ ನಲ್ಲಿ 1,300 ಡಾಲರ್(ಅಂದಾಜು 95 ಸಾವಿರ ರೂ.) ನೀಡುವುದಾಗಿ ಹೇಳಿದೆ. ಹಾರರ್ ಸಿನಿಮಾ ವ್ಯಕ್ತಿಯ ಮೇಲೆ ಯಾವ ರೀತಿ ಭಯ ಮೂಡಿಸುತ್ತದೆ ಎಂದು ತಿಳಿಯುವ ಉದ್ದೇಶದಿಂದ ಕಂಪನಿ ಈ ಆಫರ್ ಪ್ರಕಟಿಸಿದೆ.
Advertisement
Advertisement
13 ಭಯಾನಕ ಚಲನಚಿತ್ರಗಳನ್ನು ವೀಕ್ಷಿಸುವ ವ್ಯಕ್ತಿಗಳ ಹೃದಯ ಬಡಿತವನ್ನು ಫಿಟ್‍ಬಿಟ್ ಬಳಸಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
Advertisement
ದುಬಾರಿ ಬಜೆಟ್ ಮತ್ತು ಕಡಿಮೆ ಬಜೆಟ್ ಸಿನಿಮಾಗಳ ಪೈಕಿ ಯಾವುದು ಜಾಸ್ತಿ ಭಯ ಮೂಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಕಂಪನಿ ಈ ಆಫರ್ ನೀಡಿದೆ. ಇದನ್ನೂ ಓದಿ: 20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ
Advertisement
ಹಾರರ್ ಮೂವಿ ನೋಡಲು ಆಯ್ಕೆಯಾಗುವ ವ್ಯಕ್ತಿಗಳ ಸಿನಿಮಾದ ಶೇ.50ರಷ್ಟು ವೆಚ್ಚವನ್ನು ಭರಿಸುವುದಾಗಿ ಫಿಟ್‍ಬಿಟ್ ಕಂಪನಿ ಹೇಳಿದೆ. ಸಿನಿಮಾ ವೀಕ್ಷಣೆ ಮುಂದಾಗುವ ವ್ಯಕ್ತಿಗಳು ಸೆ.26ರ ಒಳಗಡೆ ಹೆಸರನ್ನು ನೋಂದಾಯಿಸಬೇಕು. 18 ವರ್ಷ ಮೇಲ್ಪಟ್ಟ ಅಮೆರಿಕದ ವ್ಯಕ್ತಿಗಳಿಗೆ ಮಾತ್ರ ಹೆಸರನ್ನು ನೋಂದಾಯಿಸಲು ಅವಕಾಶವಿದೆ. ಇದನ್ನೂ ಓದಿ: ಮಹಿಳಾ ಪೇದೆ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಮಿಲನ
13 ಸಿನಿಮಾಗಳು ಯಾವುದು?
Saw, Amityville Horror, A Quiet Place, A Quiet Place Part 2, Candyman, Insidious. The Blair Witch Project. Sinister, Get Out, The Purge, Halloween (2018), Paranormal Activity, Annabelle.