ಸಂಪ್ರದಾಯದಂತೆ ‘ಗೇ ಲವ್ವರ್’ ಜೊತೆ ಮದುವೆಯಾದ ಭಾರತದ ಎಂಜಿನಿಯರ್

Public TV
1 Min Read
GAY MARRIAGE COLLAGE

ಮುಂಬೈ: ಭಾರತದ ಎಂಜಿನಿಯರ್‍ವೊಬ್ಬರು ತನ್ನ ಸಲಿಂಗಿ ಪ್ರಿಯಕರನನ್ನು ಸಂಪ್ರದಾಯಬದ್ಧವಾಗಿ ಮದುವೆಯಾದ ಘಟನೆ ಡಿಸೆಂಬರ್ 30ರಂದು ಮಹಾರಾಷ್ಟ್ರದ ಯವತ್‍ಮಲ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹೃಶಿ ಮೋಹನ್‍ಕುಮಾರ್ ಸತವಾನೆ(40) ತನ್ನ ಪ್ರಿಯಕರನಾದ ವಿಯೆಟ್ನಾಂ ಮೂಲದ ವಿನ್ ಜೊತೆ ಗುರು-ಹಿರಿಯರ ಆರ್ಶಿವಾದದೊಂದಿಗೆ ಎಸ್‍ಪಿ ಕಚೇರಿಯ ಹತ್ತಿರದಲ್ಲೇ ಇರುವ ಹೋಟೆಲ್ ನಲ್ಲಿ ಮದುವೆಯಾಗಿದ್ದಾರೆ. ಹೃಶಿ ಬಾಂಬೆಯ ಐಐಟಿಯಲ್ಲಿ ಬಿ.ಟೆಕ್ ಮುಗಿಸಿ ಸದ್ಯ ಕ್ಯಾಲಿಫೋನಿರ್ಯಾದಲ್ಲಿ ವಾಸವಿದ್ದು, ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಕೂಡ ಹೊಂದಿದ್ದಾರೆ.

GAY MARRIAGE 2

ಹೃಶಿಯ ಸಾಮಾಜಿಕ ಜಾಲತಾಣ ಖಾತೆಯೊಂದರ ಪ್ರಕಾರ ಹೃಶಿ ಸಲಿಂಗ ಮದುವೆ ಆಗುತ್ತಿರುವುದು ಆತನ ಪೋಷಕರಿಗೆ ಇಷ್ಟವಿರಲಿಲ್ಲ. ಆತನ ಪೋಷಕರು ಈ ಮದುವೆಯನ್ನು ನಿರಾಕರಿಸಿದ್ದರು. ಆದ್ರೆ ಹೃಶಿ ಕೊನೆಗೂ ತನ್ನ ಪೋಷಕರನ್ನು ಒಪ್ಪಿಸಿ ಈ ಮದುವೆ ಆಗಿದ್ದಾರೆ.

GAY MARRIAGE 3

2017ರಲ್ಲಿ ಈ ಜೋಡಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಅಮೆರಿಕ ಸಂಪ್ರದಾಯದಂತೆ ಅಕ್ಟೋಬರ್‍ನಲ್ಲಿ ವಿವಾಹವಾಗಿದ್ದರು. ಅವರ ಮದುವೆಯ ಫೋಟೋವನ್ನು ಹೃಶಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದೊಂದು ಅರಳ ವಿವಾಹವಾಗಿತ್ತು ಎಂದು ಹೋಟೆಲ್ ಮಾಲೀಕ ತಿಳಿಸಿದ್ದಾರೆ.

ಸಲಿಂಗಿ ಮದುವೆ ಭಾರತದಲ್ಲಿ ಕಾನೂನು ಬಾಹಿರವಾದ ಕಾರಣ ಈ ಜೋಡಿಯ ಪೋಷಕರು ಹಾಗೂ ಹೋಟೆಲ್ ಸಿಬ್ಬಂದಿ ವಿವಾಹದ ವಿಷಯವನ್ನ ಯಾರಿಗೂ ತಿಳಿಸದೆ ಮುಚ್ಚಿಟ್ಟಿದ್ದಾರೆ. ಈ ಮದುವೆ ಎಸ್‍ಪಿ ಕಚೇರಿ ಹತ್ತಿರದಲ್ಲೇ ನಡೆದಿದ್ದರೂ ಯಾರ ಗಮನಕ್ಕೂ ಬಂದಿಲ್ಲ.

GAY MARRIAGE 4

GAY MARRIAGE 9

GAY MARRIAGE 5

GAY MARRIAGE 10

GAY MARRIAGE 6

GAY MARRIAGE 8

Share This Article
Leave a Comment

Leave a Reply

Your email address will not be published. Required fields are marked *