ವಾಷಿಂಗ್ಟನ್: ಅಮೆರಿಕದಲ್ಲಿ ವಿಮಾನಗಳ (US Flights) ಹಾರಾಟಕ್ಕೆ ಉಂಟಾಗಿರುವ ಅಡಚಣೆ 2ನೇ ದಿನವೂ ಮುಂದುವರಿದಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ನ (FAA) ವಾಯು ಸಂಚಾರ ನಿಯಂತ್ರಣ ಸಂವಹನ ವ್ಯವಸ್ಥೆಯಲ್ಲಿ ಮತ್ತೆ ದೋಷ ಕಾಣಿಸಿಕೊಂಡಿದೆ. ಈ ಹಿನ್ನೆಲೆ ರಾಷ್ಟ್ರವ್ಯಾಪಿಯಾಗಿ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸಾವಿರಾರು ವಿಮಾನಗಳ ಹಾರಾಟ ರದ್ದಾಗಿದ್ದು, ಪ್ರಯಾಣಿಕರು ಸಂಷ್ಟಕಕ್ಕೆ ಸಿಲುಕಿದ್ದಾರೆ.
ಫೆಡರಲ್ ಏವಿಯೇಷನ್ ತಾಂತ್ರಿಕ ಸಮಸ್ಯೆಗಳನ್ನ ಪರಿಹರಿಸಲು ಕೆಲಸ ಮಾಡುತ್ತಿದೆ, ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ ವೇಳೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಯುಯಾನ ಟ್ರ್ಯಾಕಿಂಗ್ ವೆಬ್ಸೈಟ್ ಫ್ಲೈಟ್ಅವೇರ್ ಮಾಹಿತಿ ಪ್ರಕಾರ, ಶನಿವಾರ ಅಮೆರಿಕದಲ್ಲಿ ವಿಮಾನಯಾನ ಸಂಸ್ಥೆಗಳು 6,150 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ, 7,300ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬವಾಗಿವೆ. ಶುಕ್ರವಾರ ಕೂಟ 9,200 ವಿಮಾನಗಳ ಹಾರಾಟ ರದ್ದಾಗಿ, 7,500 ವಿಮಾನಗ ಹಾರಾಟ ವಿಳಂಬವಾಗಿತ್ತು. ಶನಿವಾರ ಸಂಜೆ ವೇಳೆಗೆ ಭಾನುವಾರ ನಿಗದಿಯಾಗಿದ್ದ 530ಕ್ಕೂ ಹೆಚ್ಚು ವಿಮಾನಗಳನ್ನ ರದ್ದುಗೊಳಿಸಲಾಯಿತು.
ಇದರೊಂದಿಗೆ ಶನಿವಾರ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ವಿಮಾನಗಳು ರದ್ದಾಗಿವೆ. ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಂದರಲ್ಲೇ ಕನಿಷ್ಠ 430 ವಿಮಾನಗಳ ಹಾರಾಟ ವಿಳಂಬವಾಗಿದ್ದು, 380ಕ್ಕೂ ಹೆಚ್ಚು ವಿಮಾನಗಳು ಒಟ್ಟಾರೆಯಾಗಿ ರದ್ದಾಗಿವೆ.

