Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ – ಜಗತ್ತಿನ ಮೇಲೆ ಪರಿಣಾಮವೇನು ಗೊತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ – ಜಗತ್ತಿನ ಮೇಲೆ ಪರಿಣಾಮವೇನು ಗೊತ್ತಾ?

Latest

ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ – ಜಗತ್ತಿನ ಮೇಲೆ ಪರಿಣಾಮವೇನು ಗೊತ್ತಾ?

Public TV
Last updated: March 17, 2026 6:29 pm
Public TV
Share
4 Min Read
IRAN AMERICA TUMBNAIL
SHARE

ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ಕಾರಣಕ್ಕೆ ಖಾರ್ಗ್‌ನ ಕೆಲವೆಡೆ ಬಾಂಬ್ ದಾಳಿ ನಡೆಸಿದ್ದು, ಇರಾನ್‌ನ ತೈಲ ರಫ್ತು ಮತ್ತು ಆರ್ಥಿಕತೆಗೆ ಹೊಡೆತ ನೀಡುವ ಬೆದರಿಕೆ ಹಾಕಿದ್ದಾರೆ. ಈ ದಾಳಿಯಿಂದ ಜಾಗತಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಕಚ್ಚಾ ತೈಲ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಈ ದಾಳಿಯಿಂದ ಜಗತ್ತಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಖಾರ್ಗ್‌ ಇರಾನ್‌ನ ಬೆನ್ನೆಲುಬು
ಇರಾನ್‌ನ ಆರ್ಥಿಕತೆಯ ಬೆನ್ನೆಲುಬು ಎನ್ನಲಾದ ಖಾರ್ಗ್ ದ್ವೀಪದ (Kharg Island) ಮೇಲೆ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳ ಮಳೆ ಸುರಿಸಿದೆ. ಇದರಿಂದ ಇರಾನ್‌ನ ತೈಲ ರಫ್ತು ಮತ್ತು ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಘೋಷಣೆ ಮಾಡಿದ್ದಾರೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ಹಡಗುಗಳ ಮುಕ್ತ ಸಂಚಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಮೆರಿಕ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಎಚ್ಚರಿಕೆ ನೀಡಿದ ಮರುದಿನವೇ ಇರಾನ್ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ: ಇಸ್ರೇಲ್‌

Kharg Island

ಖಾರ್ಗ್‌ ಮೇಲೆ ಟ್ರಂಪ್‌ ಕಣ್ಣು
ಇರಾನ್ ಹಾಗೂ ಇಸ್ರೇಲ್ ಮಧ್ಯೆ ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇರಾನ್ ಮುಕುಟ ಖಾರ್ಗ್ ವಶಕ್ಕೆ ಸೇನೆಯನ್ನು ಕಳಿಸಲು ಟ್ರಂಪ್ ಮುಂದಾಗಿದ್ದಾರೆ. ಆದರೆ, ಹಾರ್ಮುಜ್ ಜಲಸಂಧಿ ವಶಕ್ಕೆ ಯುದ್ಧನೌಕೆಗಳನ್ನು ಕಳಿಸಿಕೊಡಿ ಅಂತ ಕರೆ ನೀಡಿದ್ದ ಟ್ರಂಪ್‍ಗೆ ಮುಖಭಂಗವಾಗಿದೆ. ಬ್ರಿಟನ್, ಆಸ್ಟ್ರೇಲಿಯಾದಂಥ ಮಿತ್ರ ರಾಷ್ಟ್ರಗಳೇ ಸಾರಾಸಗಟಾಗಿ ನಿರಾಕರಣೆ ಮಾಡಿವೆ. ಜಪಾನ್ ಹಾಗೂ ಆಸ್ಟ್ರೇಲಿಯಾ ಯುದ್ಧ ನೌಕೆಗಳನ್ನು ಕಳುಹಿಸಿ ಕೊಡುವ ಪ್ರಶ್ನೆಯೇ ಇಲ್ಲವೆಂದಿವೆ.

ಇದರ ನಡುವೆ ಟ್ರಂಪ್‍ಗೆ ಇರಾನ್ ಮತ್ತೆ ತಿರುಗೇಟು ನೀಡಿದೆ. ಶತ್ರುಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತವಾಗಿ ಇಡಲ್ಲ ಎಂದಿದೆ. ಇನ್ನೂ, 16 ದಿನದ ಯುದ್ಧಕ್ಕೆ ಅಮೆರಿಕ 12 ಬಿಲಿಯನ್ ಡಾಲರ್ ಖರ್ಚು ಮಾಡಿದೆ ಅಂತ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಹೇಳಿದ್ದಾರೆ.

Kharg Island 1

ಅಮೆರಿಕದಿಂದ ಖಾರ್ಗ್‌ ವಶಕ್ಕೆ ಪಡೆದಿದ್ದ ಇರಾನ್‌
ಇರಾನ್‌ನ ತೈಲ ನಿಕ್ಷೇಪಗಳಿಂದ ಬರುವ ಪೈಪ್‌ಲೈನ್‌ಗಳು ಖಾರ್ಗ್‌ನಲ್ಲಿ ಕೊನೆಗೊಳ್ಳುತ್ತವೆ. ಅಮೆರಿಕದ ತೈಲ ಸಮೂಹವಾದ ಅಮೇರಿಕನ್ ಆಯಿಲ್ ಕಂಪನಿ ಸ್ಥಾಪಿಸಿದ ಇದನ್ನು 1979 ರ ಕ್ರಾಂತಿಯ ಸಮಯದಲ್ಲಿ ಇರಾನ್ ವಶಪಡಿಸಿಕೊಂಡಿತ್ತು. ಇದನ್ನು ಅಮೆರಿಕ ವಶಕ್ಕೆ ಪಡೆದರೆ ತೈಲ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಬಹುದು ಎಂಬುದು ಅದರ ಲೆಕ್ಕಾಚಾರವಾಗಿದೆ.

ಖಾರ್ಗ್ ಪ್ರಾಮುಖ್ಯತೆ ಏನು?
ಇರಾನ್‌ನ ಒಟ್ಟು ಕಚ್ಚಾ ತೈಲ ರಫ್ತಿನ ಸುಮಾರು 80 ರಿಂದ 90% ಭಾಗವು ಈ ಒಂದೇ ದ್ವೀಪದಿಂದ ನಡೆಯುತ್ತದೆ. ಇಲ್ಲಿ ಬೃಹತ್ ತೈಲ ಟರ್ಮಿನಲ್‌ಗಳು, ಪೈಪ್‌ಲೈನ್‌ಗಳು ಮತ್ತು ಸಂಗ್ರಹಣಾ ಟ್ಯಾಂಕ್‌ಗಳಿವೆ. 1960ರ ದಶಕದ ಹೂಡಿಕೆಯ ನಂತರ ಈ ದ್ವೀಪವು ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿ ಬೆಳೆದಿದೆ. ಇಲ್ಲಿ ಪ್ರತಿದಿನ ಸುಮಾರು 70 ಲಕ್ಷ ಬ್ಯಾರೆಲ್ ತೈಲವನ್ನು ಹಡಗುಗಳಿಗೆ ಲೋಡ್ ಮಾಡುವ ಸಾಮರ್ಥ್ಯವಿದೆ.

Donald Trump Kharg Island

ಯುದ್ಧದ ನಡುವೆಯೂ ನಿಲ್ಲದ ರಫ್ತು
ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದರೂ, ಖಾರ್ಗ್ ದ್ವೀಪದ ಮೇಲೆ ಇದುವರೆಗೆ ದಾಳಿ ಮಾಡಿರಲಿಲ್ಲ. ಆದರೆ ಈಗ ಇರಾನ್‌ನ ಆರ್ಥಿಕತೆ ಕುಂಠಿತಗೊಳಿಸಲು ಅಮೆರಿಕ ದಾಳಿ ಮಾಡಿದೆ. ಸ್ಯಾಟಲೈಟ್ ದತ್ತಾಂಶಗಳ ಪ್ರಕಾರ, ಫೆಬ್ರವರಿ 28 ರಿಂದ ಇಲ್ಲಿಯವರೆಗೆ ಇರಾನ್ 1.2 ಕೋಟಿ ಬ್ಯಾರೆಲ್‌ಗಳಿಗಿಂತ ಹೆಚ್ಚು ತೈಲವನ್ನು ರಫ್ತು ಮಾಡಿದೆ. ಟ್ರ್ಯಾಕಿಂಗ್ ಸಿಸ್ಟಮ್ ಆಫ್ ಮಾಡಿ ಸಂಚರಿಸುವ ‘ಡಾರ್ಕ್ ಫ್ಲೀಟ್’ (Dark Fleet) ಹಡಗುಗಳ ಮೂಲಕ ಇರಾನ್ ಗುಟ್ಟಾಗಿ ತೈಲ ಸಾಗಿಸುತ್ತಿದೆ ಎಂದು ವರದಿಯಾಗಿತ್ತು.

ಜಾಗತಿಕ ಪರಿಣಾಮಗಳೇನು?
ಖಾರ್ಗ್ ದ್ವೀಪದ ಮೇಲಿನ ದಾಳಿಯಿಂದ ಎರಡು ಪ್ರಮುಖ ಅನಾಹುತಗಳು ಸಂಭವಿಸಬಹುದು. ಇರಾನ್ ಸರ್ಕಾರದ ಮಿಲಿಟರಿ ಶಕ್ತಿಗೆ ತೈಲ ಮಾರಾಟವೇ ಮೂಲ ಹಣಕಾಸಿನ ನೆರವು. ಇದು ನಿಂತರೆ ಇರಾನ್ ದೀರ್ಘಕಾಲ ಯುದ್ಧ ಮಾಡುವುದು ಕಷ್ಟವಾಗುತ್ತದೆ. ಜಗತ್ತಿನ 20% ತೈಲವು ಹಾದುಹೋಗುವ ‘ಹಾರ್ಮುಜ್ ಜಲಸಂಧಿ’ಯ ಸಮೀಪವೇ ಈ ದ್ವೀಪ ಇರುವುದರಿಂದ, ದಾಳಿ ನಡೆದರೆ ಜಾಗತಿಕ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಕನಿಷ್ಠ 10 ಡಾಲರ್‌ಗಳಷ್ಟು ಏರಿಕೆಯಾಗಬಹುದು. ಇದು ವಿಶ್ವದ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡಲಿದೆ.‌

Strait of Hormuz India Flagged Fuel Tanker

ಈ ದ್ವೀಪದ ಮೇಲೆ ದಾಳಿಯಿಂದ ಇರಾನ್‌ನ ಆರ್ಥಿಕತೆ ಸಂಪೂರ್ಣವಾಗಿ ಕುಸಿದು ಹೋಗಲಿದೆ. ಎರಡನೆಯದಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ಈ ದ್ವೀಪದ ಮೇಲಿನ ಒಂದು ಸಣ್ಣ ದಾಳಿ ಕೂಡ ‘ಮೂರನೇ ಮಹಾಯುದ್ಧ’ಕ್ಕೆ ನಾಂದಿ ಹಾಡಬಹುದು ಎಂದು ಎಚ್ಚರಿಸಿದ್ದಾರೆ.

ಚೀನಾ ಮೇಲಿನ ಪರಿಣಾಮವೇನು?
ಇರಾನ್‌ನಿಂದ ಖಾರ್ಗ್ ದ್ವೀಪದ ಮೂಲಕ ರವಾನೆಯಾಗುವ ಹೆಚ್ಚಿನ ತೈಲ ಚೀನಾಕ್ಕೆ ಹೋಗುತ್ತದೆ. ಚೀನಾ ಜಾಗತಿಕ ಕಚ್ಚಾ ತೈಲ ಆಮದುದಾರರಲ್ಲಿ ಅಗ್ರಸ್ಥಾನದಲ್ಲಿದೆ.‌

ಮಾಹಿತಿಯ ಪ್ರಕಾರ, ಚೀನಾ ಇರಾನಿನ ತೈಲದ ಅತಿದೊಡ್ಡ ಖರೀದಿದಾರ ರಾಷ್ಟ್ರವಾಗಿದೆ. 2024 ರಲ್ಲಿ ಚೀನಾ ದೇಶದ ತೈಲ ರಫ್ತಿನ ಸುಮಾರು 91 ಪ್ರತಿಶತದಷ್ಟು ಇರಾನ್ ಮೇಲೆಯೇ ಅವಲಂಬಿಸಿದೆ. ಕಳೆದ ವರ್ಷ, ಚೀನಾ ದಿನಕ್ಕೆ ಸರಾಸರಿ 1.38 ಮಿಲಿಯನ್ ಬ್ಯಾರೆಲ್‌ಗಳಷ್ಟು ಇರಾನಿನ ತೈಲವನ್ನು ಖರೀದಿಸಿದೆ ಎಂದು ವರದಿಯಾಗಿದೆ. ನಡೆಯುತ್ತಿರುವ ಯುದ್ಧದಿಂದ ಪೂರೈಕೆ ಅಡಚಣೆಗೆ ಒಳಗಾದ ಮೊದಲ ದೇಶ ಚೀನಾ ಆಗಿದೆ. ಇದರಿಂದ ಚೀನಾದಲ್ಲಿ ಇಂಧನ ಕೊರತೆ ಉಂಟಾಗುವ ಸಾಧ್ಯತೆ ಇದೆ.

ಪರಮಾಣು ಅಸ್ತ್ರ ಹೊಂದಲು ಬಿಡಲ್ಲ – ಟ್ರಂಪ್‌ ಮತ್ತೆ ಗುಡುಗು
ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವಂತಿಲ್ಲ. ವಿಶ್ವದ ಶಾಂತಿಗೆ ಧಕ್ಕೆ ತರುವ ಸಾಮರ್ಥ್ಯವನ್ನು ಇರಾನ್‌ಗೆ ಪಡೆಯಲು ಬಿಡಲ್ಲ. ಇರಾನ್ ಮಿಲಿಟರಿ ಪಡೆಗಳು ಕೂಡಲೇ ಶರಣಾಗಬೇಕು. ದೇಶವನ್ನು ಉಳಿಸಿಕೊಳ್ಳಬೇಕಾದರೆ ಆಯುಧ ಬಿಡಬೇಕು ಎಂದು ಇರಾನ್‌ಗೆ ಮತ್ತೆ ಟ್ರಂಪ್ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 18ನೇ ದಿನಕ್ಕೆ ಕಾಲಿಟ್ಟ ಯುದ್ಧ – ಇರಾನ್‌ನ 200ಕ್ಕೂ ಹೆಚ್ಚು ಸೇನಾ ನೆಲೆಗಳು ಉಡೀಸ್

TAGGED:americadonald trumpHormuziranIsraelKharg Islandಇರಾನ್ಖಾರ್ಗ್
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

Mandya Contractor Death copy
Crime

ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಕಂಟ್ರಾಕ್ಟರ್ ಶವವಾಗಿ ಪತ್ತೆ – ಕೊಲೆ ಶಂಕೆ

Public TV
By Public TV
55 minutes ago
Mojtaba Khamenei
Latest

ಯುದ್ಧದ ಟೆನ್ಷನ್‌ ಮಧ್ಯೆ ಇರಾನ್‌ಗೆ ದೊಡ್ಡ ಆಘಾತ – ಪ್ರಜ್ಞಾಹೀನ ಸ್ಥಿತಿಯಲ್ಲಿ ಸುಪ್ರೀಂ ಲೀಡರ್‌

Public TV
By Public TV
1 hour ago
Lokayukta Raid
Bellary

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ರಾಜ್ಯದ 4 ಕಡೆ ಲೋಕಾಯುಕ್ತ ದಾಳಿ

Public TV
By Public TV
2 hours ago
Snehamayi Krishna
Districts

ಸಿಎಂ, ಮತ್ತವರ ಕುಟುಂಬಕ್ಕೆ ಶಿಕ್ಷೆ ಆಗುವುದು ನಿಶ್ಚಿತ: ಸ್ನೇಹಮಯಿ ಕೃಷ್ಣ

Public TV
By Public TV
2 hours ago
Shirin Sharmin Chaudhury
Latest

ಬಾಂಗ್ಲಾದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Public TV
By Public TV
3 hours ago
Iran Power Plants
Latest

ಟ್ರಂಪ್‌ಗೆ ಟೆನ್ಷನ್‌ ಕೊಟ್ಟ ಇರಾನ್‌ – ವಿದ್ಯುತ್‌ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸಲು ದೇಶದ ಯುವ ಸಮೂಹಕ್ಕೆ ಕರೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?