ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿಗೆ ವ್ಯಂಗ್ಯವಾಡುವಂತೆ ಉರ್ಫಿ ಹೊಸದೊಂದು ಪೋಸ್ಟ್ ಮಾಡಿದ್ದಾರೆ. ತಾವು ಕಂಬಿಗಳ ಹಿಂದಿ ಬಿಕಿನಿಯಲ್ಲಿ ನಿಂತಿರುವ ವಿಡಿಯೋವೊಂದನ್ನು ಅವರು ಹಾಕಿದ್ದಾರೆ. ಈ ಮೂಲಕ ದುಬೈನಲ್ಲಿ ಏನಾಯಿತು ಎನ್ನುವುದರ ಬಗ್ಗೆ ವಿವರನ್ನೂ ಕೊಟ್ಟಿದ್ದಾರೆ. ದುಬೈನಲ್ಲಿ ಅಷ್ಟೊಂದು ರಾದ್ಧಾಂತವಾಗಿದ್ದರೂ ಏನೂ ಆಗಿಲ್ಲ ಎನ್ನುವಂತೆ ಅವರು ಪೋಸ್ ನೀಡಿದ್ದಾರೆ.
Advertisement
ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ದುಬೈನಲ್ಲಿ ಅವರು ಚಿತ್ರೀಕರಣ ಮಾಡುತ್ತಿದ್ದಾಗ ಯುಎಇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನುವುದು ದೃಢವಾಗಿತ್ತು. ಪ್ರವಾಸಕ್ಕೆಂದು ತೆರಳಿದ್ದ ಉರ್ಫಿಯು ಸಾರ್ವಜನಿಕವಾಗಿ ಅರೆಬರೆ ಬಟ್ಟೆಯನ್ನು ಹಾಕಿಕೊಂಡಿದ್ದರು ಎಂದಿದ್ದಾರೆ ದುಬೈ ಪೊಲೀಸರು. ಈ ವಿಚಾರವಾಗಿ ಮಾಧ್ಯಮಗಳು ಉರ್ಫಿಯನ್ನು ಸಂಪರ್ಕಿಸಿದರೂ, ಈ ಕುರಿತು ಅವರು ಮಾಹಿತಿ ನೀಡಲು ನಿರಾಕರಿಸಿದ್ದರು. ದುಬೈನಲ್ಲಿ ಈ ರೀತಿಯ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಚಿತ್ರೀಕರಣ ಮಾಡಲು ಅವಕಾಶವಿಲ್ಲದ ಕಾರಣ ಈ ರೀತಿಯಲ್ಲಿ ಅವರು ಸಂಕಷ್ಟ ಎದುರಿಸಬೇಕಾಗಿತ್ತು. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ
Advertisement
Advertisement
ಕೆಲವು ದಿನಗಳ ಹಿಂದೆ ದುಬೈನಲ್ಲಿ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಆಸ್ಪತ್ರೆಯ ಬೆಡ್ ಮೇಲಿಂದಲೇ ತೆಗೆದ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋದಲ್ಲಿ ತಮಗಿರುವ ಸಮಸ್ಯೆ ಬಗ್ಗೆಯೂ ಅವರು ಹೇಳಿಕೊಂಡಿದ್ದರು ಅದರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದಿದ್ದಾರು. ದುಬೈನಲ್ಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ.
Advertisement
ಇತ್ತೀಚಿನ ದಿನಗಳಲ್ಲಿ ಉರ್ಫಿ ಜಾವೇದ್ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಚಿತ್ರ ವಿಚಿತ್ರ ಬಟ್ಟೆ ಹಾಕುವ ಕಾರಣದಿಂದಾಗಿಯೇ ಅವರ ಮೇಲೆ ದೂರನ್ನು ನೀಡಿದ್ದಾರೆ. ಕೆಲ ಪ್ರಕರಣಗಳು ಅವರನ್ನು ಬೆನ್ನತ್ತಿ ಕಾಡುತ್ತಿವೆ. ಇವುಗಳಿಂದ ತಪ್ಪಿಸಿಕೊಳ್ಳಲು ಅವರು ಆಸ್ಪತ್ರೆಯ ನಾಟಕ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಸ್ವತಃ ಉರ್ಫಿ ಅವರೇ ಹೇಳಿರುವಂತೆ ಅವರಿಗೆ ‘ಲಾರಿಂಜೈಟಿಸ್’ ತೊಂದರೆ ಆಗಿದೆಯಂತೆ.
ಮನುಷ್ಯನ ಧ್ವನಿ ಪೆಟ್ಟಿಗೆಗೆ ತಗಲುವ ಸೋಂಕಿಗೆ ಲಾರಿಂಜೈಟಿಸ್ ಎಂದು ಕರೆಯುತ್ತಾರೆ. ಉರ್ಫಿಯ ಗಂಟಲಿಗೆ ಈ ಸೋಂಕು ತಗುಲಿದಿಯಂತೆ. ಅಷ್ಟಕ್ಕೆ ಭಯ ಪಟ್ಟುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಕಿತ್ಸೆಯನ್ನೂ ಅವರು ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಇರುವಾಗಲೇ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕೆಲವರು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ.