ಲಕ್ನೋ: ಮೊಬೈಲ್ನಲ್ಲಿ (Mobile) ಚಾಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಾಯಿ (Mother) ಗದರಿದ್ದಕ್ಕೆ ಮನನೊಂದು ಹದಿಹರೆಯದ ಬಾಲಕಿಯೊಬ್ಬಳು (Girl) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ದೀಕ್ಷಾ (16) ಮೃತ ವಿದ್ಯಾರ್ಥಿನಿ (Student). ಗಂಗಾಪುರ ಕಾಲೊನಿ ಪ್ರದೇಶದಲ್ಲಿನ ತನ್ನ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಕ್ಷಾ ಪತ್ತೆಯಾಗಿದ್ದಾಳೆ. ದೀಕ್ಷಾ ಶಾಲೆಯಿಂದ ಮನೆಗೆ ಹಿಂದಿರುಗಿದ ತಕ್ಷಣ ಮೊಬೈಲ್ ಹಿಡಿಕೊಂಡು ಚಾಟ್ ಮಾಡುತ್ತಾ ಕುಳಿತಿದ್ದಳು. ಇದನ್ನೂ ಓದಿ: 5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!
ಈ ಹಿನ್ನೆಲೆಯಲ್ಲಿ ದೀಕ್ಷಾಳ ತಾಯಿ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳುತ್ತಿಯಾ ಎಂದು ಗದರಿದ್ದಾಳೆ. ಇದಾದ ನಂತರ ದೀಕ್ಷಾ ರಾತ್ರಿ ತನ್ನ ಕೋಠಡಿಗೆ ಹೋಗಿ ನೇಣು ಬಿಗಿದುಕೊಂಡಿದ್ದಾಳೆ. ಇದನ್ನು ನೋಡಿದ ದೀಕ್ಷಾಳ ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಚಿಕನ್ ಬೇಯಿಸುವ ವಿಚಾರಕ್ಕೆ ದಂಪತಿ ಜಗಳ- ಬಗೆಹರಿಸಲು ಹೋಗಿದ್ದ ನೆರೆ ಮನೆಯಾತ ಸಾವು