ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಸಕಲ ತಯಾರಿ ಮಾಡಿಕೊಂಡಿದ್ದಾರೆ. ಕೇವಲ ಎರಡೇ ದಿನದಲ್ಲಿ ಮತ್ತೊಂದು ಟೀಸರ್ ಹೊರ ಬಿಡಲಿದ್ದಾರೆ. ಗ್ಲೋಬಲ್ ಸಿನಿಮಾ ‘ಯುಐ’ ಈ ಬಾರಿ ಜಗತ್ತಿನ ತುಂಬಾ ಸದ್ದು ಮಾಡಲಿದೆ. ಜನವರಿ 8ರಂದು ‘ಯುಐ’ (UI Film) ಟೀಸರ್ ಅನಾವರಣ ಆಗಲಿದೆ. ಹೇಗಿರಲಿದೆ ಟೀಸರ್ ? ಯಾರ‍್ಯಾರು ಬರಲಿದ್ದಾರೆ ಆ ಸಂಭ್ರಮಕ್ಕೆ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:ನನ್ನ ಪತ್ನಿ ನಿಮ್ಮಂತೆಯೇ ಇರಬೇಕು ಎಂದ ಅಭಿಮಾನಿಗೆ ರಶ್ಮಿಕಾ ಏನಂದ್ರು ಗೊತ್ತಾ?
‘ಯುಐ’ ಸಿನಿಮಾ ಇದು ಉಪೇಂದ್ರ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ಗ್ಲೋಬಲ್ ಸಿನಿಮಾ. ಉಪ್ಪಿಯ ತಾಕತ್ತು ಏನೆಂದು ದಕ್ಷಿಣ ಭಾರತಕ್ಕೆ ಹೆಚ್ಚು ಗೊತ್ತು. ಈ ಬಾರಿ ಬಾಲಿವುಡ್ ಮಾತ್ರ ಅಲ್ಲ. ಇಡೀ ವಿಶ್ವಕ್ಕೇ ಉಪ್ಪಿ ಮೇಧಾವಿತನ ತಿಳಿಯಲಿದೆ. ಅದಕ್ಕಾಗಿಯೇ ‘ಯುಐ’ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಹಗಲು ರಾತ್ರಿ ಒದ್ದಾಡಿದ್ದಾರೆ. ಅದರ ಪರಿಣಾಮದ ಚಿತ್ರದ ಟೀಸರ್ ಜ.8ರಂದು ಅನಾವರಣ ಆಗಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಯುಐ ಟೀಸರ್ ಜಗತ್ತಿನ ಮುಂದೆ ರಿವೀಲ್ ಆಗಲಿದೆ. ಟಾಲಿವುಡ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್(Allu Aravind), ಕನ್ನಡದ ಶಿವಣ್ಣ (Shivarajkumar), ಡಾಲಿ (Daali) ಕೂಡ ಹಾಜರಿ ಹಾಕಲಿದ್ದಾರೆ.
ಕಿಚ್ಚ ಸುದೀಪ್ (Sudeep) ಕೂಡ ‘ಯುಐ’ ಚಿತ್ರಕ್ಕೆ ಕೈ ಜೋಡಿಸಲಿದ್ದಾರೆ. ಚಿತ್ರೀಕರಣಕ್ಕಾಗಿ ಹೊರಗಿರುವ ಕಿಚ್ಚ ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಹೇಗಿರಲಿದೆ ಟೀಸರ್ ಎನ್ನುವುದನ್ನು ನೋಡಿದ ಮೇಲೆಯೆ ಹೇಳಬೇಕು. ಒಟ್ಟಿನಲ್ಲಿ ಕಳೆದ ಬಾರಿ ಟೀಸರ್‌ನಲ್ಲಿ ಬರೀ ಸೌಂಡ್ ಇತ್ತು. ಈ ಬಾರಿ ದೃಶ್ಯ ಕೂಡ ಇರಲಿವೆ. ಅಲ್ಲಿಗೆ ಏನು ಹೊಸದನ್ನು ಕೊಡಲಿದ್ದಾರೆ ಉಪ್ಪಿ? ಅದು ಗೊತ್ತಾಗಲಿದೆ ಏನಾದರಾಗಲಿ. ‘ಯುಐ’ ಸಿನಿಮಾ ಈಗಿನಿಂದಲೇ ಮೆರವಣಿಗೆ ಹೊರಟಿದೆ. ಅದಕ್ಕೆ ಕೋಟಿ ಕೋಟಿ ಕಾಸು ಸುರಿದಿದ್ದಾರೆ ಲಹರಿ ಸಂಸ್ಥೆಯ ಮನೋಹರ್ ನಾಯ್ಡು- ಸಲಗ ಕೆ.ಪಿ.ಶ್ರೀಕಾಂತ್.
ಉಪ್ಪಿ ಫ್ಯಾನ್ಸ್ ಮಾತ್ರ ‘ಯುಐ’ ಚಿತ್ರದಲ್ಲಿನ ಉಪೇಂದ್ರ ಗೆಟಪ್ ನೋಡೋದ್ದಕ್ಕೆ ರೆಡಿಯಾಗಿದ್ದಾರೆ. ಉಪೇಂದ್ರ ಅವತಾರ ಹೇಗಿರಲಿದೆ ಎಂಬುದನ್ನು ತಿಳಿಯಲು ಕಾತರದಿಂದ ಎದುರು ನೋಡ್ತಿದ್ದಾರೆ.