ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸದ್ಯ ‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದರ ನಡುವೆ ಅಭಿಮಾನಿಯೊಬ್ಬ, ನಿಮ್ಮಂತೆಯೇ ಪತ್ನಿ ಸಿಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ರಶ್ಮಿಕಾ, ಸ್ವೀಟ್ ಆಗಿ ರಿಪ್ಲೈ ನೀಡಿದ್ದಾರೆ. ಇದನ್ನೂ ಓದಿ:ಸಂಗೀತಾಗೆ ನಂಬಿಕೆ ದ್ರೋಹ- ಗುರೂಜಿ ಸ್ಫೋಟಕ ಭವಿಷ್ಯ
Advertisement
‘ಅನಿಮಲ್’ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ನಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. ಈ ಖುಷಿಯ ನಡುವೆ ರಶ್ಮಿಕಾ ಮಂದಣ್ಣ ಅಭಿಮಾನಿಗೆ ಮದುವೆ ಬಗ್ಗೆ ರಿಯಾಕ್ಟ್ ಮಾಡಿರೋದು ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಯೊಬ್ಬ ರಶ್ಮಿಕಾ (Rashmika Mandanna) ಫೋಟೋ ಶೇರ್ ಮಾಡಿ, ನೀವು ನಮ್ಮ ನ್ಯಾಷನಲ್ ಕ್ರಶ್ ಮೇಡಂ ಎಂದು ಬರೆದುಕೊಂಡಿದ್ದಾರೆ. ಬಳಿಕ ಒಂದು ದಿನ ನಾನು ನಿಮ್ಮ ರೀತಿಯ ಪತ್ನಿಯನ್ನು ಪಡೆಯುತ್ತೇನೆ ಎಂಬ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.
Advertisement
You are our National Crush Mam.
I hope one day I will get a wife like you ????@iamRashmika ????❤️#RashmikaMandanna pic.twitter.com/r4pRc5GN7A
— Shah Rock (@Brocklesner1596) December 28, 2023
Advertisement
ಈ ಪೋಸ್ಟ್ ರಶ್ಮಿಕಾ ಗಮನಕ್ಕೂ ಬಂದಿದ್ದು, ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಹ್ಹಹಾ.. ನಾನು ಮದುವೆಯಾದಾಗ ನನ್ನ ಪತಿ ಕೂಡ ಹೀಗೆ ಭಾವಿಸುತ್ತಾರೆ ಎಂದು ಅಂದುಕೊಂಡಿದ್ದೇನೆ ಎಂದು ರಶ್ಮಿಕಾ ಉತ್ತರಿಸಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
Advertisement
ಇನ್ನೂ ರಶ್ಮಿಕಾ ಕೈಯಲ್ಲಿ ಪುಷ್ಪ 2 (Pushpa 2), ಗರ್ಲ್‌ಫ್ರೆಂಡ್, ಚಾವಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಕನ್ನಡದ ಸಿನಿಮಾವೊಂದಕ್ಕೆ ಸಹಿ ಮಾಡಿರೋದಾಗಿ ನಟಿ ಅನಿಮಲ್ ಪ್ರಚಾರ ಕಾರ್ಯದ ವೇಳೆ ಹೇಳಿದ್ದರು.