ಲಕ್ನೋ: ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡುತ್ತಿದ್ದ ಸರ್ಕಾರಿ ಅಧಿಕಾರಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದು, ಆಕೆ ಮೇಲೆ ಹಲ್ಲೆ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಚ್ಚಾ ರಾಮ್ ಯಾದವ್ ಬಂಧಿತ ಅಧಿಕಾರಿ. ಯುಪಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಗುತ್ತಿಗೆ ಉದ್ಯೋಗಿಯಾಗಿರುವ 30 ವರ್ಷದ ವಿವಾಹಿತ ಮಹಿಳೆ ಮೇಲೆ ಇಚ್ಚಾ ರಾಮ್ ಯಾದವ್ ಹಲ್ಲೆ ಮಾಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪರಿಣಾಮ ಇಚ್ಚಾ ರಾಮ್ ಮೇಲೆ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು
Advertisement
Advertisement
ವೀಡಿಯೋದಲ್ಲಿ ಇಚ್ಚಾ ರಾಮ್ ಯಾದವ್, ಮಹಿಳೆಯ ಮೇಲೆ ಪಟ್ಟು ಬಿಡದೆ ಹಲ್ಲೆ ಮಾಡುತ್ತಿದ್ದು, ಮಹಿಳೆ ಅವನನ್ನು ದೂರ ತಳ್ಳತ್ತ, ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಪಡುತ್ತಿರುವ ದೃಶ್ಯ ಸೆರೆಯಾಗಿದೆ. ಅದು ಅಲ್ಲದೇ ವೀಡಿಯೋದಲ್ಲಿ ಯಾದವ್ ಆಕೆಯನ್ನು ಚುಂಬಿಸುವ ದೃಶ್ಯವು ಸಹ ಸೆರೆಯಾಗಿದೆ.
Advertisement
ಒಂದು ವಾರದ ಹಿಂದೆ ಈ ಕುರಿತು ಮಹಿಳೆ ದೂರು ನೀಡಿದ್ದು, ಪೊಲೀಸರು ತಡವಾಗಿ ಆತನನ್ನು ಬಂಧಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇಂದು ಬೆಳಗ್ಗೆ, ಟ್ವಿಟ್ಟರ್‍ನಲ್ಲಿ ಇಚ್ಛಾ ರಾಮ್ ಜೈಲಿನಲ್ಲಿರುವ ಫೋಟೋವನ್ನು ಟ್ವೀಟ್ ಮಾಡಲಾಗಿದ್ದು, ಅನೇಕರು ಯುಪಿ ಪೊಲೀಸರ ತಡವಾದ ಕ್ರಮವನ್ನು ತೆಗೆದುಕೊಂಡಿರುವುದರ ಕುರಿತು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್
Advertisement
ಈ ಕುರಿತು ಮಹಿಳೆ ದೂರಿನಲ್ಲಿ, ನಾನು 2013 ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 2018 ರಿಂದ ವಿಭಾಗದ ಉಸ್ತುವಾರಿ ಅಧಿಕಾರಿ ಇಚ್ಚಾ ರಾಮ್ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಇಬ್ಬರೂ ಬಾಪು ಭವನದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.
ಇಚ್ಚಾ ರಾಮ್ ನನಗೆ ಕಿರುಕುಳ ಕೊಡುತ್ತಿದ್ದು, ನನಗೆ ಸಹಕರಿಸಿದರೆ ನಿನ್ನ ಕೆಲಸ ಖಾಯಂ ಮಾಡಿಸುವುದಾಗಿ ಭರವಸೆ ನೀಡುತ್ತಿದ್ದನು. ನಾನು ಹೇಳಿದ ರೀತಿ ಕೇಳುವುದಿಲ್ಲ ಎಂದರೇ ಕೆಲಸದಿಂದ ವಜಾ ಮಾಡಿಸುವುದಾಗಿ ಮತ್ತು ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.