BollywoodCinemaLatestMain PostNational

ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಮತ್ತು ಅವರ ಸಹೋದರಿ ಖುಷಿ ಕಪೂರ್ ದುಬೈನಲ್ಲಿ ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡುತ್ತಿದ್ದಾರೆ.

ದುಬೈನಲ್ಲಿ ಜಾನ್ವಿ ಮತ್ತು ಖುಷಿ ಕಪೂರ್ ಡೆಸರ್ಟ್ ಸಫಾರಿಗೆ ಹೋಗಿದ್ದು, ಕ್ವಾಡ್ ಬೈಕ್‍ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಜಾನ್ವಿ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ‘ವೆಸ್ಸೆರ್ಟ್ ಇನ್ ದಿ ಡೆಸರ್ಟ್'(ಮರುಭೂಮಿಯಲ್ಲಿ ಸಿಹಿ ಕ್ಷಣ) ಎಂದು ಬರೆದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Janhvi Kapoor (@janhvikapoor)

ಜಾನ್ವಿ ಮತ್ತು ಖುಷಿ ಕಪೂರ್ ಕಂದು ಬಣ್ಣದ ಕ್ರಾಪ್ ಟಾಪ್ ಮತ್ತು ಶಾರ್ಟ್ಸ್ ನಲ್ಲಿ ಹಾಕಿಕೊಂಡಿದ್ದು, ಅವಳಿಗಳಂತೆ ಕಾಣುತ್ತಿದ್ದಾರೆ. ಖುಷಿ ಕಪೂರ್ ಕೂಡ ತಮ್ಮ ಫೋಟೋವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಖುಷಿ ಕಪೂರ್ ಫೋಟೋ ನೋಡಿ, ಅಂಶುಲಾ ಕಪೂರ್ ಫೈರ್ ಎಮೋಜಿಯನ್ನು ಹಾಕಿದ್ದು, ಆಲಿಯಾ ‘ಧೂಮ್ ಮಚಾಲೆ’ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಮತ್ತು ದಿ.ನಟಿ ಶ್ರೀದೇವಿ ಅವರ ಪುತ್ರಿಯರು. ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮರಾಠಿ ಹಿಟ್ ಸಿನಿಮಾ ‘ಸೈರಾಟ್’ ಆಗಿದ್ದು, ಹಿಂದಿ ರಿಮೇಕ್ ನಲ್ಲಿ ಇವರು ನಟಿಸಿದ್ದರು. ಜಾನ್ವಿ ಓಟಿಟಿಯಲ್ಲಿ ‘ಆಂಥಾಲಜಿ ಘೋಸ್ಟ್ ಸ್ಟೋರೀಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದರು.

ಜಾನ್ವಿ ಕಪೂರ್ ಬೆಳ್ಳಿಪರದೆ ಮೇಲೆ ಕೊನೆಯದಾಗಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದರು. ಪ್ರಸ್ತುತ ಈ ನಟಿ ಕರಣ್ ಜೋಹರ್ ನಿರ್ದೇಶನದ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ವೀರವನಿತೆ ಓಬವ್ವನನ್ನು ನೆನೆದ ಮೋದಿ – ಕನ್ನಡದಲ್ಲಿ ಟ್ವೀಟ್

ಖುಷಿ ಕಪೂರ್ ಶೀಘ್ರದಲ್ಲೇ ಬಾಲಿವುಡ್‍ಗೆ ಪಾದಾರ್ಪಣೆ ಮಾಡಲಿದ್ದು, ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published.

Back to top button