ಲಕ್ನೋ: ತನ್ನನ್ನು ರಿಜೆಕ್ಟ್ ಮಾಡಿದ್ದಕ್ಕೆ ಕಟ್ಟಡದಿಂದ 22 ವರ್ಷದ ಯುವತಿಯನ್ನು ಕೆಳಗೆ ತಳ್ಳಿ, ಆಕೆಯ ಶವದೊಂದಿಗೆ ಪರಾರಿಯಾಗಲು ಯತ್ನಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶ (Uttar Pradesh) ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಗೌರವ್ ಎಂದು ಗುರುತಿಸಲಾಗಿದ್ದು, ಇದೀಗ ಈತನನ್ನು ಮೀರತ್ (Meerut) ಬಳಿ ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳಿಂದ ಶೆತಾಲ್‍ಗೆ ಗೌರವ್ ಕಿರುಕುಳ ನೀಡುತ್ತಿದ್ದನು. ಈತನ ಕಿರುಕುಳ ತಾಳಲಾರದೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ಮೃತ ಯುವತಿಯ ಸಹೋದರ ಕುನಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಕಾಪಿ ಹೊಡೆದು ಮೋಹಿನ್ ಆತ್ಮಹತ್ಯೆ – ಟೀಚರ್ ವಿರುದ್ಧ ಪ್ರಕರಣ ದಾಖಲು
Advertisement
Advertisement
ಕೆಲವು ವರ್ಷಗಳಿಂದ ಗೌರವ್‍ಗೆ ಶೆತಾಲ್ ತಿಳಿದಿದ್ದಳು. ಆದರೆ ನಂತರದ ದಿನಗಳಲ್ಲಿ ಆತನ ನಡವಳಿಕೆ ಸರಿ ಇಲ್ಲ ಎಂದು ತಿರಸ್ಕರಿಸಿದಳು. ಯಾವಾಗ ಗೌರವ್ ಕಿರುಕುಳ ನೀಡುವುದನ್ನು ನಿಲ್ಲಿಸದೇ ಹೋದ, ಆಗ ಆಕೆಯ ಕುಟುಂಬಸ್ಥರು ಸೆಪ್ಟೆಂಬರ್ 29ರಂದು ಪೊಲೀಸರು ಸಂಪರ್ಕಿಸಿ ದೂರು ದಾಖಲಿಸಿದರು. ನಂತರ ಗೌರವ್‍ನನ್ನು ಬಂಧಿಲಾಯಿತು. ಈ ವೇಳೆ ಆಕೆಯನ್ನು ಬಿಟ್ಟುಬಿಡುವುದಾಗಿ ಗೌರವ್ ಭರವಸೆ ನೀಡಿದ್ದ, ಹೀಗಾಗಿ ಅವನನ್ನು ಬಿಟ್ಟು ಕಳುಹಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶುತೋಷ್ ದ್ವಿವೇದಿ ಹೇಳಿದರು.
Advertisement
थाना सेक्टर-49 नोएडा क्षेत्र के अंतर्गत ग्राम होशियारपुर में लड़की उम्र-22 वर्ष को एक युवक जोकि उक्त लड़की से पूर्व से संपर्क में था ने बिल्डिंग से धक्का देने तथा मृतका के शव को लेकर भागने पर पुलिस द्वारा आरोपी युवक को शव सहित हिरासत में लिया गया है।
बाइट- एडीसीपी नोएडा ! pic.twitter.com/LHDborAwe6
— POLICE COMMISSIONERATE GAUTAM BUDDH NAGAR (@noidapolice) November 8, 2022
Advertisement
ಮಂಗಳವಾರ ಹೋಶಿಯಾರ್‍ಪುರದ ಶರ್ಮಾ ಮಾರ್ಕೆಟ್‍ನಲ್ಲಿರುವ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶೆತಾಲ್‍ನನ್ನು ಭೇಟಿ ಮಾಡಿ ತನ್ನನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಶೆತಾಲ್ ಮತ್ತೆ ತಿರಸ್ಕರಿಸಿದ್ದರಿಂದ ಆಕೆಯನ್ನು ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿದ್ದಾನೆ. ಬಳಿಕ ಕೆಳಗೆ ಓಡಿ ಹೋಗಿ, ನಾನು ಯುವತಿಯ ಸಹೋದರ ಎಂದು ಸ್ಥಳೀಯರ ಬಳಿ ಹೇಳಿಕೊಂಡು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ತನ್ನ ಕಾರಿನಲ್ಲಿ ಆಕೆಯ ಶವವನ್ನು ಹಾಕಿಸಿಕೊಂಡಿದ್ದನು. ಆದರೆ ಮೀರತ್ ಬಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಂತರ ಮೃತದೇಹವನ್ನು ಉತ್ತರ ಪ್ರದೇಶದ ಬಿಜ್ನೋರ್‌ಗೆ ಕೊಂಡೊಯ್ಯಲು ಪ್ಲ್ಯಾನ್ ಮಾಡಿದ್ದಾಗಿ ಗೌರವ್ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ಯುವತಿ ತನ್ನನ್ನು ಮದುವೆಯಾಗಿದ್ದಾಳೆ. ಆದರೂ ತನ್ನನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: KRSನಲ್ಲಿ ಚಿರತೆ ಕಣ್ಣಾಮುಚ್ಚಾಲೆ – ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ