DistrictsKarnatakaLatestLeading NewsMain PostMandya

KRSನಲ್ಲಿ ಚಿರತೆ ಕಣ್ಣಾಮುಚ್ಚಾಲೆ – ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ

- ಪ್ರವಾಸಿಗರ ನಿರ್ಬಂಧ ಮುಂದುವರಿಕೆ

ಮಂಡ್ಯ: ಸಕ್ಕರೆನಾಡಿನ ಜೀವನಾಡಿ ಕೆಆರ್‌ಎಸ್‌ನ (KRS) ಬೃಂದಾವನದಲ್ಲಿ ಚಿರತೆಗಳು ಅಲ್ಲಿನ ಸಿಬ್ಬಂದಿಯ ನಿದ್ದೆಗಡೆಸಿವೆ. ಪದೇ-ಪದೇ ಕೆಆರ್‌ಎಸ್ ಸುತ್ತಮುತ್ತ ಚಿರತೆ (Leopard) ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರಲ್ಲೂ ಆತಂಕ ಮೂಡಿಸಿವೆ. ಇದೀಗ ಅಧಿಕಾರಿಗಳು ಫುಲ್ ಆಕ್ಟೀವ್ ಆಗಿದ್ದು, ಅರಣ್ಯ ಇಲಾಖೆ (Forest Department) ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿ ಕಾರ್ಯಾರಚಣೆಗೆ ಇಳಿದಿದ್ದಾರೆ.

ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನ ಗಾರ್ಡನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದಿರುವಂತಹ ಪ್ರವಾಸಿ ಸ್ಥಳ. ಇದೀಗ ಈ ವಿಶ್ವ ವಿಖ್ಯಾತಿ ಪಡೆದಿರುವ ಸ್ಥಳದಲ್ಲಿ ಕಳೆದ 20 ದಿನಗಳಿಂದ ಚಿರತೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಕೆಆರ್‌ಎಸ್ ಡ್ಯಾಂ (KRS Dam) ಹಾಗೂ ಬೃಂದಾವನದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ಇಲ್ಲಿನ ಸಿಬ್ಬಂದಿ ಹಾಗೂ ಜನರಲ್ಲಿ ಸಾಕಷ್ಟು ಆತಂಕ ಎಡೆ ಮಾಡಿದೆ. ಇದರಿಂದ ಗಾಬರಿಗೊಂಡಿರುವ ಕಾವೇರಿ ನೀರಾವರಿ ನಿಗಮ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಮುಂದುವರಿಸಿದೆ. ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದಕ್ಕೆ ಹೆತ್ತತಾಯಿಯಿಂದಲೇ ಮಗುವಿನ ಕೊಲೆ

ಕಳೆದ 20 ದಿನಗಳಿಂದ ಐದಾರು ಬಾರಿ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಚಿರತೆ ಸೆರೆಯಾಗಿದೆ, ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಆದರೆ ಈ ಭಾಗದಲ್ಲಿ ಎರಡು ಚಿರತೆಗಳಿದ್ದು, ಒಂದು ಚಿರತೆ ಬೀದಿ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ರೆ, ಇನ್ನೊಂದು ಚಿರತೆ ಅಪರೂಪದ ಪ್ರಾಣಿಯಾದ ನೀರು ನಾಯಿಗಳನ್ನು ಬೇಟೆಯಾಡುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣ: ಶಾಮನೂರು ಶಿವಶಂಕರಪ್ಪ

ಕೆಆರ್‌ಎಸ್ ಹಾಗೂ ಬೃಂದಾವನದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಕಾವೇರಿ ನೀರಾವರಿ ನಿಗಮ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಒಂದು ಕಡೆ ಕಾವೇರಿ ನೀರಾವರಿ ನಿಗಮ ಇಲ್ಲಿ ಬೆಳೆದಿರುವ ಬೇಲಿಗಳನ್ನು ಕ್ಲೀನ್ ಮಾಡಿ ಕಾರ್ಯಾಚರಣೆಗೆ ಅನುಕೂಲ ಮಾಡುತ್ತಿದೆ. ಮತ್ತೊಂದು ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಕಾಣಿಸಿಕೊಂಡಿರುವ ಸ್ಥಳದಲ್ಲಿ ಟ್ರ‍್ಯಾಪ್ ಕ್ಯಾಮರಾಗಳನ್ನು ಹಾಕಿದೆ. ಈ ಟ್ರ‍್ಯಾಪ್ ಕ್ಯಾಮರಾ ಚಿರತೆಯ ಚಲನವಲನಗಳ ಚಿತ್ರಗಳನ್ನು ಸೆರೆಹಿಡಿಯಲಿದೆ. ಇದರಿಂದ ಅರಣ್ಯ ಇಲಾಖೆಗೂ ಅನುಕೂಲವಾಗಲಿದೆ. ಒಟ್ಟು ಮೂರು ಬೋನ್‌ಗಳಿರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

Live Tv

Leave a Reply

Your email address will not be published. Required fields are marked *

Back to top button