ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ʼಸೂಪರ್ ಚೀಫ್ ಜಸ್ಟಿಸ್ʼನಂತೆ ವರ್ತಿಸುತ್ತಿದ್ದಾರೆ. ತನ್ನ ನ್ಯಾಯಾಲಯದಲ್ಲಿ ಯಾರನ್ನು ಬೇಕಾದರೂ ಅಪರಾಧಿ ಮಾಡ್ತಾರೆ ಎಂದು ಯೋಗಿ ಆದಿತ್ಯನಾಥ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುಡುಗಿದ್ದಾರೆ.
ಗಲಭೆ ನಡೆಸಿದ್ದಾರೆ ಎಂದು ಆರೋಪಿಸಿ ಮುಸ್ಲಿಮರ ಮನೆ, ಅಂಗಡಿಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 1.5 ವರ್ಷದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ನೀಡಲು ಮುಂದಾದ ಮೋದಿ ಸರ್ಕಾರ
Advertisement
Advertisement
ಅಫ್ರೀನ್ ಫಾತಿಮಾ ಅವರ ಮನೆ ಆಕೆಯ ತಾಯಿಯ ಹೆಸರಿನಲ್ಲಿದೆ. 5 ಜನರನ್ನು ಕೊಂದ ಆರೋಪದ ಮೇಲೆ ಅಜಯ್ ಮಿಶ್ರಾ (ಪುತ್ರ ಆಶಿಶ್ ಮಿಶ್ರಾ) ಅವರ ಮನೆಯನ್ನು ಬಿಜೆಪಿ ಏಕೆ ಕೆಡವುತ್ತಿಲ್ಲ? ಭಾರತೀಯ ಮುಸ್ಲಿಮರಿಗೆ ಬಿಜೆಪಿ ಸಾಮೂಹಿಕ ಶಿಕ್ಷೆ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement
ಉದ್ಯೋಗ ಕಲ್ಪಿಸುವ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಓವೈಸಿ, ಮೋದಿ ಸರ್ಕಾರ ಕಳೆದ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಬದಲಿಗೆ 2024 ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕಾಗಿ ಅವರು 10 ಲಕ್ಷ ಉದ್ಯೋಗಗಳನ್ನು ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ 55 ಲಕ್ಷ ಮಂಜೂರಾದ ಹುದ್ದೆಗಳನ್ನು ಹೊಂದಿದ್ದರೂ ಕೇವಲ 10 ಲಕ್ಷ ಉದ್ಯೋಗಗಳನ್ನು ನೀಡುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಎದೆ ಮೇಲೆ ಯೋಗಿ ಟ್ಯಾಟೂ ಹಾಕಿಸಿಕೊಂಡ ಮುಸ್ಲಿಂ ಫ್ಯಾನ್