ಲಕ್ನೋ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯೋಗಿ ಆದಿತ್ಯನಾಥ್ ಅವರು ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಹೊಸ ಕಾರು ಖರೀದಿಯ ಕುರಿತು ಸುದ್ದಿಯಾಗಿದ್ದಾರೆ.
ಹೌದು. ಕಚೇರಿ ಸಿಬ್ಬಂದಿ ಮುಖ್ಯಮಂತ್ರಿಯವರ ಓಡಾಟಕ್ಕೆಂದು 3.5 ಕೋಟಿ ರೂ. ಮೌಲ್ಯದ 2 ಮರ್ಸಿಡಿಸ್ ಎಸ್‍ಯುವಿ ಕಾರುಗಳನ್ನು ಖರೀದಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಆದ್ರೆ ಸಿಎಂ ಅವರು ನನಗೆ ಹೊಸ ಕಾರಿನ ಅವಶ್ಯಕತೆ ಇಲ್ಲ ಅನ್ನೋ ಮೂಲಕ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದಾರೆ ಅಂತಾ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Advertisement
ಈ ಹಿಂದಿನ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಅವರು ಯಾವ ಕಾರ್ ಬಳಸಿದ್ದಾರೆ ಅದೇ ಕಾರನ್ನು ನಾನು ಕೂಡ ಬಳಸುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಅಂತಾ ಕಚೇರಿ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.
Advertisement
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1.5 ಕೋಟಿ ರೂ. ಮೌಲ್ಯದ 2 ಮರ್ಸಿಡಿಸ್ ಕಾರ್ ಗಳನ್ನು ಖರೀದಿಸಿದ್ದರು. ಹೀಗಾಗಿ ಇದೇ ಕಾರು ಸಾಕು ಅಂತಾ ಇದೀಗ ಸಿಎಂ ಆಗಿರೋ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.