ಮೈಸೂರು: ಸಿಎಂ ಸಿದ್ದರಾಮಯ್ಯ ಓದಿದ ಶಾಲೆ ಮತ್ತೆ ಅಸ್ಪೃಶ್ಯತೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಸಿಎಂ ಹುಟ್ಟೂರು ಸಿದ್ದರಾಮನಹುಂಡಿ ಪಕ್ಕದಲ್ಲಿನ ಕುಪ್ಪೆಗಾಲ ಸರ್ಕಾರಿ ಶಾಲೆಯಲ್ಲಿ ಸಿಎಂ ಓದಿದ್ದರು. ಇದೇ ಶಾಲೆಯಲ್ಲಿ ಈಗ ಮತ್ತೆ ಅಸ್ಪೃಶ್ಯತೆ ಮರುಕಳಿಸಿದೆ.
ಶಾಲೆಯ ಅಡುಗೆ ಸಹಾಯಕ ಹುದ್ದೆಗೆ ಪರಿಶಿಷ್ಟ ಜಾತಿಯವರು ಅರ್ಜಿಯನ್ನೇ ಹಾಕುತ್ತಿಲ್ಲ. ಅರ್ಜಿ ಹಾಕಲು ಮುಂದೆಯೂ ಬರುತ್ತಿಲ್ಲ. ಈ ಹುದ್ದೆ ಇರೋದು ಪರಿಶಿಷ್ಟ ಜಾತಿಯ ಮಹಿಳೆಯರಿಗಾಗಿ ಮಾತ್ರ. ಈ ವರ್ಷದ ಶೈಕ್ಷಣಿಕ ವರ್ಷದ ಆರಂಭದಿಂದಲೂ ಹುದ್ದೆ ಖಾಲಿಯಿದೆ.
Advertisement
ಜೂನ್ ತಿಂಗಳಿನಲ್ಲಿ ಅಡುಗೆ ಸಹಾಯಕಿ ಹುದ್ದೆ ತೊರೆದು ಹೋಗಿದ್ದರು. ನಂತರ ಆ ಜಾಗಕ್ಕೆ ಅನಧಿಕೃತವಾಗಿ ಸರ್ವಣಿಯ ಮಹಿಳೆಯನ್ನು ನೇಮಕ ಮಾಡಲಾಗಿತ್ತು. ಈ ವಿಚಾರಕ್ಕೆ ಅಸಮಾಧಾನಗೊಂಡ ಗ್ರಾಮದ ದಲಿತ ಸಮುದಾಯ ಅರ್ಜಿ ಹಾಕಲು ಮುಂದೆ ಬರುತ್ತಿಲ್ಲ. ಆದರೆ, ಕೆಲ ಮುಖಂಡರ ಪ್ರಕಾರ ಅರ್ಜಿ ಸಲ್ಲಿಸಲು ಕೆಲವರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
Advertisement
Advertisement
1000 ದಲಿತರಿರುವ ಗ್ರಾಮದಿಂದ ಒಂದೂ ಅರ್ಜಿ ಬಂದಿಲ್ಲ. ನಾವು ದಲಿತರನ್ನು ಬಿಟ್ಟು ಬೇರೆ ಜಾತಿಯವರು ನೇಮಕಕ್ಕೆ ಮುಂದಾಗಿಲ್ಲ ಎಂದು ದಲಿತ ಮುಖಂಡರ ಆರೋಪವನ್ನು ಶಾಲಾ ಮುಖ್ಯ ಶಿಕ್ಷಕ ತಳ್ಳಿ ಹಾಕಿದ್ದಾರೆ.
Advertisement
ಈ ಹಿಂದೆ ದಲಿತರು ಅಡುಗೆ ಮಾಡಿ ಬಡಿಸುತ್ತಾರೆ ಎಂದು ಸರ್ವಣಿಯರು ತಕರಾರು ತೆಗೆದಿದ್ದರಿಂದ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಹಲವು ಬೆಳವಣಿಗೆ ನಂತರ ಪರಿಸ್ಥಿತಿ ತಿಳಿಗೊಂಡು ಶಾಲೆಯಲ್ಲಿ ದಲಿತ ಅಡುಗೆ ಸಹಾಯಕರು ಕೆಲಸ ನಿರ್ವಹಿಸಿದ್ದರು. 2014ರಲ್ಲಿ ನಡೆದಿದ್ದ ಘಟನೆಯಿಂದ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈಗ ಮತ್ತೆ ಸರ್ವಣಿಯರ ನೇಮಕದಿಂದ ಅಸ್ಪೃಶ್ಯತೆ ಆಚರಣೆಯ ಆರೋಪ ಕೇಳಿಬಂದಿದೆ.
https://www.youtube.com/watch?v=CzGc6L6BiJI