Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ

Public TV
1 Min Read
rent house

– ಹಿರಿಯ ನಾಗರಿಕರಿಗೆ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿ 1 ಲಕ್ಷಕ್ಕೆ ಹೆಚ್ಚಳ

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿದ 2025-26ನೇ ಸಾಲಿನ ಆಯವ್ಯಯದಲ್ಲಿ, ಬಾಡಿಗೆ ಪಾವತಿಗೆ ಟಿಡಿಎಸ್ (TDS) ಮಿತಿಯನ್ನು 6 ಲಕ್ಷ ರೂ. ಹೆಚ್ಚಿಸಲಾಗಿದೆ.

ಬಾಡಿಗೆ ಪಾವತಿಗಳು, ಹಣ ರವಾನೆ, ಉನ್ನತ ಶಿಕ್ಷಣ, ಸರಕುಗಳ ಮಾರಾಟ ಮತ್ತು ಅಪರಾಧಿಗಳ ಅಪರಾಧಮುಕ್ತೀಕರಣಕ್ಕೆ ಸಂಬಂಧಿಸಿದಂತೆ ಅವರು ಹಲವಾರು ಪ್ರಮುಖ ಸುಧಾರಣೆಗಳನ್ನು ಬಜೆಟ್‌ನಲ್ಲಿ ಪರಿಚಯಿಸಿದ್ದಾರೆ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

Union budget niramala sitharaman

ಹಿರಿಯ ನಾಗರಿಕರಿಗೆ ಗುಡ್‌ನ್ಯೂಸ್
ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 50,000 ರೂ. ನಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಬಾಡಿಗೆ
ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿ 2.40 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರರ್ಥ ಬಾಡಿಗೆದಾರರು ತಿಂಗಳಿಗೆ 20,000 ರೂ. ದರದಲ್ಲಿ ನೀಡಲಾಗುವ ಬಾಡಿಗೆಗೆ ಟಿಡಿಎಸ್ ಕಡಿತಗೊಳಿಸಬೇಕಾಗಿತ್ತು. ಆದರೆ, ಈಗ ಮಿತಿಯನ್ನು 50,000 ರೂ.ಗೆ ಹೆಚ್ಚಿಸಲಾಗಿದೆ.

ಹಣ ರವಾನೆ
ಆದಾಯ ಮೂಲದಿಂದ ತೆರಿಗೆ ಸಂಗ್ರಹ 7 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿದೇಶದಿಂದ ರವಾನಿಸುವ ಹಣದ ಮೇಲಿನ ಟಿಡಿಎಸ್‌ ಕಡಿತಗೊಳಿಸಲಾಗಿದೆ. ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್‌ ವಿಸ್ತರಣೆ

ಉನ್ನತ ಶಿಕ್ಷಣ
ಶೈಕ್ಷಣಿಕ ಉದ್ದೇಶಗಳಿಗಾಗಿ ಯಾರಾದರೂ ಬ್ಯಾಂಕಿನಿಂದ ಬ್ಯಾಂಕ್‌ನಿಂದ ಸಾಲ ಪಡೆದರೆ ಟಿಸಿಎಸ್ ಇರುವುದಿಲ್ಲ. ಹೆಚ್ಚಿನ ಟಿಡಿಎಸ್ ಕಡಿತದ ನಿಬಂಧನೆಗಳು ಪ್ಯಾನ್ ಅಲ್ಲದ ಪ್ರಕರಣಗಳಲ್ಲಿ ಮಾತ್ರ ಅನ್ವಯಿಸುತ್ತವೆ.

ಸರಕುಗಳ ಮಾರಾಟ
ಪ್ರಸ್ತುತ ಸರಕುಗಳ ಮಾರಾಟಕ್ಕೆ ಸಂಬಂಧಿಸಿದ ವಹಿವಾಟುಗಳಿಗೆ ಟಿಡಿಎಸ್ ಮತ್ತು ಟಿಸಿಎಸ್ ಎರಡೂ ಅನ್ವಯಿಸುತ್ತವೆ. ಟಿಸಿಎಸ್ ಅನ್ನು ಕೈಬಿಡುವ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ: Budget 2025 | ಉದ್ಯಮ ಆರಂಭಿಸುವ 5 ಲಕ್ಷ SC, ST ಮಹಿಳೆಯರಿಗೆ ಆರ್ಥಿಕ ನೆರವು: ನಿರ್ಮಲಾ ಸೀತಾರಾಮನ್‌

Share This Article