Budget 2025: ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಭಾರತೀಯ ಅಂಚೆ ಸೇವೆಗಳ ಕಾರ್ಯನಿರ್ವಹಣೆ

Public TV
2 Min Read
Indian post

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿದ ಬಜೆಟ್‌ನಲ್ಲಿ, ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಭಾರತೀಯ ಅಂಚೆ ಸೇವೆಗಳು (Indian Postal Service) ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿಗಾಗಿ ಭಾರತೀಯ ಅಂಚೆ ಸೇವೆಗಳನ್ನು ವಿಸ್ತರಿಸಲಾಗುವುದು. ಇದರಿಂದ ಸೂಕ್ಷ್ಮ ಉದ್ಯಮಗಳಿಗೆ ಡಿಬಿಟಿ, ಕ್ರೆಡಿಟ್ ಸೇವೆಗಳು, ವಿಮೆ ಸೇರಿದಂತೆ ಇತರ ಸೇವೆಗಳು ಲಭ್ಯವಾಗುತ್ತವೆ. ವಿಶ್ವಕರ್ಮರು, ಮಹಿಳೆಯರು, ಸ್ವಸಹಾಯ ಗುಂಪುಗಳು, ಎಂಎಸ್ಎಂಇಗಳು ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಭಾರತೀಯ ಅಂಚೆ ಸೇವೆ ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ಇದು ಜನಸಾಮಾನ್ಯರ ಬಜೆಟ್‌.. ಉಳಿತಾಯ, ಹೂಡಿಕೆಗೆ ಉತ್ತೇಜನ: ಮೋದಿ ಬಣ್ಣನೆ

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.01 ರಂದು ಸಂಸತ್ತಿನಲ್ಲಿ 2025-26ರ ಬಜೆಟ್ ಅನ್ನು ಮಂಡಿಸುತ್ತಾ, 1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳನ್ನು ಹೊಂದಿರುವ ಭಾರತೀಯ ಅಂಚೆಯನ್ನು ಇಂಡಿಯಾ ಪೋಸ್ಟ್ ಪಾವತಿ ಬ್ಯಾಂಕ್ ಮತ್ತು 2.4 ಲಕ್ಷ ಅಂಚೆ ಸೇವಕರ ವಿಶಾಲ ಪೂರಕ ಸಂಪರ್ಕ ಜಾಲವನ್ನು ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲು ಮರುಸ್ಥಾಪಿಸಲಾಗುವುದು ಎಂದರು.

ಭಾರತ ಅಂಚೆಯ ನೂತನ ವಿಸ್ತೃತ ಸೇವೆಗಳ ವ್ಯಾಪ್ತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಿದರು.
1) ಗ್ರಾಮೀಣ ಸಮುದಾಯ ಕೇಂದ್ರ ಸಹ-ಸ್ಥಳ
2) ಸಾಂಸ್ಥಿಕ ಖಾತೆ ಸೇವೆಗಳು
3) ಡಿ.ಬಿ.ಟಿ., ನಗದು ಪಾವತಿ ಮತ್ತು ಇ.ಎಂ.ಐ ಸ್ವೀಕಾರ
4) ಸೂಕ್ಷ್ಮ ಉದ್ಯಮಗಳಿಗೆ ಕ್ರೆಡಿಟ್ ಸೇವೆಗಳು
5) ವಿಮೆ
6) ನೆರವಿನ ಡಿಜಿಟಲ್ ಸೇವೆಗಳು.

ಭಾರತ ಅಂಚೆಯನ್ನು ದೊಡ್ಡ ಸಾರ್ವಜನಿಕ ಸಾಗಣೆ (ಲಾಜಿಸ್ಟಿಕ್ಸ್) ಸಂಸ್ಥೆಯಾಗಿ ಪರಿವರ್ತಿಸಲಾಗುವುದು. ಇದು ವಿಶ್ವಕರ್ಮರು, ನವೋದ್ಯಮಿಗಳು, ಮಹಿಳೆಯರು, ಸ್ವಸಹಾಯ ಗುಂಪುಗಳು, ಎಂಎಸ್ಎಂಇಗಳು ಮತ್ತು ದೊಡ್ಡ ವ್ಯಾಪಾರ ಸಂಸ್ಥೆಗಳು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಭಾರತ ಅಂಚೆ ಪಾವತಿ ಬ್ಯಾಂಕ್‌ನ ಸೇವೆಗಳನ್ನು ಇನ್ನೂ ಉತ್ತಮಗೊಳಿಸಲಾಗುವುದು ಹಾಗೂ ಆಳಗೊಳಿಸಲಾಗುವುದು ಮತ್ತು ವಿಸ್ತರಿಸಲಾಗುವುದು ಎಂದರು.ಇದನ್ನೂ ಓದಿ: Budget 2025| ಕಿತ್ತಾಟ ನಡೆಸಿದ್ರೂ ಮಾಲ್ಡೀವ್ಸ್‌ಗೆ ಅನುದಾನ ಹೆಚ್ಚಳ,ಬಾಂಗ್ಲಾಗೂ ಸಹಾಯ- ಯಾವ ದೇಶಕ್ಕೆ ಎಷ್ಟು ಕೋಟಿ?

Share This Article