12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ
ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ ಬಂಪರ್ ಘೋಷಣೆ. “12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ. ವೇತನ ಪಡೆಯುವ ತೆರಿಗೆದಾರರು 12.75 ಲಕ್ಷ ರೂ.ಗಳಿಗೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ” – ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಪ್ರತಿ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗೆ (Income Tax) ವಿನಾಯಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು. ಹೀಗಾಗಿ ಈ ಬಾರಿ ಗರಿಷ್ಠ 10 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಬರೋಬ್ಬರಿ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿ ಮಧ್ಯಮ ವರ್ಗದವರಿಗೆ ಬಂಪರ್ ಘೋಷಣೆ ಮಾಡಿದ್ದಾರೆ.
ಮುಂದಿನ ವಾರ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ಟಿಡಿಎಸ್ ಘೋಷಣೆಗಳು
ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು 50,000 ರೂ.ನಿಂದ 1,00,000 ರೂ.ಗೆ ಏರಿಕೆ
ಬಾಡಿಗೆಯ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿಯನ್ನು 2.40 ಲಕ್ಷ ರೂ. ನಿಂದ 6 ಲಕ್ಷ ರೂ.ಗೆ ಏರಿಕೆ. ಇದರಿಂದ ಸಣ್ಣ ಪಾವತಿಗಳನ್ನು ಪಡೆಯುವ ಸಣ್ಣ ತೆರಿಗೆದಾರರಿಗೆ ಪ್ರಯೋಜನವಾಗಲಿದೆ.
ಆರ್‌ಬಿಐನ ಉದಾರೀಕೃತ ರವಾನೆ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ ಹಣ ರವಾನೆಗಳ ಮೇಲೆ ಮೂಲದಲ್ಲಿ ಸಂಗ್ರಹಿಸಿದ ತೆರಿಗೆ (ಟಿಸಿಎಸ್) ಸಂಗ್ರಹಿಸುವ ಮಿತಿಯನ್ನು ರೂ. 7 ಲಕ್ಷದಿಂದ ರೂ. 10 ಲಕ್ಷ ರೂ.ಗೆ ಏರಿಕೆ.
ಯಾವ ವಸ್ತುಗಳ ಬೆಲೆ ಇಳಿಕೆ?
ಬಜೆಟ್‌ನಲ್ಲಿ ತೆರಿಗೆ ಇಳಿಕೆ ಮಾಡಿದ್ದರಿಂದ ದೇಶಿ ನಿರ್ಮಿತ ಬಟ್ಟೆ, ಮೇಡ್ ಇನ್ ಇಂಡಿಯಾ ಲೀಥಿಯಮ್ ಬ್ಯಾಟರಿ ದರ ಇಳಿಕೆ. LED, LCD ಟಿವಿ, ಮೊಬೈಲ್ ಫೋನ್, ಚರ್ಮೋತ್ಪನ್ನ ದರಗಳು ಇಳಿಕೆ.
ಕ್ಯಾನ್ಸರ್ ಔಷಧಿಗಳ ದರ ಇಳಿಕೆ
36 ಜೀವರಕ್ಷಕ ಔಷಧಿಗಳಿಗೆ ಅಬಕಾರಿ ಸುಂಕ ವಿನಾಯಿತಿ. ಕ್ಯಾನ್ಸರ್ ಔಷಧಿಗಳ ದರ ಇಳಿಕೆಯ ಜೊತೆ ಮೆಡಿಕಲ್ ಉಪಕರಣಗಳ ದರ ಇಳಿಕೆ
1 ಕೋಟಿ ಗಿಗ್ ಕೆಲಸಗಾರರಿಗೆ ಐ-ಕಾರ್ಡ್‌ಗಳು, ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ
“ಸರ್ಕಾರವು ಗುರುತಿನ ಚೀಟಿಗಳನ್ನು ಒದಗಿಸಲಿದೆ ಮತ್ತು 1 ಕೋಟಿ ಗಿಗ್ ಕೆಲಸಗಾರರನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಲಾಗುವುದು. ಗಿಗ್ ಕೆಲಸಗಾರರು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ ಆರೋಗ್ಯ ಸೇವೆಗೆ ಪ್ರವೇಶವನ್ನು ಹೊಂದಿರುತ್ತಾರೆ. ಸುಮಾರು ಒಂದು ಕೋಟಿ ಕಾರ್ಮಿಕರು ಇದರ ಪ್ರಯೋಜನ ಪಡೆಯಲಿದ್ದಾರೆ” – ನಿರ್ಮಲಾ ಸೀತಾರಾಮನ್
ವಿಮಾ ಕ್ಷೇತ್ರಗಳ ಎಫ್‌ಡಿಐ ಶೇ.100ಕ್ಕೆ ಏರಿಕೆ
ವಿಮಾ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.100ಕ್ಕೆ ಏರಿಕೆ. ಇಂಡಿಯಾ ಪೋಸ್ಟ್ ಸೇವೆ ಗ್ರಾಮೀಣ ಭಾಗಗಳಿಗೆ ವಿಸ್ತರಣೆ. ಭೂಮಿ ದಾಖಲೆ ಆಧುನಿಕರಣ, ನಗರ ಯೋಜನೆ, ಮೂಲಸೌಕರ್ಯಗಳ ಪ್ಲಾನಿಂಗ್ ಡಿಜಿಟಲೀಕರಣ
ಹೊಸ ಆದಾಯ ತೆರಿಗೆ ಬಿಲ್
ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಮಂಡನೆ ಮಾಡಲಾಗುತ್ತದೆ. ಈ ಮಸೂದೆ ಕೆವೈಸಿ ನಿಯಮಗಳ ಸರಳಿಕರಣ ಮಾಡುತ್ತದೆ.
ಭಾರತ ಜಾಗತಿಕ ಆಟಿಕೆ ಕೇಂದ್ರವಾಗಬೇಕು
“ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೆ ತರುತ್ತೇವೆ. ಕ್ಲಸ್ಟರ್‌ಗಳು, ಕೌಶಲ್ಯಗಳು ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತೇವೆ. ಇದು ‘ಮೇಡ್ ಇನ್ ಇಂಡಿಯಾ’ ಬ್ರ್ಯಾಂಡ್ ಅನ್ನು ಪ್ರತಿನಿಧಿಸುವ ಉತ್ತಮ ಗುಣಮಟ್ಟದ, ವಿಶಿಷ್ಟ, ನವೀನ ಮತ್ತು ಸುಸ್ಥಿರ ಆಟಿಕೆಗಳನ್ನು ರಚಿಸಲು ಸಹಾಯ ಮಾಡುತ್ತದೆ” – ನಿರ್ಮಲಾ ಸೀತಾರಾಮನ್
ರಾಜ್ಯಗಳಿಗೆ 1.5 ಲಕ್ಷ ಬಡ್ಡಿ ರಹಿತ ಸಾಲ
ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯಗಳಿಗೆ ಮುಂದಿನ 15 ವರ್ಷಕ್ಕೆ 1.5 ಲಕ್ಷ ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಲಾಗುವುದು.
120 ಸ್ಥಳಗಳಿಗೆ ವಿಮಾನ
ಉಡಾನ್ ಯೋಜನೆಗೆ ಯಶಸ್ವಿಯಾದ ಹಿನ್ನೆಲೆ 120 ಸ್ಥಳಗಳಿಗೆ ಹೆಚ್ಚುವರಿ ಸಂಪರ್ಕ ಕಲ್ಪಿಸಲಾಗುವುದು. ಮುಂದಿನ ಹತ್ತು ವರ್ಷದಲ್ಲಿ ನಾಲ್ಕು ಕೋಟಿ ಜನರಿಗೆ ಅನುಕೂಲವಾಗಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಬಿಹಾರದಲ್ಲಿ ಗ್ರೀನ್ ಫಿಲ್ಡ್ ವಿಮಾನ ನಿಲ್ದಾಣ ಆರಂಭ.
ಡೆಲಿವರಿ ಬಾಯ್ಸ್‌ಗಳಿಗೆ ಪೋರ್ಟಲ್
ಆನ್ಲೈನ್ ಪ್ಲಾಟ್ ಫಾರಂ ಕಾರ್ಮಿಕರಿಗೆ ಶ್ರಮ್ ಪೋರ್ಟ್‌ಲ್. ಇದರಿಂದ 1 ಕೋಟಿ ಗಿಗ್ ವರ್ಕರ್ ಗೆ ಅನುಕೂಲ.
ಪಿಎಂ ಸ್ವಾನಿಧಿ ಯೋಜನೆಯ ಅಡಿ ಬೀದಿ ಬದಿ ವ್ಯಾಪಾರಿಗಳಿಗೆ 30,000 ಮೌಲ್ಯದ ಕ್ರೆಡಿಟ್ ಕಾರ್ಡ್ ವಿತರಣೆ.
ಬಿಹಾರಕ್ಕೆ ಆದ್ಯತೆ
ಬಜೆಟ್‌ನಲ್ಲಿ ಬಿಹಾರಕ್ಕೆ ಬಂಪರ್. ಐಐಟಿ ಪಾಟ್ನಾ ಸೇರಿದಂತೆ ಐದು ಐಐಟಿಗಳಲ್ಲಿ ಅಭಿವೃದ್ಧಿ. ಮೈತ್ರಿ ಪಕ್ಷಗಳಿರುವ ರಾಜ್ಯಕ್ಕೆ ಆದ್ಯತೆ
ಪ್ರಾಥಮಿಕ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್
ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ. ಎಲ್ಲ ಜಿಲ್ಲೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್
ಅಸ್ಸಾಂನಲ್ಲಿ ಯೂರಿಯಾ ಪ್ಲಾಂಟ್ ಆರಂಭ
12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಪ್ಲ್ಯಾಂಟ್ ಆರಂಭಿಸಲಾಗುತ್ತದೆ.
ಬಡವರು, ಯುವಕರು, ರೈತರು, ಮಹಿಳೆಯರನ್ನು ಕೇಂದ್ರೀಕರಿಸಿ ಬಜೆಟ್
ಉದ್ಯಮಗಳಿಗೆ 20 ಕೋಟಿ ರೂ. ಸಾಲ
ಸಣ್ಣ ಮತ್ತು ಅತಿ ಸಣ್ಣ ಉದ್ಯಮ 7.5 ಕೋಟಿ ಮಂದಿಗೆ ಉದ್ಯೋಗ ನೀಡುತ್ತದೆ. 36% ಉತ್ಪಾದನೆ ಮಾಡುತ್ತಿದೆ. ಉತ್ತಮವಾಗಿ ನಡೆಯುವ ಉದ್ಯಮಗಳಿಗೆ 20 ಕೋಟಿ ವರೆಗೂ ಸಾಲ ನೀಡಲಾಗುವುದು.
5 ಲಕ್ಷ ರೂ.ಗೆ ಹೆಚ್ಚಳ
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ. ಮೂರು ಯೂರಿಯಾ ಪ್ಲ್ಯಾಂಟ್ ನಿರ್ಮಾಣ.
ಬಿಹಾರದಲ್ಲಿ ಮಖಾನಾ ಬೋರ್ಡ್ ಸ್ಥಾಪನೆ
ಅಧಿಕ ಇಳುವಳಿ ಬೀಜಗಳ ಉತ್ಪಾದನೆ ಮತ್ತು ಸಂಶೋಧನೆ. ಎನ್‌ಸಿಸಿಎಫ್ ಕಡೆಯಿಂದ ಧಾನ್ಯಗಳ ಸಂಗ್ರಹಣೆ. ಹಣ್ಣು ಮತ್ತು ತರಕಾರಿಯನ್ನು ಬೆಳೆಗೆ ಪ್ರೊತ್ಸಾಹ ನೀಡಲಾಗುವುದು. ರಾಜ್ಯಗಳ ಜೊತೆಗೆ ಸಹಯೋಗದೊಂದಿಗೆ ಕೆಲಸ ಮಾಡಲಾಗುತ್ತದೆ.
ಧನ ಧಾನ್ಯ ಯೋಜನಾ
ನೂರು ಜಿಲ್ಲೆಗಳನ್ನು ಕೇಂದ್ರೀಕರಿಸಿ ಯೋಜನೆ. ಕೃಷಿ ಉತ್ಪನ್ನಗಳ ಬೆಳವಣಿಗೆ ಆದ್ಯತೆ. ನೀರಾವರಿ, ಹಾಗೂ ಸ್ಟೋರೆಜ್ ಗಳ ನಿರ್ಮಾಣ. ಇದರಿಂದ 1.7 ಕೋಟಿ ರೈತರಿಗೆ ಅನುಕೂಲ
ದೇಶ ಎಂದರೆ ಜನರು
ದೇಶ ಎಂದರೆ ಮಣ್ಣು ಅಲ್ಲ, ದೇಶ ಎಂದರೆ ಜನರು. ಖ್ಯಾತ ಕವಿಯ ಹೇಳಿಕೆಯಂತೆ ನಾವು ಕೆಲಸ ಮಾಡುತ್ತಿದ್ದೇವೆ. ಈ ಬಜೆಟ್‌ನಲ್ಲಿ ಬಡತನ, ಮಹಿಳೆ, ಕೃಷಿ, ಯುವ, ರಫ್ತು ಪ್ರೊತ್ಸಾಹ, ಹೂಡಿಕೆ, ಸಣ್ಣ ಮತ್ತು ಅತಿ ಸಣ್ಣ ವಲಯಗಳನ್ನು ಕೇಂದ್ರೀಕರಿಸಿದೆ.
ಬಜೆಟ್ ಮಂಡನೆಗೆ ಗದ್ದಲ
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ವಿರೋಧ ಪಕ್ಷಗಳಿಂದ ಗದ್ದಲ. ಇದು ಅಭಿವೃದ್ಧಿಯ ಬಜೆಟ್ ಎಂದ ಸಿಚಿವೆ
ಕೆಲವೇ ಕ್ಷಣಗಳಲ್ಲಿ ಬಜೆಟ್
ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಪಡೆದ ನಿರ್ಮಲಾ ಸೀತಾರಾಮನ್. ಕೆಲವೇ ಕ್ಷಣಗಳಲ್ಲಿ ಲೋಕಸಭೆಯಲ್ಲಿ ಬಜೆಟ್ ಮಂಡನೆ . ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರ ಸಂಸತ್ ಆವರಣದಲ್ಲಿ ಡಿಜಿಟಲ್ ಬಜೆಟ್ ತೋರಿಸಿದ ಸಚಿವೆ.
ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ
ಬಜೆಟ್ ಮಂಡನೆಗೂ ಮುನ್ನ ಮೋದಿ 3.0 ಸರ್ಕಾರದ ಕ್ಯಾಬಿನೆಟ್ ಸಭೆ ಆರಂಭ. ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಪಡೆದ ಬಳಿಕ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿರುವ ನಿರ್ಮಲಾ ಸೀತಾರಾಮನ್.
ಮಧುಬನಿ ಸೀರೆಯಲ್ಲಿ ಸಚಿವೆ!
ನಿರ್ಮಲಾ ಸೀತಾರಾಮನ್ 2021ರ ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರಿಗೆ ಗೌರವ ಸಲ್ಲಿಸಲು ಮಧುಬನಿ ಕಲೆಯ ಸೀರೆಯನ್ನು ಧರಿಸಿದ್ದಾರೆ. ಬಿಹಾರದ ಮಧುಬನಿಯಲ್ಲಿರುರುವ ಮಿಥಿಲಾ ಕಲಾ ಸಂಸ್ಥೆಗೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದಾಗ ದುಲಾರಿ ದೇವಿ ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ಬಜೆಟ್ ವೇಳೆ ಈ ಸೀರೆಯನ್ನು ಧರಿಸುವಂತೆ ಕೇಳಿಕೊಂಡಿದ್ದರು.
ರಾಷ್ಟ್ರಪತಿ ಅನುಮತಿ
ಬಜೆಟ್ ಮಂಡನೆಗೂ ಮುನ್ನ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಅನುಮತಿ ಪಡೆದುಕೊಂಡರು.
ಡಿಜಿಟಲ್ ಬಜೆಟ್!
ಈ ಹಿಂದೆ ಹಣಕಾಸು ಸಚಿವರು ಬಜೆಟ್ ಪುಸ್ತಕವನ್ನು ತಂದು ಓದುತ್ತಿದ್ದರು. 2019ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ಸೀತಾರಾಮನ್ ಬ್ರೀಫ್‌ಕೇಸ್ ಬಜೆಟ್ ಸಾಂಪ್ರದಾಯಕ್ಕೆ ಗುಡ್‌ಬೈ ಹೇಳಿದ್ದರು. 2021ರಲ್ಲಿ ಕೋವಿಡ್ ಬಳಿಕ ಮೊದಲ ಬಾರಿ ಕಾಗದ ಪತ್ರಗಳನ್ನು ಬಿಟ್ಟು ಡಿಜಿಟಲ್ ಟ್ಯಾಬ್ಲೆಟ್‌ನಲ್ಲಿ ಬಜೆಟ್ ಮಂಡಿಸಿದ್ದರು. ಈ ಬಾರಿಯೂ ಬಜೆಟ್ ಭಾಷಣವನ್ನು ಪುಸ್ತಕದ ಬದಲಾಗಿ ಟ್ಯಾಬ್ಲೆಟ್ ಹಿಡಿದುಕೊಂಡೆ ಮಂಡಿಸಲಿದ್ದಾರೆ.
ಲೋಕಸಭೆಗೆ ಆಗಮಿಸಿದ ಸೀತಾರಾಮನ್
ಬಜೆಟ್ ಮಂಡನೆ ಮಾಡಲು ಲೋಕಸಭೆಗೆ ನಿರ್ಮಲಾ ಸೀತಾರಾಮನ್ ಆಗಮಿಸಿದರು.
ಮಹಿಳೆಯರ ಆರೋಗ್ಯಕ್ಕೆ ಸರ್ಕಾರ ಆದ್ಯತೆ
ಮಹಿಳೆಯರ ಆರೋಗ್ಯ ಸುಧಾರಣೆಗೆ ಅನುದಾನ ಹೆಚ್ಚಳ ಸಾಧ್ಯತೆ
ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ
ಗ್ರಾಮೀಣ ಮಹಿಳೆಯರ ಆರೋಗ್ಯ ಮೂಲಸೌಕರ್ಯಗಳ ಮೇಲೆ ವಿಶೇಷ ಗಮನ
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಉಚಿತ ಲಸಿಕೆಗಳನ್ನು ಒದಗಿಸುವ ಯೋಜನೆ
ಉದ್ಯಮ ಸ್ಥಾಪಿಸಲು ಸುಲಭ ಸಾಲದ ಸೌಲಭ್ಯ,
ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ
ಮಹಿಳೆಯರಲ್ಲಿ ಉಳಿತಾಯ ಮತ್ತು ಹೂಡಿಕೆಯಲ್ಲಿ ಪ್ರೋತ್ಸಾಹ ನೀಡುವುದು ಮುಟ್ಟಿನ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆಯಂತಹ ಆರೋಗ್ಯ ಯೋಜನೆ
ಲಕ್ ಪತಿ ದೀದಿ, ಡ್ರೋಣ್ ದೀದಿ ಯೋಜನೆ ಇನ್ನಷ್ಟು ವಿಸ್ತರಿಸುವ ಸಾಧ್ಯತೆ
ರೈಲ್ವೇ ನಿರೀಕ್ಷೆಗಳೇನು?
ಸರಕು ಸೇವೆಗಳಿಗೆ ರೈಲ್ವೇ ಸಚಿವಾಲಯ ಆದ್ಯತೆ
ತಂತ್ರಜ್ಞಾನದಿಂದ ಉದ್ಯೋಗಿಗಳ ವೆಚ್ಚ ನಿಯಂತ್ರಣ
ಕಡಿಮೆ ದಟ್ಟಣೆ ನಿಲ್ದಾಣಗಳಲ್ಲಿ ನಿಲುಗಡೆ ಕಡಿಮೆ ಮಾಡುವುದು
ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ವಿಸ್ತರಿಸುವುದು
ಕವಚ ತಂತ್ರಜ್ಞಾನ ಅಳವಡಿಕೆಗೆ ಇನ್ನಷ್ಟು ಒತ್ತು
ಮುಂದಿನ ಐದು ವರ್ಷದಲ್ಲಿ ಮೆಟ್ರೋ ಮಾರ್ಗ ದ್ವಿಗುಣ
ಮೆಟ್ರೋ ಮಾರ್ಗಗಳೂ ಇನ್ನಷ್ಟು ವಿಸ್ತರಣೆ
ರೈತರಿಗೆ ಬಂಪರ್ ಕೊಡುಗೆ?
ಈ ಬಾರಿಯ ಬಜೆಟ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3ರಿಂದ 5 ಲಕ್ಷ ಹೆಚ್ಚಳವಾಗುವ ಸಾಧ್ಯತೆಯಿದೆ. ಕೃಷಿ ಮೂಲಸೌಕರ್ಯದಲ್ಲಿನ ಹೂಡಿಕೆಗಳಿಗೆ ಆದ್ಯತೆ ಸಿಗಲಿದೆ. ಕೃಷಿಯೇತರ ಆದಾಯಕ್ಕೆ ಹೆಚ್ಚು ಒತ್ತು ನೀಡಬಹುದು
ಬೆಳಗ್ಗೆ 11 ಗಂಟೆಗೆ ಮಂಡನೆ
ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆಯಾಗಲಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವಾಲಯಕ್ಕೆ ಆಗಮಿಸಿದರು.
ಸಿಲಿಂಡರ್ ಬೆಲೆ ಇಳಿಕೆ
19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 7 ರೂ. ಇಳಿಕೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿ
6.3-6.8% ಜಿಡಿಪಿ ಬೆಳವಣಿಗೆ
2025-26 ಹಣಕಾಸು ವರ್ಷದಲ್ಲಿ ವಾರ್ಷಿಕ 6.3-6.8% ದರದಲ್ಲಿ ಜಿಡಿಪಿ ಬೆಳವಣಿಗೆಯಾಬಹುದು ಎಂದು ಆರ್ಥಿಕ ಸಮೀಕ್ಷೆ (Economic Survey) ತಿಳಿಸಿದೆ.
8ನೇ ಬಜೆಟ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಇದುವರೆಗೆ 7 ಬಜೆಟ್ ಮಂಡಿಸಿದ್ದಾರೆ. ಇಂದು 8ನೇ ಬಜೆಟ್ ಮಂಡಿಸಿ ದಾಖಲೆ ಬರೆಯಲಿದ್ದಾರೆ. 2019, 2020, 2021, 2022, 2023, 2024 (ಮಧ್ಯಂತರ ಬಜೆಟ್), 2024 (ಪೂರ್ಣ ಬಜೆಟ್) ಅವಧಿಯಲ್ಲಿ ಬಜೆಟ್ ಮಂಡಿಸಿದ್ದಾರೆ