-ಆನೆಗುಂದಿ, ಅಂಜನಾದ್ರಿಗೂ ಭೇಟಿ
ಬಳ್ಳಾರಿ: ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಆನೆಗುಂದಿ, ಅಂಜನಾದ್ರಿ ಪ್ರದೇಶಕ್ಕೆ ಯುನೆಸ್ಕೊ (UNESCO) ತಂಡ ಅ.24ರಿಂದ 29ರವರೆಗೆ ಭೇಟಿ ನೀಡಲಿದ್ದು, ಹಂಪಿಯ ಐತಿಹಾಸಿಕ ಸ್ಮಾರಕ, ಪಾರಂಪರಿಕ ತಾಣಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಪರಿಶೀಲನೆಗಾಗಿ ಮಾನಿಟರಿಂಗ್ ತಂಡ ಭೇಟಿ ನೀಡಲಿರುವ ಹಿನ್ನೆಲೆ ಹಂಪಿಯು (Hampi) ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದೆ.
ಯುನೆಸ್ಕೋ ತಂಡದಲ್ಲಿ ಅಂತಾರಾಷ್ಟ್ರೀಯ ಪಾರಂಪರಿಕ ಪರಿಣಿತ ಕಿನ್ಯಾದ ಜಾರ್ಜ್ ಅಬುಂಗ್ ನೇತೃತ್ವದಲ್ಲಿ ಜಪಾನ್ನ ಇಚಿಡಾ ಶಿಮೋಡಾ ಇರಲಿದ್ದಾರೆ. ಜೊತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿರ್ ಶರ್ಮಾ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಹೆಚ್ಡಿಕೆ ಹೋರಾಟಕ್ಕೆ ನಮ್ಮ ಬೆಂಬಲ; ನಾವು ಹೆದರೋ ಮಕ್ಕಳಲ್ಲ: ಯತ್ನಾಳ್

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿಯ ಸ್ಮಾರಕಗಳ ಸಂರಕ್ಷಣೆ, ಪಾರಂಪರಿಕ ಪ್ರದೇಶದ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ಯುನೆಸ್ಕೋ ತಂಡವು ಅ.22ರಿಂದ 29ರವರೆಗೆ ಪ್ರವಾಸ ಕೈಗೊಂಡಿದ್ದು, ಅ.22ರಂದು ದೆಹಲಿಗೆ ಆಗಮಿಸಲಿದ್ದು, ದೆಹಲಿಯಲ್ಲಿ ಯುನೆಸ್ಕೋಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅ.24ರಿಂದ 29ರವರೆಗೆ ಹಂಪಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.

ಯುನೆಸ್ಕೋ ತಂಡವು ಹಂಪಿ ಮಾಸ್ಟರ್ಪ್ಲಾನ್ ಮೇಲೆ ಹೆಚ್ಚು ಗಮನಹರಿಸುತ್ತಿರುವುದರಿಂದ ಹಂಪಿಯಲ್ಲಿ ಪಾರಂಪರಿಕ ಮೌಲ್ಯ ಉಳಿಸಿಕೊಂಡು ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆಯೋ ಅಥವಾ ಹಂಪಿ ಮಾಸ್ಟರ್ಪ್ಲಾನ್, ಪಾರಂಪರಿಕ ಪ್ರದೇಶದ ನಿರ್ವಹಣೆ, ಅತಿಕ್ರಮಣ ನಿಯಂತ್ರಣ ಹಾಗೂ ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದ ಕ್ರಮಗಳ ಪ್ರಗತಿ ಮಹತ್ವ ಕುರಿತು ಪರಿಶೀಲನೆ ನಡೆಸಲಿದೆ. ಹೀಗಾಗಿ ಹಂಪಿಯ ಸ್ಥಿತಿಗತಿ ವೀಕ್ಷಿಸಲು ಯುನೆಸ್ಕೋ ತಂಡ ಹಂಪಿಗೆ ಬರುತ್ತಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ.ಇದನ್ನೂ ಓದಿ: ಹೆಚ್ಡಿಕೆಯಿಂದ ಸ್ಟಿಂಗ್ ಆಪರೇಷನ್ ರೂವಾರಿ, ರೌಡಿಶೀಟರ್ ಫೋಟೋ ರಿಲೀಸ್

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಸ್ಮಾರಕಗಳ ಗುಚ್ಚವನ್ನು ಯುನೆಸ್ಕೊ 1986ರಲ್ಲಿ ವಿಶ್ವ ಪಾರಂಪರಿಕ ಪಟ್ಟಿ ಸೇರಿದ ಬಳಿಕ ಹಂಪಿಗೆ ವಿಶ್ವಮನ್ನಣೆ ದೊರೆತಿತ್ತು. ನಂತರ 1999ರಲ್ಲಿ ವಿಶ್ವ ಪರಂಪರೆ ಪಟ್ಟಿಯಿಂದಲೇ ತೆಗೆದು ಹಾಕುವ ಅಪಾಯ ಪಟ್ಟಿಗೆ ಹಂಪಿ ಸೇರಿಸಲಾಗಿತ್ತು. ಹಂಪಿಯ ಅಭಿವೃದ್ಧಿಗೆ ಯುನೆಸ್ಕೋ ಹಲವು ಕ್ರಮ ಸೂಚಿಸಿತ್ತು. ಆದರೆ ಆಗ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಯುನೆಸ್ಕೋ ಪಟ್ಟಿಯಿಂದ ಹಂಪಿ ಕೈಬಿಡುವ ಬೆದರಿಕೆ ಹಾಕಿತ್ತು. ನಂತರ ಯುನೆಸ್ಕೋ ಮಾರ್ಗದರ್ಶನದಂತೆ ಹಂಪಿಯಲ್ಲಿ ಪ್ರಗತಿ ಕಾರ್ಯ ನಡೆಸಿದಾಗ ಮತ್ತೆ ಹಂಪಿ ಯುನೆಸ್ಕೋ ಪಟ್ಟಿಗೆ ಸೇರಿಕೊಂಡಿತ್ತು. ನಂತರ ಹಂಪಿಗೆ 2009ರಲ್ಲಿ ಯುನೆಸ್ಕೋ ತಂಡ ಬಂದು ಹೋದ ಮೇಲೆ ಮತ್ತೆ ಈಗ ಯುನೆಸ್ಕೋ ತಂಡ ಬರುತ್ತಿರುವುದರಿಂದ ಅಧಿಕಾರಿಗಳ ವರ್ಗದಲ್ಲಿ ಸಂಚಲನ ಶುರುವಾಗಿದೆ.
ಹಂಪಿಯ ಐತಿಹಾಸಿಕ ವೈಭವ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಯುನೆಸ್ಕೋ ಮಾನಿಟರಿಂಗ್ ತಂಡದ ಭೇಟಿಯು ಸಾಕಷ್ಟು ಮಹತ್ವ ಪಡೆದುಕೊಂಡಿದೆ.ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ರುವಾರಿಯ ಬಂಧನ ಆಗ್ಲೇಬೇಕು – 2 ದಿನಗಳ ಡೆಡ್ಲೈನ್ ಕೊಟ್ಟ ಹೆಚ್ಡಿಕೆ


