ಕೀವ್: ರಷ್ಯಾ ರಣೋತ್ಸಾಹ 4ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಪುಟ್ಟ ದೇಶವಾಗಿರುವ ಉಕ್ರೇನ್ ತತ್ತರಿಸಿದೆ. ಇದರ ಮಧ್ಯೆ ಉಕ್ರೇನ್ ಪ್ರಜೆಗಳು ರಾಷ್ಟ್ರಗೀತೆಯನ್ನು ಹಾಡಿ ತಮ್ಮ ರಾಷ್ಟ್ರಭಕ್ತಿಯನ್ನು ತೋರಿಸುತ್ತಿರವ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ರಷ್ಯಾ, ಉಕ್ರೇನ್ನ ಮೇಲೆ ಕ್ಷೀಪಣಿ ದಾಳಿ ನಡೆಸಿದ ಪರಿಣಾಮ ಉಕ್ರೇನಿನ ಕಟ್ಟಡಕ್ಕೆ ಹಾನಿಯಾಗಿತ್ತು. ಈ ವೇಳೆ ಮಹಿಳೆಯೊಬ್ಬಳು ಉಕ್ರೇನ್ನ ರಾಷ್ಟ್ರಗೀತೆ ಹಾಡುತ್ತಾ ಮನೆ ಸ್ವಚ್ಛಗೊಳಿಸುತ್ತಿರುವ ಮನಮಿಡಿಯುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
A woman in Kiev sings Ukraine’s national anthem from her bombed apartment as she cleans the leftover shards of glass. pic.twitter.com/HMWCB43nfg
— NEWS ONE (@NEWSONE46467498) February 26, 2022
Advertisement
ವೀಡಿಯೋದಲ್ಲಿ ಮಹಿಳೆಯು ಕಣ್ಣೀರಿಡುತ್ತಾ ಉಕ್ರೇನ್ ರಾಷ್ಟ್ರಗೀತೆ ಹಾಡುತ್ತಿದ್ದಾಳೆ. ನಂತರ ಕ್ಷಿಪಣಿಯಿಂದ ಹಾನಿಗೊಳಗಾದ ಕಿಟಕಿಯ ಗಾಜಿನ ಚೂರನ್ನು ತೆಗೆಯುತ್ತಿರುವುದನ್ನು ಕಾಣಬಹುದಾಗಿದೆ. ನಿನ್ನೆ ರಾಜಧಾನಿ ಕೈವ್ನ ಹೊರವಲಯದಲ್ಲಿ ಉಕ್ರೇನಿಯನ್ ರಾಷ್ಟ್ರಗೀತೆಯನ್ನು ಕಹಳೆಯಲ್ಲಿ ನುಡಿಸುತ್ತಿದ್ದರು. ನೆರೆಹೊರೆಯ ಜನರು ಉಕ್ರೇನ್ನ ವೈಭವ ಎಂದು ಕೂಗುವುದರ ವೀಡಿಯೋವೊಂದು ವೈರಲ್ ಆಗಿತ್ತು. ಇದನ್ನೂ ಓದಿ: ಉಕ್ರೇನ್ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು
Advertisement
One of Kyiv’s outskirts waiting for invaders. All of a sudden, someone plays Ukrainian anthem on a trumpet. And from everywhere: “Glory to Ukraine!”#StandWithUkriane pic.twitter.com/QHlC3YBllt
— olexander scherba???????? (@olex_scherba) February 26, 2022
Advertisement
ಉಕ್ರೇನ್ನ ರಸ್ತೆಗಳಲ್ಲಿ ಬಾಂಬ್ ದಾಳಿ, ಅಪಾರ್ಟ್ಮೆಂಟ್ಗಳ ಮೇಲೆ ರಷ್ಯಾ ಸೈನಿಕರು ಮಿಸೈಲ್ ದಾಳಿ ಮಾಡುತ್ತಿದ್ದಾರೆ. ಬಂಕರ್ಗಳ ಹೊರಗೆ ಬಾಂಬ್ ಸದ್ದು ಕೇಳಿಸುತ್ತಿದ್ದು, ಜನ ಜೀವ ಭಯದಲ್ಲಿದ್ದಾರೆ. ಉಕ್ರೇನ್ನ ಕಾರ್ಕೀವ್ ಹಾಗೂ ಕೀವ್ನಲ್ಲಿ ರಾತ್ರಿಯೂ ಗುಂಡಿನ ಮೊರೆತ ಕೇಳಿಸಿತ್ತು. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು