ಕೈವ್: ತನ್ನ ಮೇಲೆ ಯುದ್ಧ ಸಾರಿರುವ ರಷ್ಯಾದ 6 ಮಿಲಿಟರಿ ಯುದ್ಧ ವಿಮಾನಗಳನ್ನು ನಮ್ಮ ಸೇನೆ ಹೊಡೆದುರುಳಿಸಿದೆ. ಅಲ್ಲದೇ 50 ರಷ್ಯಾ ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ಉಕ್ರೇನ್ ತಿಳಿಸಿದೆ.
ಉಕ್ರೇನ್‌ನ ರಾಜಧಾನಿ ಕೈವ್‌ನ ವಿಮಾನ ನಿಲ್ದಾಣದಲ್ಲಿ ಗುಂಡಿನ ಸದ್ದು ಮೊರೆದಿದೆ. ಪರಿಣಾಮವಾಗಿ ತವರು ದೇಶಗಳಿಗೆ ಮರಳಲು ಮುಂದಾಗಿದ್ದ ನಾಗರಿಕರಿಗೆ ಆತಂಕ ಎದುರಾಗಿದೆ. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ
Advertisement
Advertisement
ರಷ್ಯಾದ ಭೂಸೇನಾ ಪಡೆಗಳು ನಾನಾ ಕಡೆಗಳಿಂದ ಉಕ್ರೇನ್ ಗಡಿ ಭಾಗಗಳನ್ನು ಪ್ರವೇಶಿಸಿವೆ. ಈ ವೇಳೆ ರಷ್ಯಾದ 50 ಆಕ್ರಮಣಕಾರರನ್ನು ಹತ್ಯೆಗೈದಿರುವುದಾಗಿ ಉಕ್ರೇನ್ ತಿಳಿಸಿದೆ.
Advertisement
ಕ್ರಿಮಿಯನ್ ಗಡಿಯಲ್ಲಿ ನಡೆದ ಶೆಲ್ ದಾಳಿಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ನ ಗಡಿ ಸಿಬ್ಬಂದಿ ಹೇಳಿದ್ದಾರೆ. ಇದು ರಷ್ಯಾ ಆಕ್ರಮಣದ ಅಧಿಕೃತವಾಗಿ ದೃಢಪಡಿಸಿದ ಮಿಲಿಟರಿ ಮೊದಲ ಸಾವಾಗಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ಉಕ್ರೇನ್‍ನಲ್ಲಿ ನಾಶವಾಗಿದ್ದು ಏನೇನು? ಇಲ್ಲಿದೆ ವಿವರ
Advertisement
ದೇಶದ ಪೂರ್ವದಲ್ಲಿ ಆರು ರಷ್ಯಾದ ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಉರುಳಿಸಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಜಂಟಿ ಫೋರ್ಸ್ ಕಮಾಂಡ್ ಪ್ರಕಾರ, ಇಂದು ಜಂಟಿ ಪಡೆಗಳ ಕಾರ್ಯಾಚರಣೆಯ ಪ್ರದೇಶದಲ್ಲಿ ರಷ್ಯಾ ಆಕ್ರಮಣಕಾರರ ಐದು ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೈವ್ ಬಳಿಯಿದ್ದ ಮಿಲಿಟರಿ ಹೆಡ್‌ಕ್ವಾಟ್ರಸ್, ಏರ್‌ಪೋರ್ಟ್, ಸೇನಾನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಉಕ್ರೇನ್‌ನ ಉಪ ಆಂತರಿಕ ಸಚಿವ ಆ್ಯಂಥೊನಿ ಗೆರಾಶ್ಚೆಂಕೊ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ಮಾರ್ಗಮಧ್ಯದಲ್ಲೇ ವಾಪಸ್