ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್‍ನಲ್ಲಿ ವಾಸವಾಗಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಉಕ್ರೇನ್‍ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಮಾರ್ಗಮಧ್ಯೆಯೇ ದೆಹಲಿಗೆ ವಾಪಸ್ ಆಗಿದೆ.
ಈಗಾಗಲೇ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಚರಣೆ ನಡೆಸುತ್ತಿದೆ. ಇದರ ಮಧ್ಯೆ ಉಕ್ರೇನ್ ತನ್ನ ಭದ್ರತೆಗಾಗಿ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ಸಾವಿರಾರು ಭಾರತೀಯರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ಸ್ವದೇಶಕ್ಕೆ ಬರಲು ಕಾಯುತ್ತಿದ್ದಾರೆ.
Advertisement
Advertisement
ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಗ್ಗೆ ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವಂತೆ ತನ್ನ ಸೇನೆಗೆ ಪುಟಿನ್ ಸೂಚನೆ ನೀಡಿದ್ದಾರೆ. ಸೂಚನೆ ಬೆನ್ನಲ್ಲೇ ರಷ್ಯಾ ಸೇನೆಯು ವೈಮಾನಿಕ ದಾಳಿ ನಡೆಸಿದೆ. ಇದರಿಂದಾಗಿ ಉಕ್ರೇನ್‍ನ ಪೂರ್ವ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಚರಣೆ ನಡೆಯುತ್ತಿರುವುದರಿಂದ, ಎಲ್ಲಾ ವಾಣಿಜ್ಯ ವಿಮಾನಗಳು ಹೆಚ್ಚಿನ ಅಪಾಯದಲ್ಲಿವೆ. ಈ ಹಿನ್ನೆಲೆಯಲ್ಲಿ ಆದರೆ ಉಕ್ರೇನ್‍ಗೆ ಹೋಗುವ ಎಲ್ಲಾ ವಿಮಾನಗಳಿಗೆ ಏರ್‌ಮೆನ್‍ಗಳಿಗೆ ಸರ್ಕಾರ ಸೂಚನೆಯನ್ನು ನೀಡಿದ ನಂತರ ಏರ್ ಇಂಡಿಯಾ ವಿಮಾನವು ದೆಹಲಿಗೆ ವಾಪಾಸಾಗಲು ನಿರ್ಧರಿಸಿತು. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
Advertisement
Advertisement
ಈಗಾಗಲೇ ಉಕ್ರೇನ್‍ನಲ್ಲಿರುವ ಪ್ರಜೆಗಳಿಗೆ ಭಾರತವು 24 ಗಂಟೆಗಳ ಕಾಲ ಸಹಾಯವಾಣಿಯನ್ನು ತೆರೆದಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ
ಜುಲೈ 2014ರಲ್ಲಿ ಮಲೇಷ್ಯಾ ಏರ್‍ಲೈನ್ಸ್ ವಿಮಾನವನ್ನು ಹೊಡೆದುರುಳಿಸಲಾಯಿತು. ಉಕ್ರೇನ್‍ನ ಸಶಸ್ತ್ರ ಪಡೆಗಳು ಮತ್ತು ರಷ್ಯಾದ ಪರ ಪ್ರತ್ಯೇಕತಾವಾದಿಗಳ ನಡುವಿನ ಯುದ್ಧದಲ್ಲಿ ವಿಮಾನದಲ್ಲಿದ್ದ ಎಲ್ಲಾ 298 ಜನರು ಸಾವನ್ನಪ್ಪಿದರು.