ಲಂಡನ್: ಬ್ರಿಟನ್ ಸಂಸತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ (UK General Elections) ವಿರೋಧ ಪಕ್ಷವಾದ ಲೇಬರ್ ಪಾರ್ಟಿಗೆ (Labour Party) ಭರ್ಜರಿ ಜಯ ಸಿಗುವ ಆರಂಭಿಕ ಲಕ್ಷಣಗಳು ಕಾಣಿಸುತ್ತಿದ್ದು, ಪ್ರಧಾನಿ ರಿಷಿ ಸುನಕ್ (Rishi Sunak) ಅವರ ಕನ್ಸರ್ವೇಟಿವ್ ಪಕ್ಷಕ್ಕೆ (Conservative Party)ಹೀನಾಯ ಸೋಲಾಗುವ ಸಾಧ್ಯತೆಯಿದೆ.
ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತಪತ್ರಗಳ ಮೂಲಕ ಚುನಾವಣೆ ನಡೆದಿದ್ದು ಮತ ಎಣಿಕೆ ಆರಂಭವಾಗಿದೆ. ಇಂದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಗಲಿದ್ದು ಚುನಾವಣಾ ಸಮೀಕ್ಷೆಗಳು 13 ವರ್ಷಗಳಿಂದ ಅಧಿಕಾರದಲ್ಲಿರುವ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲಾಗಬಹುದು ಎಂದು ಭವಿಷ್ಯ ನುಡಿದೆ.
Advertisement
ಮತ ಎಣಿಕೆ ಟ್ರೆಂಡ್ ಪ್ರಕಾರ 14 ವರ್ಷಗಳ ಬಳಿಕ ಭರ್ಜರಿ ಜಯದೊಂದಿಗೆ ಲೇಬರ್ ಪಾರ್ಟಿ ಅಧಿಕಾರಕ್ಕೆ ಮರಳುವ ಸಾಧ್ಯತೆಯಿದೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಪ್ರಸ್ತುತ 60 ಸ್ಥಾನಗಳಲ್ಲಿ ಮುಂದಿದೆ, ಆದರೆ ರಿಷಿ ಸುನಕ್ ಅವರ ಪಕ್ಷವು ಕೇವಲ 4 ಸ್ಥಾನಗಳನ್ನು ಗೆದ್ದಿದೆ. 650 ಸದಸ್ಯರ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತಕ್ಕೆ 326 ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ. ಇದನ್ನೂ ಓದಿ: ರೈತರಿಗೆ ಕೋಚಿಮುಲ್ ಬಿಗ್ ಶಾಕ್ – ಹಾಲು ಉತ್ಪಾದಕರಿಗೆ 2 ರೂ. ಕಡಿತ
Advertisement
ಚುನಾವಣೋತ್ತರ ಸಮೀಕ್ಷೆಗಳು ಲೇಬರ್ ಪಕ್ಷ 410 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ. ಇನ್ನೂ ಆರು ತಿಂಗಳು ಅಧಿಕಾರವಧಿ ಇದ್ದರೂ ಅವಧಿಪೂರ್ವ ಚುನಾವಣೆಗೆ ಹೋಗುವ ಮೂಲಕ ರಿಷಿ ಸುನಕ್ ಅಚ್ಚರಿ ನಿರ್ಧಾರ ಕೈಗೊಂಡಿದ್ದರು.
Advertisement